ಮದುವೆ ಮಂಟಪದಲ್ಲಿ ವರನು ವಧುವಿನ ಜೊತೆಗೆ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಫುಲ್ ಗರಂ! ಭಾವಿ ಪತ್ನಿಯ ಜೊತೆಗೆ ಪತಿ ಮಾಡಿದ್ದೇನು ನೋಡಿ..

ಸೋಶಿಯಲ್ ಮೀಡಿಯಾಗಳಲ್ಲಿ ಮದುವೆಯ ವಿಡಿಯೋಗಳು ಒಂದರ ನಂತರ ಒಂದು ಬಂದೇ ಬರುತ್ತಿವೆ. ಮದುವೆಗಳಲ್ಲಿ ಘಟಿಸಿದ ಅನೇಕ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಖುಷಿ ನೀಡಿದರೆ ಕೆಲವು ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಕೋಪ ತರಿಸುತ್ತಿವೆ.

ಈ ರೀತಿಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ಸಿಟ್ಟು ತರಿಸುತ್ತಿದೆ. ಏಕೆಂದರೆ ವರನು ಮದುವೆಯ ಮಂಟಪದಲ್ಲಿ ತನ್ನ ಜೀವನ ಸಂಗಾತಿಯಾಗುವವಳ ಜೊತೆಗೆ ನಡೆದುಕೊಂಡ ನಡತೆಯು ನೇಟಿಜನ್ಸ್ ಗಳಿಗೆ ಸ್ವಲ್ಪವೂ ಸರಿ ಎನಿಸಿಲ್ಲ. ಹೇಗೆ ನೋಡಿ.

ಪ್ರತಿಯೊಂದು ಜೋಡಿಗಳು ತಮ್ಮ ಮದುವೆಯ ಸಿಹಿ ನೆನಪುಗಳು ಚಿರಕಾಲ ನೆನಪಿನಲ್ಲಿ ಉಳಿಯಬೇಕೆಂದು ಆಸೆ ಪಡುತ್ತಾರೆ. ಅದೇ ರೀತಿ ವಧು ವರರು ಮದುವೆಯಲ್ಲಿ ಗ್ರ್ಯಾಂಡ್ ಎಂಟ್ರಿ ಮಾಡಬೇಕೆಂಬ ಆಸೆ ಹೊಂದಿರುತ್ತಾರೆ. ಇದೇ ರೀತಿಯ ಆಸೆಗೆ ಮಾರು ಹೋಗಿ ಮದುವೆಗೆ ಮುನ್ನ ಕಲ್ಯಾಣ ಮಂಟಪವನ್ನು ಹತ್ತುವ ಅಥವಾ ಏರುವ ಸಂದರ್ಭದಲ್ಲಿ ವರ ಅಥವಾ ತನ್ನ ಬಾವಿ ಗಂಡ ಕೈಹಿಡಿದು ಮೇಲೆ ಏರಿಸಿ ಕೊಳ್ಳಬೇಕೆಂಬ ಸ್ಟೈಲ್ ನಲ್ಲಿ ವಧು ವರನಿಗೆ ಕೈನೀಡಿ ನಿಂತಿದ್ದಾಳೆ. ಆಗ ವರ ಮಹಾಶಯ ತನ್ನ ಹೆಂಡತಿಗೆ ಮೆಲ್ಲನೆ ಕಾಳಜಿಯಿಂದ ಮೇಲೆ ಏರಿಸಿಕೊಳ್ಳುವ ಬದಲಾಗಿ ಆಕೆಯ ಕೈಯನ್ನು ಹಿಡಿದು ಹಠಾತ್ತನೆ ಮೇಲೆ ಜಗ್ಗಿದ್ದಾನೆ. ವರನು ಹೀಗೆ ಮಾಡುತ್ತಾನೆ ಎಂಬುದರ ಯಾವುದೇ ರೀತಿಯ ಕಿಂಚಿತ್ತೂ ಅರಿವು ಇಲ್ಲದ ವಧು ಒಮ್ಮೆಲೆ ಸ್ಟೇಜ್ ಮೇಲೆ ಮುಖ ಕೆಳಗೆ ಮಾಡಿ ಬಿದ್ದಿದ್ದಾಳೆ.

ನೋಡಿ ಈ ವಿಡಿಯೋ..

ಈ ವಿಡಿಯೋವನ್ನು bhutni_ke_memes ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ವರನು ವಧುವಿನ ಜೊತೆಗೆ ನಡೆದುಕೊಂಡ ಅಮಾನವೀಯತೆಯ ಬಗ್ಗೆ ಸಿಟ್ಟಾಗಿ ಆ ವರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.