ಮನೆಯಂಗಳದಲ್ಲಿ ಬಂದ ಬೆಕ್ಕಿನ ಮರಿಯ ಜೊತೆ ಚೆಲ್ಲಾಟವಾಡಿದರು ಮನೆಮಂದಿ 8 ದಿನ; ಸತ್ಯ ಗೊತ್ತಾದಾಗ ಎಲ್ಲರದೂ ಓಡೆದಿತ್ತು…ಗುಂಡಿಗೆ.

ವಿಶ್ವಾಸಕ್ಕೆ ದೂರವಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ರೀತಿಯ ಕಲ್ಪನೆಯೂ ಸಹ ಯಾರೂ ಮಾಡಲಿಕ್ಕಿಲ್ಲ, ಅಂತ ಘಟನೆಯೊಂದು ತೋಟದ ಮನೆಯಲ್ಲಿ ವಾಸಿಸುವ ಕುಟುಂಬದವರ ಜೊತೆಗೆ ಘಟಿಸಿದೆ.

ಮಹಾರಾಷ್ಟ್ರದ ಮಾಲೆಗಾವ್ ಊರಿನ ತೋಟದಲ್ಲಿ ವಾಸಿಸುತ್ತಿದ್ದ ರಾವ್ ಸಾಹೇಬ್ ಠಾಕ್ರೆ ಅವರ ಮನೆಯಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿದೆ. ಒಂದು ದಿನ ತೋಟದ ಮನೆಯಂಗಳದಲ್ಲಿ ಮಕ್ಕಳು ಆಟ ಆಡುತ್ತಿರುವಾಗ ಪುಟ್ಟ ಬೆಕ್ಕಿನ ಮರಿಯೊಂದು ತಿರುಗಾಡುತ್ತಾ ಬಂದಿದೆ. ಮಕ್ಕಳು ತುಂಬಾ ಖುಷಿಯಿಂದ ಬೆಕ್ಕಿನ ಮರಿಯನ್ನು ಎತ್ತಿಕೊಂಡು ಮನೆಯಲ್ಲಿ ಒಯ್ದು ಸುಮಾರು ಎಂಟು ದಿನಗಳವರೆಗೆ ಅದರ ಜೊತೆಗೆ ಆಟ ಆಡುವುದರಿಂದ ಹಿಡಿದು ಪಾಲನೆ-ಪೋಷಣೆ ಮಾಡುತ್ತಾ ಬಂದಿದ್ದಾರೆ. ಮನೆಯಲ್ಲಿಯ ಪ್ರತಿಯೊಬ್ಬ ಸದಸ್ಯನೂ ಬೆಕ್ಕಿನ ಮರಿಯ ಜೊತೆಗೆ ತುಂಬಾ ಪ್ರೀತಿಯಿಂದ ವರ್ತಿಸಿದ್ದಾನೆ. ಕೊನೆಗೆ ಒಂದು ದಿನ ಮನೆಯಲ್ಲಿಯ ಹಿರಿಯ ಸದಸ್ಯನೊಬ್ಬ ಅದರ ಜೊತೆಗೆ ಆಟವಾಡುವಾಗ ಸೂಕ್ಷ್ಮವಾಗಿ ದಿಟ್ಟಿಸಿ ನೋಡಿದಾಗ, ಅದು ಬೆಕ್ಕಿನ ಮರಿಯಲ್ಲದೆ ಕತರ್ನಾಕ್ ಚಿರತೆಯ ಮರಿ ಇದೆಯೆಂದು ಗಮನಕ್ಕೆ ಬಂದಿದೆ.

ಆಮೇಲೆನು ತಕ್ಷಣ ಮನೆಯವರು ಜಾಗೃತರಾಗಿ ಮರಿಯನ್ನು ಹೊರಗೆ ಬಿಟ್ಟು ದಿನನಿತ್ಯ ರಾತ್ರಿ ಅದರ ತಾಯಿಯ ದಾರಿ ಕಾಯ್ದಿದ್ದಾರೆ. ಎಂಟತ್ತು ದಿವಸಗಳವರೆಗೆ ದಾರಿ ಕಾಯ್ದರೂ ತಾಯಿಚಿರತೆ ಮಾತ್ರ ಆ ಕಡೆಗೆ ಜೀವ ಭಯದಿಂದ ಹಾಯ್ದಿಲ್ಲ. ಇತ್ತ ರಾವ್ ಸಾಹೇಬ್ ಕುಟುಂಬದವರು ದಿನನಿತ್ಯ ಚಿರತೆಯ ಮರಿಗೆ ಒಂದೂವರೆಯಿಂದ ಎರಡು ಲೀಟರ್ ಹಾಲುಣಿಸುತ್ತಾ ಅದರ ಪಾಲನೆ ಪೋಷಣೆಯನ್ನು ಮಾಡಿದ್ದಾರೆ. ಈ ಸಮಯದಲ್ಲಿ ಅವರ ಮನೆಯಲ್ಲಿದ್ದ ಒಂದುವರೆ ವರ್ಷದ ಮೊಮ್ಮಗಳು ಚಿರತೆ ಮರಿಯನ್ನು ತುಂಬಾ ಹಚ್ಚಿಕೊಂಡಿತ್ತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಠಾಕ್ರೆ ಕುಟುಂಬ ಅರಣ್ಯ ವಿಭಾಗದವರಿಗೆ ಮರಿಯನ್ನು ಹಸ್ತಾಂತರಿಸಿದ್ದಾರೆ. ಅರಣ್ಯ ವಿಭಾಗದವರಿಗೆ ಚಿರತೆಯ ಮರಿಯನ್ನು ನೀಡುವಾಗ ಕುಟುಂಬದವರೆಲ್ಲರ ಕಣ್ಣುಗಳು ತೇವಗೊಂಡಿದ್ದವು.