ಮದುವೇನೋ ಅಥವಾ ಸಾವೋ ಅಂತ ಒಂದು ತಿಳಿಯದೇ ದಿ#ಗ್ಭ್ರಮೆಗೊಂಡ ಮದುಮಗ, ಈ ವಿಚಿತ್ರ ವಿಡಿಯೋ ನೋಡಿ!!!

ಮದುವೆ ಬದುಕನ್ನು ಒಂದು ಸುಂದರ ಮಹಲನ್ನಾಗಿ ನಿರ್ಮಾಣ ಮಾಡಿಕೊಳ್ಳಲು ಹಾಕುವ ಒಂದು ಬುನಾದಿ. ಲೌಕಿಕ ಹಾಗೂ ಅಲೌಕಿಕದಲ್ಲೂ ನಮಗೆ ಉನ್ನತ ಮಟ್ಟದ ಜೀವನ ಮಾಡಲು ಸಹಾಯ ಮಾಡುವ ಸಪೋರ್ಟ್‌ ಸಿಸ್ಟಮ್‌. ನಮ್ಮ ಜೀವನದಲ್ಲಿ ಕಾಮದ ಮೆಟ್ಟಿಲನ್ನು ಹತ್ತಿ ಪ್ರೇಮದ ಪರಮಾವಧಿಯನ್ನು ತಲುಪಿಸಿ, ಪ್ರೇಮವೇ ಮತ್ತೆ ಮತ್ತೆ ಗೆಲ್ಲುವಂತೆ ಮಾಡಿ ‘ಪ್ರೇಮವೇ ದೇವರು’ ಎಂದು ಹೇಳಿಕೊಡುವ ಗುರು.

ಇಷ್ಟೇ ಸಂಬಳ ಬರುವ ಹುಡುಗ ಬೇಕು, ಹುಡುಗಿ ಇಷ್ಟೇ ತೆಳ್ಳಗೆ ಬೆಳ್ಳಗೆ ಇರಬೇಕು, ಹೀಗೇ ಇನ್ನೂ ಏನೇನೋ ವ್ಯವಾಹಾರಿಕ ದೃಷ್ಟಿಯಲ್ಲಿ ಹುಡುಕಿ ಮದುವೆಯಾಗಿ, ಜೀವನದಲ್ಲಿ ನನಗಿನ್ನೇನೋ ಬೇಕಿತ್ತು ಎಂದು ಕೊರಗುವ, ಈ ಪ್ರಪಂಚದಲ್ಲಿ, ಈ ರೀತಿಯ ವೇದಾಂತವಾಡಿದರೆ ವಿಚಿತ್ರವೆನಿಸಬಹುದೇನೋ.. ಹಾಗಂತ ಆಸೆಗಳ ವಿರುದ್ಧ ಹೋಗಬೇಕು ಎಂದಲ್ಲ. ಆದರೆ ನನಗೆ ಜೀವನದಲ್ಲಿ ಬೇಕಿರುವುದು ಏನು, ಕೊನೆಯವರೆಗೂ ಉಳಿಯುವುದು ಏನು, ಜೀವನಕ್ಕೆ ಪೂರಕವಾದುದು ಏನು, ಆತ್ಮಕ್ಕೆ ಮುದಕೊಡುವ ಸಂಗತಿಗಳೇನು ಎಂದು ತಿಳಿದು ಮದುವೆಯಾಗುವುದು ಎಲ್ಲಕ್ಕಿಂತ ಮುಖ್ಯ.

ಆದರೆ ಇಂದಿನ ಹುಡುಗ ಮತ್ತು ಹುಡುಗಿ ತಮಗೆ ಬೇಕಾದ ವ್ಯಕ್ತಿಯನ್ನು ಹಾಗೂ ಆತನಿಗೆ ಇರಬೇಕಾದ ಅರ್ಹತೆಗಳನ್ನು ಗಮನಿಸಿ ಮದುವೆಯಾಗಬೇಕು ಎಂದು ಕನಸ್ಸನ್ನು ಹೊತ್ತಿರುತ್ತಾರೆ ಕ್ರಮೇಣ ಕನಸ್ಸು ಪೂರ್ಣ ಮಾಡಿಕೊಳ್ಳುವ ಸಲುವಾಗಿ ಎಷ್ಟೋ ವರ್ಷಗಳು ಗತಿಸಿ ಹೋಗುತ್ತವೆ ಆದರೆ ಅವರ ಕನಸ್ಸಿನ ಹುಡುಗ ಅಥವಾ ಹುಡುಗಿ ಸಿಗುವದಿಲ್ಲ ಕೆಲವೊಬ್ಬರ ಹಣೆಬರಹದಲ್ಲಿ ಅವರು ಬಯಸ್ಸಿದ್ದಕ್ಕಿಂತ ಉತ್ತಮ ಗಂಡ/ಹೆಂಡತಿ ಸಿಗುತ್ತಾರೆ. ಇದು ಅವರ ಭಾಗ್ಯ ಅನ್ನಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವೀಡಿಯೋ ತುಂಬಾನೇ ವೈರಲ್ ಆಗುತ್ತಿವೆ. ಸದ್ಯಕ್ಕೆ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ಪ್ರಸ್ತುತ ವೀಡಿಯೋ ನೋಡಿದರೆ ನೀವು ನಗದೆ ಇರಲಾರಿರಿ. ಏಕೆಂದರೆ ಇಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆಯೋ ಅಥವಾ ಸಾವಿನ ಶೋಕ ನಡೆಯುತ್ತಿದೆ ಅಂತ ಒಂದು ಅರ್ಥವಾಗೋದೇ ಇಲ್ಲ. ಹೀಗಾಗಿ ಇಲ್ಲಿ ಮದುವೆ ಮಾಡಿಕೊಳ್ಳಲು ಬಂದ ಪತಿ ಸಹ ಏನು ಅರಿಯದೇ ದಿ#ಗ್ಭ್ರಮೆಗೊಳ್ಳುತ್ತಾನೆ.

ಸಾಮಾನ್ಯವಾಗಿ ಮದುವೆಯಾದ ನಂತರ ಹೆಣ್ಣು ತನ್ನ ಹುಟ್ಟಿದ ಮನೆ ಬಿಟ್ಟು ಗಂಡನ ಮನೆಗೆ ಹೋಗುವದು ಸರ್ವಸಮಾನ್ಯ ಮಾತಾಗಿದೆ. ಮದುವೆಯ ದಿನದಂದು ಕೊನೆಯ ಸಮಯದಲ್ಲಿ ಅಂದರೆ ಹುಡುಗಿಯ ಎಲ್ಲ ಬಂಧು ಬಾಂಧವರು ಬಿಟ್ಟು ಹೋಗುವಾಗ ಮದುಮಗಳು ದುಃಖ ಪಡುವದು ನಾವೆಲ್ಲರೂ ನೋಡಿದ್ದೇವೆ ಆದರೆ ಈ ವಿಡಿಯೋದಲ್ಲಿ ಮಾತ್ರ ಮದುಮಗಳು ಮತ್ತು ಆಕೆಯ ಸಂಬಂಧಿಕರು ದುಃಖ ಪಡುವ ಪರಿಯನ್ನು ನೋಡಿದರೆ ಆಶ್ಚರ್ಯ ವಾಗುತ್ತೆ. ಏಕೆಂದರೆ ಆಕೆಯನ್ನು ತಬ್ಬಿಕೊಂಡು ಸತ್ತಾಗ ಹೇಗೆ ಗೋಳಾಡುತ್ತಾ ಅಳುತ್ತಾರೆಯೋ ಹಾಗೆ ಕೂಡಾ ಮದುಮಗಳು ಮತ್ತು ಆಕೆಯ ಸಹೋದರಿ ಅಳುತ್ತಾರೆ. ಇದನ್ನು ಕಂಡು ಅಲ್ಲಿಯ ಜನ ಇಬ್ಬರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡುತ್ತಾರೆ ಆದರೂ ಸಹ ಅವರು ನೆಲದ ಮೇಲೆ ಬಿದ್ದು ಜೋರಾಗಿ ಗೋಳಾಡುತ್ತಾ ಅಳುತ್ತಾರೆ ಇದನ್ನು ಕಂಡು ಮದುಮಗ ಸಹ ಆಶ್ಚರ್ಯ ಪಡುತ್ತಾನೆ.

ವಿಡಿಯೋ ನೋಡೀ