ಮನೆಗೆ ಬೀಗ ಹಾಕಿಕೊಂಡು ಪರಾರಿಯಾದ ಪತಿ: ನ್ಯಾಯಕ್ಕಾಗಿ 12 ದಿನಗಳ ಕಾಲ ಮನೆ ಹೊರಗೆ ಕುಳಿತ ಪತ್ನಿ
ರಾಜಸ್ಥಾನದ ದೌಲ್ಪುರ ಜಿಲ್ಲೆಯ ಬಸೇಡಿ ಠಾಣಾ ಕ್ಷೇತ್ರದಲ್ಲಿನ ಒಂದು ಹಳ್ಳಿಯಲ್ಲಿ ವೈದ್ಯನೊಬ್ಬರು ಕಳೆದ ಹನ್ನೊಂದು ವರ್ಷದಿಂದಲೂ ನಡೆಸಿಕೊಂಡು ಬರುತ್ತಿದ್ದ ಒಂದು ಕು ಕೃ ತ್ಯ ಈಗ ಬಯಲಾಗಿದೆ. ಈ ವೈದ್ಯನು ಕಳೆದ ಹನ್ನೊಂದು ವರ್ಷದಿಂದ ಕೂಡಾ ತನ್ನ ಸಂಬಂಧಿಕರ ಅಪ್ರಾಪ್ತಳೊಬ್ಬಳ ಮೇಲೆ ದೈಹಿಕ ಶೋ” ಷ ಣೆಯನ್ನು ನಡೆಸುತ್ತಿದ್ದನು ಎನ್ನಲಾಗಿದೆ. ಆದರೆ ಯಾವಾಗ ಈ ವಿಷಯ ಹೊರಬಂತೋ, ಹುಡುಗಿಯ ಮನೆಯ ಕಡೆಯವರು ಠಾಣೆಯಲ್ಲಿ ದೂ ರು ನೀಡಿದರೆ ತನಗೆ ಶಿ ಕ್ಷೆಯಾಗುವುದು ಹಾಗೂ ತಾನು ಜೈ ಲು ಪಾಲಾಗಬೇಕಾಗುವುದು ಎನ್ನುವ ಭಯದಿಂದ ಈ ವೈದ್ಯನು ಆಕೆಯ ಮನೆಯವರ ಮುಂದೆ ನಟಿಸಿ ಆಕೆಯೊಡನೆ ವಿವಾಹವನ್ನು ಕೂಡಾ ಮಾಡಿಕೊಂಡಿದ್ದಾನೆ.
ಇದಾದ ನಂತರ ನವೆಂಬರ್ 14, 2020 ರಂದು ಯುವತಿಯು ಗಂಡನ ಮನೆಗೆ ಬಂದಾಗ ಅಲ್ಲಿ ಅವರ ಮನೆಯವರು ಯುವತಿಯ ಮೇಲೆ ಕೈ ಮಾಡಿದ್ದಾರೆ. ಅದು ಮಾತ್ರವೇ ಅಲ್ಲದೇ ಗಂಡನ ಮನೆಯವರು ಮನೆಯನ್ನು ಬೀಗ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಯುವತಿ ಮಾತ್ರ ಕಳೆದ ಹನ್ನೆರಡು ದಿನಗಳಿಂದ ಕೂಡಾ ಅದೇ ಮನೆಯ ಮುಂದೆ ಒಂದು ಸಣ್ಣ ಶೆಡ್ ನಲ್ಲಿ ಕುಳಿತುಕೊಂಡು ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಧರಣಿ ಮಾಡುತ್ತಾ ಕುಳಿತಿದ್ದಾಳೆ. ಹಸಿವು ಬಾಯಾರಿಕೆಯಿಂದ ಬಳಲಿರುವ ಯುವತಿಯ ಕಡೆಗೆ ಗಮನ ನೀಡುವವರು ಕೂಡಾ ಯಾರು ಇಲ್ಲದಂತೆ ಆಗಿದೆ.

ಯುವತಿಯ ಈ ವಿಷಯವು ಮಾದ್ಯಮವೊಂದಕ್ಕೆ ತಿಳಿದು ಬಂದಿದ್ದು, ಅವರು ಕೂಡಲೇ ಇದನ್ನು ಎಸ್ಡಿಎಮ್ ಅನುರಾಗ್ ಭರದ್ವಾಜ್ ಅವರಿಗೆ ಸಂಪೂರ್ಣ ವಿಷಯವನ್ನು ತಿಳಿಸಿದ್ದಾರೆ. ಅನಂತರ ಅವರು ತಹಸೀಲ್ದಾರ್ ಆಶಾರಾಮ್ ಮತ್ತು ಪೋಲಿಸ್ ದಳದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಬಂದವರೇ ಯುವತಿಯು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು, ಅನಂತರ ಮನೆಯ ಬೀಗವನ್ನು ಒಡೆದು ಹಾಕಿ, ಯುವತಿಯನ್ನು ಮನೆಯೊಳಗೆ ಕಳುಹಿಸಿದ್ದಾರೆ. ಸಂತ್ರಸ್ತೆಯ ಹೆಸರು ನೇಹಾ ಎಂಬುದಾಗಿದ್ದು, ಈಕೆ ವೈದ್ಯ ಉಪೇಂದ್ರ ನ ಸಂಬಂಧಿ ಎಂದಿದ್ದಾರೆ.
2006 ರಲ್ಲಿ ಬಸೇಡಿ ಬಳಿಯ ತನ್ನ ಹಳ್ಳಿಯಿಂದ ಯುವತಿ ಉಪೇಂದ್ರನ ಹಳ್ಳಿಗೆ ಬಂದಿದ್ದಳು, ಆ ಸಮಯದಲ್ಲಿ ಉಪೇಂದ್ರನು ಉತ್ತರಪ್ರದೇಶದ ಆಗ್ರಾ ದಲ್ಲಿ ಎಂಬಿಬಿಎಸ್ ಓದುತ್ತಿದ್ದನ್ನು ಎನ್ನಲಾಗಿದ್ದು ತಾನು ಆಗ ಇನ್ನೂ ಅಪ್ರಾಪ್ತಳಾಗಿದ್ದೆ. ಆದರೆ ಉಪೇಂದ್ರನು ನನಗೆ ಮದುವೆಯ ಆಸೆ ತೋರಿಸಿ ತನ್ನೊಡನೆ ದೈಹಿಕ ಸಂಪರ್ಕ ಮಾಡಿದ್ದಾಗಿ ಯುವತಿ ಹೇಳಿದ್ದು, ಅನಂತರ ಎಲ್ಲರಿಗೂ ತಿಳಿದ ಮೇಲೆ ತನ್ನ ತಪ್ಪನ್ನು ಮುಚ್ಚಲು, ಶಿ ಕ್ಷೆಯಿಂದ ತಪ್ಪಿಸಿಕೊಳ್ಳಲು 20 ಡಿಸೆಂಬರ್ 2017 ರಲ್ಲಿ ಫರೀದಾಬಾದ್ ನ ಆರ್ಯಸಮಾಜದಲ್ಲಿ ತನ್ನನ್ನು ವಿವಾಹ ಮಾಡಿಕೊಂಡನೆಂದು ತಿಳಿಸಿದ್ದಾಳೆ.

ವಿವಾಹದ ನಂತರ ಕೆಲವು ಕಾಲ ಆತ ಧೌಲ್ಪರದಲ್ಲಿ ಇದ್ದನೆಂದು ಅನಂತರ ಆಗ್ರಾಕ್ಕೆ ತೆರಳಿದನಂತೆ. ಅದಾದ ಕೆಲವು ದಿನಗಳ ನಂತರ ನ್ಯಾಯಾಲಯದಿಂದ ತನಗೆ ವಿ ಚ್ಛೇ ದನದ ನೋ ಟೀಸ್ ಕಳುಹಿಸಿದರು ಎಂದು ನೇಹಾ ತಿಳಿಸಿದ್ದಾಳೆ. ಆಗ ತಾನು ಗಂಡನ ಮನೆಗೆ ಬಂದಿದ್ದು, ಗಂಡ ಮತ್ತು ಅತ್ತೆ ಮನೆಯವರು ತನ್ನನ್ನು ಹೊ ಡೆ ದು ಮನೆ ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಆಕೆ ದೂರನ್ನು ದಾಖಲಿಸಿದ್ದಾಳೆ. ಈ ವಿಷಯವಾಗಿ ತಹಸೀಲ್ದಾರ್ ಆಶಾರಾಮ್ ಅವರು ಮಾತನಾಡಿ, ತಮಗೆ ಈ ಯುವತಿಯ ವಿಷಯ ತಿಳಿದ ಕೂಡಲೇ ಪೋಲಿಸರ ನೆರವಿನಿಂದ ದೂ ರ ನ್ನು ದಾಖಲಿಸಿಕೊಂಡಿದ್ದು, ಆಕೆಯನ್ನು ಮನೆಯೊಳಗೆ ಇರಿಸಿದ್ದು, ಊಟ ನೀರಿನ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ.