ಮಧ್ಯರಾತ್ರಿಯಲ್ಲಿ, ತೋಟದ ಮನೆಯ ಗೋಡೆಯಿಂದ ಬರುತ್ತಿತ್ತು ವಿಚಿತ್ರ ಸದ್ದು, ಗೋಡೆ ಒಡೆದಾದ ಸತ್ಯ ತಿಳಿದು ಮನೆ ಬಿಟ್ಟು ಓಡಿದ ದಂಪತಿ
ಆಸ್ತಿಯ ಮೇಲೆ ಬಂಡವಾಳ ಹೂಡುವುದು ಬಹಳಷ್ಟು ಜನರ ಮೊದಲ ಆದ್ಯತೆಯಾಗಿರುತ್ತದೆ. ಜನರು ತಾವು ಉಳಿತಾಯ ಮಾಡಿದಂತಹ ಹಣದಿಂದ ತಮ್ಮ ಸುಂದರವಾದ ಕನಸಿನಂತಹ ಮನೆಯೊಂದನ್ನು ಕೊಳ್ಳುವುದು ಸಾಮಾನ್ಯವಾದ ವಿಷಯವಾಗಿದೆ. ಹೇಗೋ ಕಷ್ಟಪಟ್ಟು ಉಳಿತಾಯ ಮಾಡಿ ಮನೆಯೊಂದನ್ನು ಖರೀದಿ ಮಾಡಿದ ನಂತರ ತಮಗೆ ಮೋಸ ಆಗಿದೆ ಎಂದು ತಿಳಿದಾಗ ಅಂತಹವರಿಗೆ ಆಗುವ ಆಘಾತ ನಿಜಕ್ಕೂ ಊಹೆಗೂ ಮೀರಿದ್ದು ಎಂದು ಹೇಳಬಹುದು. ಇಂತಹದೊಂದು ವಂಚನೆಯ ಪ್ರಕರಣವು ಪೆನ್ಸಿಲ್ವೇನಿಯಾದ ದಂಪತಿ ಒಬ್ಬರಿಗೆ ನಡೆದಿದೆ. ಈ ದಂಪತಿಯು ತಮ್ಮ ಜೀವನದ ಉಳಿತಾಯದ ಹಣದಿಂದ ಸುಮಾರು 149 ವರ್ಷಗಳಷ್ಟು ಹಳೆಯದಾದ ಫಾರ್ಮ್ ಹೌಸ್ ಒಂದನ್ನು ಖರೀದಿ ಮಾಡಿದ್ದರು. ಆದರೆ ಅವರ ಸಂತೋಷವೂ ಹೆಚ್ಚು ಕಾಲ ಉಳಿಯಲಿಲ್ಲ. ಅವರು ಖರೀದಿಸಿದ ಹೊಸ ಮನೆಗೆ ಶಿಫ್ಟ್ ಆದರು. ಬಹಳಷ್ಟು ಕಾಲದಿಂದ ಅವರು ಅಂತಹದೊಂದು ಸ್ಥಳದಲ್ಲಿ ಮನೆಯನ್ನು ಕೊಳ್ಳಲು ಬಯಸಿದ್ದರು. ಈ ಫಾರ್ಮ್ ಹೌಸ್ ಖರೀದಿಯಿಂದ ಅವರು ತಮ್ಮ ಕನಸು ನನಸಾಯ್ತು ಎಂದುಕೊಂಡು ಹೊಸ ಮನೆಗೆ ಪ್ರವೇಶ ಮಾಡಿದರು.
ಆದರೆ ದಿನ ಕಳೆದಂತೆ ಅವರ ಸಂತೋಷ ಅವರಿಂದ ದೂರವಾಗಲು ಪ್ರಾರಂಭವಾಯಿತು. ಏಕೆಂದರೆ ರಾತ್ರಿಯಾದರೆ ಅವರಿಗೆ ಆ ಮನೆಯ ಗೋಡೆಗಳಲ್ಲಿ ಚಿತ್ರವಿಚಿತ್ರವಾದ ಶಬ್ದಗಳು ಕೇಳುತ್ತಿದ್ದವು. ಅದೆಂತಹ ಶಬ್ಧ ಎನ್ನುವುದು ಅವರಿಗೆ ಅರ್ಥವಾಗಲಿಲ್ಲ. ಅವರನ್ನು ಒಂದು ಚಿಂತೆ ಕಾಡತೊಡಗಿತು. ಕೊನೆಗೆ ದಂಪತಿ ತನಿಖಾ ತಂಡವೊಂದನ್ನು ಮನೆಗೆ ಕರೆಸಬೇಕಾಯಿತು. ಆನಂತರ ಅವರ ಮುಂದೆ ಬಹಿರಂಗವಾದ ಸತ್ಯವು ಬಹಳ ಆಘಾತಕಾರಿಯಾಗಿತ್ತು. ತನಿಖಾ ತಂಡವು ಮನೆಯ ಗೋಡೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ತಿಳಿದುಬಂದ ಸತ್ಯ ಏನೆಂದರೆ, ಆ ಮನೆಯ ಗೋಡೆಯಲ್ಲಿ ಸುಮಾರು 4 ಲಕ್ಷ ಜೇನುನೊಣಗಳು ವಾಸವಾಗಿದ್ದವು.
ಇಷ್ಟು ದೊಡ್ಡ ಪ್ರಮಾಣದ ಜೇನುನೊಣಗಳು ತಮ್ಮ ಮನೆಯ ಗೋಡೆಯಲ್ಲಿ ವಾಸಿಸುತ್ತಿರುವ ವಿಚಾರ ತಿಳಿದಾಗ ಆ ದಂಪತಿಗೆ ದಿಗ್ಬ್ರಮೆ ಹಾಗೂ ಆಘಾತ ಎರಡೂ ಉಂಟಾಗಿದೆ. ಅನಂತರ ಎಲ್ಲಾ ಜೇನುನೊಣಗಳನ್ನು ಅಲ್ಲಿಂದ ತೆಗೆದು ಹಾಕುವವರೆಗೂ ದಂಪತಿ ಮನೆಯಿಂದ ದೂರ ಉಳಿಯಬೇಕಾಯಿತು. ಈ ಘಟನೆಯ ನಂತರ ಮನೆಯ ಮಾಲೀಕಳಾದ ಮಹಿಳೆಯು ಸಂದರ್ಶನವೊಂದರಲ್ಲಿ, ಮನೆಯ ಹಳೆಯ ಮಾಲಿಕ ಮನೆಯನ್ನು ಮಾರಲು ಏಕೆ ಅಷ್ಟು ಅವಸರ ಮಾಡುತ್ತಿದ್ದರು ಎನ್ನುವುದನ್ನು ನಾವು ಆಗಲೇ ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ನಮ್ಮ ಬಜೆಟ್ನಲ್ಲಿ ಇಂತಹ ಒಂದು ದೊಡ್ಡ ಮನೆಯು ಸಿಗುತ್ತಿದೆ ಎನ್ನುವ ಆಲೋಚನೆಯಲ್ಲಿ ನಾವು ತಾಳ್ಮೆಯಿಂದ ವಿಚಾರಿಸದೆ ಮನೆಯನ್ನು ಖರೀದಿ ಮಾಡಿದೆವು. ಅನಂತರ ನಮಗೆ ಆತ ಮನೆಯನ್ನು ಅಷ್ಟು ಕಡಿಮೆ ಬೆಲೆಗೆ ಏಕೆ ಮಾರಾಟ ಮಾಡಿದ್ದಾರೆ ಎನ್ನುವುದು ಅರ್ಥವಾಯಿತು ಎಂದಿದ್ದಾರೆ.

ಮನೆಯ ಗೋಡೆಯಲ್ಲಿ ವಾಸಿಸುತ್ತಿದ್ದ 4 ಲಕ್ಷ ಜೇನು ನೋಣಗಳನ್ನು ಅಲ್ಲಿಂದ ತೆಗೆಯಲು ದಂಪತಿಯು ವೃತ್ತಿಪರ ಜೇನುಸಾಕಣೆದಾರರಾದ
ಎಲನ್ ಲಟ್ಟಂಜಿ ಅವರ ತಂಡದ ಸಹಾಯವನ್ನು ಪಡೆದುಕೊಂಡರು. ಅವರಿಂದ ಜೇನುನೊಣಗಳನ್ನು ತೆಗೆಸುವುದಕ್ಕಾಗಿ ಬರೋಬ್ಬರಿ ಎಂಟು ಲಕ್ಷ ರೂಪಾಯಿಗಳು ಖರ್ಚಾಯಿತು. ಜೇನುನೊಣಗಳನ್ನು ಅಲ್ಲಿಂದ ತೆಗೆದಂತಹ ಎಲನ್ ಅವರು, ತಾನು ನಾಲ್ಕು ವರ್ಷಗಳ ಹಿಂದೆ ಸಹಾ ಆ ಮನೆಗೆ ಬಂದಿದ್ದೆ. ಆಗ ಮನೆಯ ಹಳೆಯ ಮಾಲಿಕ ತನ್ನಲ್ಲಿ ಹಣವಿಲ್ಲದ ಕಾರಣ ಜೇನುನೊಣಗಳನ್ನು ತೆಗೆಸಲು ಒಪ್ಪಿರಲಿಲ್ಲ. ಅದಾದ ನಂತರವೇ ಆತ ಈ ದಂಪತಿಯನ್ನು ಹುಡುಕಿ, ಅವರಿಗೆ ತನ್ನ ಮನೆಯನ್ನು ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾರೆ.
ತನ್ನ ತಂಡವು ಗೋಡೆಯ ಹಿಂಭಾಗದಿಂದ ಸುಮಾರು ನಾಲ್ಕೂವರೆ ಲಕ್ಷ ಜೇನುನೊಣಗಳನ್ನು ತೆಗೆದುಹಾಕಿದೆ. ಎಂದು ಎಲನ್ ಲಟ್ಟಂಜಿ ಹೇಳಿದ್ದಾರೆ. ಅಲ್ಲಿ ಜೇನು ನೊಣಗಳು ಸುಮಾರು 35 ವರ್ಷಗಳ ಕಾಲ ವಾಸಿಸುತ್ತಿದ್ದವು ಎನ್ನಲಾಗಿದೆ. ಅವುಗಳನ್ನು ತೆಗೆದುಹಾಕಲು ಸಾಕಷ್ಟು ವೆಚ್ಚವಾಗುತ್ತದೆ ಎನ್ನುವ ಕಾರಣದಿಂದಾಗಿ ದಂಪತಿಯು ಗೋಫಂಡ್ ಪುಟವನ್ನು ರಚಿಸಿದ್ದಾರೆ. ಅವರು ಸಹಾಯಕ್ಕಾಗಿ ಜನರಿಗೆ ಮನವಿ ಮಾಡಿದ್ದರು. ಅಗ್ಗದ ಬೆಲೆಗೆ ಖರೀದಿಸಿದ ತೋಟದ ಮನೆ ಈ ದಂಪತಿಯ ಪಾಲಿಗೆ ಬಹಳ ದುಬಾರಿಯಾಗಿ ಪರಿಣಮಿಸಿದ್ದು ಮಾತ್ರ ಅಕ್ಷರಶಃ ಸತ್ಯವಾಗಿದೆ..