ಮದುವೆ ಹುಚ್ಚಿನಲ್ಲಿ 4 ಜನ ಹುಡುಗರ ಜೊತೆ ಓಡಿ ಹೋದ ಸುಂದರಿ: ಕಡೆಗೆ ತಾಳಿ ಕಟ್ಟಿಸಿಕೊಳ್ಳೋದು ಯಾರಿಂದ ಅಂದಾಗ ಆಯ್ತು ಫಜೀತಿ!
ತರುಣಿಯೊಬ್ಬಳು ಮದುವೆ ಮಾಡಿಕೊಳ್ಳಲು ಒಬ್ಬ, ಇಬ್ಬರಲ್ಲ ನಾಲ್ಕು ಯುವಕರ ದಂಡಿನ ಜೊತೆಗೆ ಮನೆ ಬಿಟ್ಟು ಓಡಿ ಹೋದಳು. ತಾಳಿ ಕಟ್ಟುವಾಗ ಗಂಡನೆಂದು ಯಾರಿಗೆ ಆಯ್ಕೆ ಮಾಡುವದು ಎಂಬ ಸಮಸ್ಯೆಯಲ್ಲಿ ಸಿಲುಕಿದಳು. ಕೊನೆಗೆ ಅಪರೂಪದ ಪದ್ಧತಿಯ ಮುಖಾಂತರ ಪತಿಯ ಆಯ್ಕೆ ಮಾಡಲಾಯಿತು. ಈ ಎಲ್ಲ ವಿಶೇಷ ಕಾರಣಗಳಿಂದ ಈ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.
ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಿಂದ ದಾಖಲಾಗಿದೆ. ‘ಲೈವ್ ಹಿಂದೂಸ್ತಾನ್’ ಪತ್ರಿಕೆ ನೀಡಿದ ವರದಿಯ ಪ್ರಕಾರ ಅಜೀಮ್ ನಗರ ಪರಿಸರದಲ್ಲಿಯ ನಾಲ್ಕು ತರುಣರ ಜೊತೆಗೆ ತರುಣಿಯೊಬ್ಬಳು ಮನೆಯನ್ನು ತೊರೆದು ಓಡಿ ಹೋದಳು. ಓಡಿಸಿಕೊಂಡು ಹೋದ ತರುಣರು ತರುಣಿಯನ್ನು ಎರಡು ದಿನಗಳವರೆಗೆ ತಮ್ಮ ಸಂಬಂಧಿಕರ ಮನೆಯಲ್ಲಿ ಗುಪ್ತವಾಗಿ ಬಚ್ಚಿಟ್ಟಿದ್ದರು. ಸಂಬಂಧಿಕರಿಗೆ ಸತ್ಯ ಘಟನೆ ಗೊತ್ತಾದ ಮೇಲೆ ಆಕೆಯನ್ನು ಆಕೆಯ ಊರಿಗೆ ಮರಳಿ ಕಳುಹಿಸಿದರು.
ಆನಂತರ ಹುಡುಗಿಯ ತಂದೆ ಪೊಲೀಸರಲ್ಲಿ ತಕರಾರು ದಾಖಲಿಸುವ ಬಗ್ಗೆ ವಿಚಾರ ಮಾಡಿದಾಗ ಊರಿನ ಹಿರಿಯರು ತರುಣಿಯ ತಂದೆಯನ್ನು ತಡೆದರು. ಮತ್ತು ಈ ಪ್ರಕರಣವನ್ನು ಊರಲ್ಲಿಯೇ ಬಗೆಹರಿಸಿ ಬಿಡಲು ಪಂಚಾಯಿತಿಯನ್ನು ಕರೆದರು.

ಎಲ್ಲವನ್ನೂ ಆಲಿಸಿದ ಪಂಚಾಯಿತಿ ಕೊನೆಗೆ ನಾಲ್ವರಲ್ಲಿ ಯಾರೇ ಒಬ್ಬನನ್ನು ತರುಣಿಯ ಜೊತೆಗೆ ಮದುವೆ ಮಾಡಿಕೊಳ್ಳಲು ಸೂಚನೆ ನೀಡಿತು. ಆದರೆ ನಾಲ್ವರಲ್ಲಿ ಯಾರೊಬ್ಬನು ಆಕೆಯ ಜೊತೆಗೆ ಮದುವೆಗೆ ಒಪ್ಪಲಿಲ್ಲ. ಈ ಸಮಸ್ಯೆಯಿಂದ ಏನಾದರೂ ಮಾರ್ಗ ಹುಡುಕುವ ಉದ್ದೇಶದಿಂದ ಪಂಚಾಯಿತಿ ಸತತ ಮೂರು ದಿವಸಗಳ ವರೆಗೆ ಈ ವಿಷಯದ ಮೇಲೆ ಚರ್ಚೆ ಮಾಡಿತು. ಆದರೆ ಯಾರ ಜೊತೆಗೆ ಮದುವೆಯಾಗಬೇಕು ಎಂಬುದರ ಬಗ್ಗೆ ತರುಣಿಗೂ ಏನು ತಿಳಿಯದೆ ಆಕೆಯು ಫುಲ್ ಕನ್ಫ್ಯೂಜ್ ಆಗಿದ್ದಳು. ಕೊನೆಗೆ ಪಂಚಾಯಿತಿಯು ತರುಣರ ಹೆಸರಿನ ಚೀಟಿ ಬರೆದು ಪತಿಯ ಆಯ್ಕೆ ಮಾಡಲು ನಿರ್ಧರಿಸಿತು. ಆ ಪ್ರಕಾರ ಊರಲ್ಲಿಯ ಒಂದು ಚಿಕ್ಕ ಮಗುವಿನಿಂದ ಹಾರಿಸಿದ ಚೀಟಿಗಳಲ್ಲಿ ಒಂದನ್ನು ಆಯ್ಕೆ ಮಾಡಲು ಹೇಳಿದರು. ಕೊನೆಗೆ ಚೀಟಿಯಲ್ಲಿ ಆಯ್ಕೆಯಾದ ತರುಣನ ಜೊತೆಗೆ ಮದುವೆ ಮಾಡಿದರು.