ಮನೆಯಲ್ಲಿದ್ದ ಆರು ಸ್ಪರ್ಧಿಗಳಲ್ಲಿ ನಿನ್ನೆ ಒಬ್ಬರ ಪ್ರಯಾಣ ಮುಗಿಯಿತು, ಯಾರು ಎಲಿಮಿನೇಟ್ ಆದರು ನೋಡಿ!!!
ಬಿಗ್ಬಾಸ್ ಇನ್ನೂ ಈ ವಾರ ಫೈನಲ್ ವಾರ ಅಂತಲೇ ಪರಿಗಣಿಸಬೇಕಾಗುತ್ತದೆ. ಈ ವಾರದ ಕೊನೆಗೆ ಬಿಗ್ಬಾಸ್ ಮುಕ್ತಾಯ ವಾಗುತ್ತದೆ. ಹಾಗಾಗಿ ಈ ವಾರ ಕನ್ನಡ ಬಿಗ್ಬಾಸ್ ಸೀಸನ್ 9 ರ ವಿಜೇತ ಯಾರು ಎಂಬುದು ನಮಗೆಲ್ಲ ತಿಳಿದು ಬರುತ್ತದೆ. ಸದ್ಯಕ್ಕೆ ಮನೆಯಲ್ಲಿ ಕೇವಲ ಆರು ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಬಿಗ್ಬಾಸ್ ನಿಯಮದ ಪ್ರಕಾರ ಕೊನೆಯ ವಾರದ ಮಧ್ಯದಲ್ಲಿ ಒಂದು ಎಲಿಮಿನೇಟ್ ಆಗುತ್ತೆ ಅಂದರೆ ಬಿಗ್ಬಾಸ್ ಫೈನಲ್ಗೆ ಕೇವಲ ಐದು ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ನಿನ್ನೆ ನೇರವಾಗಿ ಎಲಿಮಿನೆಟ್ ಪ್ರಕ್ರಿಯೆ ನಡೆಯಿತು ಅದರಲ್ಲಿ ಯಾರ ಪ್ರಯಾಣ ನಿನ್ನೆಗೆ ಮುಗಿಯಿತು ಎಂಬುದು ನಾವು ನಿಮಗೆ ತಿಳಿಸಲಿದ್ದೇವೆ.
ನಿನ್ನೆ ನಡೆದ ನೇರ ಎಲಿಮಿನೇಟ್ ಪ್ರಕ್ರಿಯೆಯಲ್ಲಿ ಬಿಗ್ಬಾಸ್ ಮನೆಯಲ್ಲಿದ್ದ ಪ್ರತಿಯೊಂದು ಸ್ಪರ್ಧಿ ತುಂಬಾನೇ ಚಿಂತೆಯಲ್ಲಿದ್ದರು ಏಕೆಂದರೆ ಇಲ್ಲಿಯವರೆಗೆ ಬಂದು ಈಗ ಎಲಿಮಿನೇಟ್ ಆದರೆ ಇದುವರೆಗೆ ಆಡಿದ ಆಟ ತೋರಿದ ಪ್ರದರ್ಶನ ಎಲ್ಲವೂ ವ್ಯರ್ಥವಾಗುತ್ತದೆ ಎಂದು. ನಿನ್ನೆ ಬಿಗ್ಬಾಸ್ ಎಲ್ಲ ಸ್ಪರ್ಧಿಗಳನ್ನು ಒಂದು ಸ್ವಯಂಚಾಲಿತ ಯಂತ್ರದ ಮೇಲೆ ನಿಲ್ಲಿಸಿ ಈ ಸ್ವಯಂಚಾಲಿತ ಯಂತ್ರ ಯಾರನ್ನು ಮಾಯ ಮಾಡುತ್ತೆ ಅವರು ಎಲಿಮಿನೇಟ್ ಆಗುತ್ತಾರೆ ಎಂದು ಘೋಷಣೆ ಮಾಡಲಾಗಿತ್ತು. ಈ ಘೋಷಣೆಯ ನಂತರ ಪ್ರತಿಯೊಬ್ಬ ಸ್ಪರ್ಧಿಯ ಮುಖ ನೋಡುವಂತ ಇತ್ತು.
View this post on Instagram
ನಿನ್ನೆ ನಡೆಡ್ ಎಲಿಮಿನೇಟ್ ಪ್ರಕ್ರಿಯೆಯಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಯಾರೆಂದರೆ ಅವರೇ ಆರ್ಯವರ್ಧನ್. ಹೌದು ನಿನ್ನೆ ಎಲಿಮಿನೇಟ್ ಪ್ರಕ್ರಿಯೆಯಲ್ಲಿ ಆರ್ಯವರ್ಧನ್ ಅವರು ನೇರವಾಗಿ ಎಲಿಮಿನೇಟ್ ಆಗಿ ಬಿಗ್ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಅವರು ಎಲಿಮಿನೇಟ್ ಆಗಿರುವದು ಸರಿಯೇ ಅಥವಾ ತಪ್ಪೋ ಎಂಬುದು ಚರ್ಚೆಯ ವಿಷಯವಾಗಿದೆ. ಇನ್ನೂ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳಿಗೆ ನಮ್ಮ ಕಡೆಯಿಂದ ಫೈನಲ್ಗೆ ಅಭಿನಂದನೆಗಳು.💐💐
View this post on Instagram