ಮದ್ಯ ದೊರೆ ವಿಜಯ್ ಮಲ್ಯ ಅವರ ಮೂವರು ಹೆಂಡತಿಯರು ಏನು ಮಾಡುತ್ತಾರೆ ಮತ್ತು ಅವರ ಆದಾಯದ ಮೂಲ ಯಾವುದು?

ಮದ್ಯದ ದೊರೆ, ಭಾರತದ ಬ್ಯಾಂಕ್ ಗಳಲ್ಲಿ ಸಹಸ್ರಾರು ಕೋಟಿಗಳ ಸಾಲವನ್ನು ಮಾಡಿ ದೇಶದಿಂದ ಪರಾರಿಯಾದ ವಿಜಯ್ ಮಲ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆಗಾಗ ಒಂದಲ್ಲಾ ಒಂದು ಸುದ್ದಿಯ ವಿಜಯ್ ಮಲ್ಯ ಬಗ್ಗೆ ಬರ್ತಾನೆ ಇರುತ್ತೆ ಕೂಡಾ. ಪರಾರಿಯಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಮಾಡ್ತಾ ಇರೋ ಬಗ್ಗೆ ಕೂಡಾ ಸುದ್ದಿಗಳು ಬರ್ತಾನೆ ಇರುತ್ತೆ. ಆದರೆ ನಾವು ಇವತ್ತು ವಿಜಯ್ ಮಲ್ಯಾರ ಇಂತಹ ಯಾವುದೇ ಕಾನೂನು, ಸಾಲ, ಅವರ ಮೇಲೆ ತಗೊಂಡಿರೋ ಕ್ರಮಗಳ ಬಗ್ಗೆ ಮಾತಾಡೋದಿಲ್ಲ. ಬದಲಿಗೆ ವಿಜಯ್ ಮಲ್ಯ ಅವರ ಕಲರ್ ಫುಲ್ ಜೀವನದಲ್ಲಿ ಬಂದು ಹೋದ ಅವರ ಮೂರು ಜನ ಪತ್ನಿಯರ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ.

ಸಮೀರಾ ವಿಜಯ ಮಲ್ಯ

ವಿಜಯ್ ಮಲ್ಯ ಅವರ ಮೊದಲ ಪತ್ನಿಯ ಹೆಸರು ಸಮೀರಾ. ಈಕೆ ವಿಮಾನದಲ್ಲಿ ಗಗನ ಸಖಿ(ಏಕ್ ಹೋಸ್ಟೆಸ್) ಆಗಿದ್ದವರು. ಒಮ್ಮೆ ವಿಜಯ್ ಮಲ್ಯ ಏರ್ ಇಂಡಿಯಾ ವಿಮಾನದಲ್ಲಿ ಭಾರತದಿಂದ ಅಮೆರಿಕಾಕ್ಕೆ ವಿಮಾನ ಯಾನ ಮಾಡುವ ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ಸಮೀರಾ ಅವರನ್ನು ಭೇಟಿಯಾದರು. ಮೊದಲ ಭೇಟಿಯಲ್ಲೇ ಹತ್ತಿರವಾದರು, ಅನಂತರ ಅವರ ಮಧ್ಯೆ ಪ್ರೀತಿ ಬೆಳೆದು ಮಲ್ಯ 1986 ರಲ್ಲಿ ಸಮೀರಾರನ್ನು ಮದುವೆಯಾದರು, ಆದರೆ ಮದುವೆಯಾದ ವರ್ಷದ ನಂತರ ಕಾರಣಾಂತರಗಳಿಂದ ಇವರ ನಡುವೆ ವಿಚ್ಛೇದನ ಆಯಿತು. ವಿಜಯ್ ಮಲ್ಯ ಮತ್ತು ಸಮೀರಾ ಗೆ ಸಿದ್ಧಾರ್ಥ್ ಮಲ್ಯ ಎಂಬ ಮಗನಿದ್ದಾನೆ.

ರೇಖಾ ವಿಜಯ ಮಲ್ಯ

ಸಿದ್ಧಾರ್ಥ್ ಮಲ್ಯ ತಂದೆಯ ವ್ಯವಹಾರ ನೋಡಿಕೊಳ್ಳುವುದು ಮಾತ್ರವೇ ಅಲ್ಲದೇ ತನ್ನದೇ ಕಂಪನಿಗಳಿವೆ ಎನ್ನಲಾಗಿದೆ. ಇನ್ನು ಸಮೀರಾ ವಿಚ್ಛೇದನದ ನಂತರ ಮರು ಮದುವೆ ಆಗಿಲ್ಲ ಹಾಗೂ ಭಾರತದಲ್ಲೇ ನೆಲೆಸಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ವಿಜಯ್ ಮಲ್ಯ ಅವರು ಕೆಲವು ವರ್ಷಗಳ ನಂತರ ತಮ್ಮ ಶಾಲಾ‌ ದಿನಗಳ ಗೆಳತಿ ರೇಖಾರನ್ನು ಭೇಟಿಯಾದರು. ರೇಖಾ ಅದಾಗಲೇ ಎರಡು ಮದುವೆ ಆಗಿ,‌ಮಕ್ಕಳು ಕೂಡಾ ಇದ್ದರು. ಆದರೂ ಮಲ್ಯ ರೇಖಾರ ನಡುವೆ ಪ್ರೀತಿಯಾದ ಕಾರಣ ವಿಜಯ್ ಮಲ್ಯ ರೇಖಾರನ್ನು ಮದುವೆಯಾದರು. ಆಕೆಯ ಮಕ್ಕಳನ್ನು ದತ್ತು ಪಡೆದರು.

ರೇಖಾ ಹಾಗೂ ವಿಜಯ್ ಮಲ್ಯರಿಗೆ ಇಬ್ಬರು ಹೆಣ್ಣು ಮಕ್ಕಳಾದವು. ರೇಖಾ ಹಾಗೂ ಅವರ ಮಕ್ಕಳು ಲಂಡನ್ ನಲ್ಲಿ ನೆಲೆಸಿದ್ದಾರೆ. ಹೀಗೆ ಕೆಲವು ವರ್ಷಗಳು ಜೊತೆಗಿದ್ದ ವಿಜಯ್ ಮಲ್ಯ ಹಾಗೂ ರೇಖಾ ಕೂಡಾ ಕಾರಣಾಂತರಗಳಿಂದ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಕೂಡಾ ಇಬ್ಬರು ಆಗಾಗ ಭೇಟಿಯಾಗುತ್ತಾರೆ. ಆದರೆ ವಿಜಯ್ ಅವರ ಎರಡನೆಯ ಮದುವೆ ಕೂಡಾ ಯಶಸ್ವಿಯಾಗಲಿಲ್ಲ. ಇನ್ನು ಪ್ರಸ್ತುತ ಮಲ್ಯ ಅವರ ಹೆಸರು ಪಿಂಕಿ ಲಾಲ್ ವಾನಿ ಎನ್ನುವ ಮಹಿಳೆಯ ಜೊತೆ ತಳಕು ಹಾಕಿಕೊಂಡಿದ್ದು , ಆಕೆ ಮಲ್ಯ ಅವರ ಮೂರನೇ ಪತ್ನಿ ಎನ್ನಲಾಗಿದೆ.

ಪಿಂಕಿ ವಿಜಯ್ ಮಲ್ಯ

ಪಿಂಕಿ ಕೂಡಾ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್ ನಲ್ಲಿ ಗಗನ ಸಖಿಯಾಗಿದ್ದವರು. ನಂತರ ಮಲ್ಯ ಅವರ ಜೀವನದಲ್ಲಿ ಕೂಡಾ ಸ್ಥಾನವನ್ನು ಪಡೆದವರು ಈಕೆ. ಪಿಂಕಿ ಪ್ರಸ್ತುತ ಲಂಡನ್ ನಲ್ಲಿ ವಿಜಯ್ ಮಲ್ಯ ಜೊತೆ ಆತನ ಐಶಾರಾಮೀ ಬಂಗಲೆಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಪಿಂಕಿ ಮಲ್ಯರ ಕೆಲವು ಕಂಪನಿಗಳಲ್ಲಿ ಪಾರ್ಟ್ನರ್ ಮಾತ್ರವೇ ಅಲ್ಲದೇ ತಾನೇ ಕೆಲವು ಕಂಪನಿಗಳನ್ನು ಕೂಡಾ ನಡೆಸುತ್ತಿದ್ದು, ಲಂಡನ್ ನ ಕೋರ್ಟ್ ನಿಂದ ಈಕೆಗೆ ಬರುವ ಆದಾಯವೇ ವಾರ್ಷಿಕ 1.5 ಕೋಟಿ ಎನ್ನಲಾಗಿದೆ.

ಒಟ್ಟಾರೆ ವಿಜಯ್ ಮಲ್ಯ ಅವರ ಕುಟುಂಬ ಒಂದು ದೊಡ್ಡ ಕುಟುಂಬ. ಅದರಲ್ಲಿ ಮೊದಲ ಪತ್ನಿ ಮಾತ್ರ ಭಾರತದಲ್ಲಿ ಇದ್ದಾರೆ. ಉಳಿದಂತೆ ಮಲ್ಯ ಅವರ ತಾಯಿ, ಮೊದಲನೇ ಪತ್ನಿಯ ಮಗ ಸಿದ್ಧಾರ್ಥ್ ಮಲ್ಯ, ಎರಡನೇ ಪತ್ನಿ ಮತ್ತು ಆಕೆಯ ಮೂರು ಜನ ಹೆಣ್ಣು ಮಕ್ಕಳು, ಮೂರನೇ ಪತ್ನಿ ಕೂಡಾ ಲಂಡನ್ ನಲ್ಲೇ ಇದ್ದಾರೆ. ವಿಜಯ್ ಮಲ್ಯ ಜೊತೆ ಇರುವುದು ಪಿಂಕಿ ಲಾಲ್ ವಾನಿ. ಇನ್ನು ಮಗ ಮತ್ತು ಮೂರು ಜನ ಹೆಣ್ಣು ಮಕ್ಕಳು ಮಲ್ಯರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.