ಮಧ್ಯರಾತ್ರಿಯಲ್ಲಿ ರೂಪೇಶ್- ರಾಜಣ್ಣ ಫ್ರೆಂಡ್ಶಿಪ್ ಬಗ್ಗೆ ಡೀಪ್ ಡಿಷಕ್ಷನ್! ಕೊನೆಗೆ ರಿಜಲ್ಟ್ ಏನು ಬಂತು ನೋಡಿ ವೀಡಿಯೋ….!!
ಈ ವಾರದ ಮೊದಲನೆಯ ಟಾಸ್ಕ್ ನೀಡುವದಕ್ಕೂ ಮುನ್ನ ಬಿಗ್ಬಾಸ್ ಸ್ಪರ್ಧಿಗಳಿಗೆ ಒಂದು ವಿಭಿನ್ನ ಚಟುವಟಿಕೆಯನ್ನು ನೀಡಿದ್ದರು ಆ ಚಟುವಟಿಕೆ ಏನೆಂದರೆ ಪತ್ರ ಬರೆಯುವದು. ಇದೇನು ಚಟುವಟಿಕೆ ಅಂತ ನೀವು ಯೋಚನೆ ಮಾಡುತ್ತಿರಬೇಕು ಅಲ್ಲವೇ, ಈ ಪತ್ರ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಬರೆಯಬೇಕು ಅಂತ ಬಿಗ್ಬಾಸ್ ತಿಳಿಸಿದ್ದರು. ಮನೆಯಲ್ಲಿರುವ ಸ್ಪರ್ಧಿಗಳಿಗೆ ಪತ್ರ ಬರೆಯಲು ಮುಖ್ಯ ಕಾರಣ ವೇನೆಂದರೆ ಮನಸ್ಸು ಬಿಚ್ಚಿ ಹೇಳುವದು.
ಹೌದು ಈ ವಾರದ ಮೊದಲನೇ ಚಟುವಟಿಕೆಯಲ್ಲಿ ಮುಖ್ಯವಾದ ವಿಷಯ ವೇನೆಂದರೆ’ ಬಾಯಿಯಿಂದ ಹೇಳಲಾಗದ ವಿಷಯವನ್ನು ಪತ್ರದ ಮುಖಾಂತರ ಹೇಳುವದು’ ಅಂದರೆ ಯಾವುದೇ ಸ್ಪರ್ಧಿ ಮುಂದಿನ ಸ್ಪರ್ಧಿಯ ಬಗ್ಗೆ ನೇರವಾಗಿ ಸಲಹೆ ಅಥವಾ ಆತನು ಮಾಡಿದ್ದ ತಪ್ಪನ್ನು ತಿಳಿಸಲು ಸಾಧ್ಯವಾಗದೆ ಇದ್ದಾಗ ಈ ಪತ್ರದ ಮುಖಾಂತರ ನೀವು ತಿಳಿಸಬೇಕು ಎಂದು ಬಿಗ್ಬಾಸ್ ಆದೇಶ ನೀಡಿದ್ದರು. ಬಿಗಬಾಸ್ ಅವರ ಆದೇಶದಂತೆ ಪ್ರತಿಯೊಬ್ಬರೂ ಪತ್ರವನ್ನು ಬರೆದರು. ಈ ಪತ್ರ ಬರವಣಿಗೆಯ ಚಟುವಟಿಕೆಯಲ್ಲಿ ರೂಪೇಶ್ ರಾಜಣ್ಣ ಅವರು ಬರೆದ ಪತ್ರ ತುಂಬಾ ಚರ್ಚೆಯಲ್ಲಿತ್ತು.
ರಾಜಣ್ಣ ಅವರು ರೂಪೇಶ್ ಶೆಟ್ಟಿಯವರಿಗೆ ಪತ್ರ ಬರೆದಿದ್ದರು. ಇದನ್ನು ಓದಿ ರೂಪೇಶ್ ಶೆಟ್ಟಿಯವರು ಕೋಪಗೊಳ್ಳುವದರ ಜೊತೆಗೆ ಈ ಪತ್ರ ನನ್ನ ಜೀವನದಲ್ಲಿ ಬದಲಾವಣೆ ತರಲಿದೆ ಎಂದು ವ್ಯಂಗವಾಗಿ ಸಹ ನುಡಿದರು. ಅಷ್ಟಕ್ಕೂ ಈ ಪತ್ರದಲ್ಲಿದ್ದ ಬರಹ ಏನಿತ್ತೆಂದರೆ, ‘ ರೂಪೇಶ್ ನಿಮ್ಮ ನಂಬಿಕೆ ಕೇವಲ ಬಾಯಿಯಿಂದ ಬಂದರೆ ಸಾಲದು ಹೃದಯದಿಂದ ನಂಬಿಕೆ ಬರಬೇಕು, ನೀವು ಮಾತನಾಡುವ ಪ್ರತಿಯೊಂದು ಶಬ್ದದ ಕಡೆಗೆ ಲಕ್ಷ್ಯ ವಿರಲಿ, ಹದ್ದು ಮೀರಿ ಮಾತನಾಡುವ ನಿಮ್ಮ ಮಾತಿನ ಶೈಲಿ ಇನ್ನೊಬ್ಬರನ್ನು ಕುಗ್ಗಿಸುತ್ತದೆ, ಹೀಗಾಗಿ ನಿಮ್ಮ ಮಾತಿನ ಮೇಲೆ ಗಮನವಿರಲಿ, ಮಾತನಾಡುವಾಗ ದೊಡ್ಡವರು ಸಣ್ಣವರು ಅನ್ನೋ ವಿಚಾರ ಸಹ ಮಾಡಬೇಕು’ ಹೀಗೆ ಇನ್ನೂ ಎಷ್ಟೋ ಸಂಗತಿಗಳ ಕುರಿತು ರಾಜಣ್ಣ ಅವರು ತಮ್ಮ ಪತ್ರದಲ್ಲಿ ಬರೆದಿದ್ದರು.
ಈ ಪತ್ರದ ಪ್ರತ್ಯುತ್ತರವಾಗಿ ರೂಪೇಶ್ ಶೆಟ್ಟಿಯವರು ‘ನಾನು ನಿಮ್ಮನ್ನು ಅಷ್ಟೊಂದು ಫ್ರೀಯಾಗಿ ಮಾತನಾಡಲು ಮುಖ್ಯ ಕಾರಣ ಎಲ್ಲರೂ ಜೊತೆಗೆ ನಾನು ಅಕ್ಕರೆಯಿಂದ ಎಲ್ಲ ಮರ್ಯಾದೆಗಳನ್ನು ಮರೆಮಾಚಿ ನಾನು ತಮಾಷೆಯಲ್ಲಿ ಮಾತನಾಡುತ್ತೇನೆ, ಆದರೆ ಅದರ ಕುರಿತು ನೀವು ಒಂದು ಬಾರಿಯಾದರೂ ಹೇಳಲಿಲ್ಲ, ಎಲ್ಲರೆದುರು ಹೇಳದಿದ್ದರೆ ನನ್ನ ಬಳಿಯಲ್ಲಿ ಬಂದು ನನಗೆ ಕಿವಿಯಲ್ಲಿ ಹೇಳಬೇಕಿತ್ತು, ನಿಮ್ಮ ಭಾಷೆ ನನಗೆ ಇಷ್ಟವಿಲ್ಲ ನಿಮ್ಮ ಮಾತು ನನಗೆ ಹಿಡಿಸುತ್ತಿಲ್ಲ ಅಂತ ಹೇಳಬೇಕಿತ್ತು, ಅಷ್ಟಕ್ಕೂ ಇದುವರೆಗೆ ನಾನು ಮಾಡಿದ ತಪ್ಪಿಗಾಗಿ ನಾನು ಕ್ಷಮೆ ಕೇಳುತ್ತೇನೆ ಇನ್ಮುಂದೆ ಇಂತಹ ತಪ್ಪು ಮಾಡುವದಿಲ್ಲ, ಅಲ್ಲದೆ ಈ ಪತ್ರ ನನ್ನ ಜೀವನದಲ್ಲಿ ತುಂಬಾ ತರಲಿದೆ’ ಎಂದು ರೂಪೇಶ್ ಹೇಳಿದರು.
ಈ ಎಲ್ಲ ಘಟನೆ ನಡೆದ ಮೇಲೆ ರೂಪೇಶ್ ಹಾಗೂ ರಾಜಣ್ಣ ಇಬ್ಬರು ಜೊತೆಗೂಡಿ ರಾತ್ರಿ ಚರ್ಚೆ ನಡೆಸಿದರು. ತಮ್ಮಿಬ್ಬರ ನಡುವೆ ನಡೆದ ತಪ್ಪೋಪ್ಪುಗಳ ಚರ್ಚೆ ಮಾಡಿದರು. ಆದರೆ ರಾಜಣ್ಣ ಅವರು ಪದೇ ಪದೇ ರೂಪೇಶ ಅವರು ಮಾಡಿರುವ ತಪ್ಪುಗಳನ್ನು ಎತ್ತಿ ತೋರುತ್ತಿದ್ದರು. ಈ ಪ್ರತಿಯೊಂದು ಪ್ರಶ್ನೆಗೆ ರೂಪೇಶ್ ಅವರು ಉತ್ತರ ನೀಡಿದರು. ಆದರೆ ರಾಜಣ್ಣ ಎಷ್ಟೇ ಸಿಟ್ಟಿಗೆದ್ದು ಮಾತನಾಡಿದರು ಸಹ ರೂಪೇಶ್ ಅವರು ಒಂದು ಶಬ್ದ ಸಹ ಸಿಟ್ಟಾಗಿ ಮಾತನಾಡಲಿಲ್ಲ. ಅದರ ಬದಲಾಗಿ ಅವರ ವಿಚಾರ ಬದಲಾಯಿಸಲು ಕೆಲವೊಂದು ಉದಾಹರಣೆ ನೀಡಿದರು. ಕೊನೆಗೆ ರೂಪೇಶ್ ಅವರು ಯಾರು ಏನೇ ಹೇಳಿದರೂ ನಮ್ಮಿಬ್ಬರ ಸ್ನೇಹ-ಪ್ರೀತಿ ಕಡಿಮೆ ಯಾಗುವದಿಲ್ಲ ಎಂದು ರಾಜಣ್ಣನವರಿಗೆ ತಿಳಿಸಿದರು.
ವಿಡಿಯೋ ನೋಡಿ.
View this post on Instagram