ಮನೆಯಲ್ಲೇ ಕುಳಿತು ಆನ್ಲೈನ್ ಫುಟ್ ವೆರ್ ಬ್ಯುಸಿನೆಸ್ ಶುರು ಮಾಡಿದ ಯುವಕ; ಈಗ ವರ್ಷದ ಟರ್ನ್ ಓವರ್ 30 ಕೋಟಿ ರೂಪಾಯಿ!
ಸದ್ಯದ ಸಮಯದಲ್ಲಿ ಇ-ಕಾಮರ್ಸ್ ವ್ಯವಸಾಯದಿಂದ ಯಾವುದೇ ಒಂದು ವಸ್ತು ಖರೀದಿಸುವುದು ತುಂಬಾ ಸರಳವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಇಕಾಮರ್ಸ್ ಉದ್ಯೋಗ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಕಾರಣದಿಂದ ಅನೇಕ ಸ್ಮಾರ್ಟ್ ವ್ಯಕ್ತಿಗಳು ಇ-ಕಾಮರ್ಸ್ ಉದ್ಯೋಗವನ್ನು ಪ್ರಾರಂಭಿಸಿದ್ದರಿಂದ ಲಕ್ಷ ರೂಪಾಯಿಗಳನ್ನು ತಿಂಗಳೊಂದಕ್ಕೆ ಗಳಿಸುತ್ತಿದ್ದಾರೆ.
ಇಂದಿನ ಲೇಖನದಲ್ಲಿ ಇಂಥದ್ದೇ ಒಂದು ಉದ್ಯೋಗಕ್ಕೆ ಸಂಬಂಧಿಸಿದ ಮತ್ತು ಅದರಲ್ಲಿ ಯಶಸ್ವಿಯಾದ ತರುಣನ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಈತ ಇ-ಕಾಮರ್ಸ್ ಬಿಸಿನೆಸ್ ಮುಖಾಂತರ ಈಗ ತಿಂಗಳಿಗೆ ಕೋಟಿ ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ಉತ್ತರಪ್ರದೇಶದ ನಿವಾಸಿಯಾದ ಈತನ ಹೆಸರು ಹರೀಶ್ ಧರ್ಮದಸಾನಿ.
ಹರೀಶನ ಕುಟುಂಬ ರಾಜಸ್ಥಾನದಲ್ಲಿ ಫುಟ್ ವೇರ್ ಬಿಜಿನೆಸ್ ಮಾಡುತ್ತಿತ್ತು. ಹರೀಶ ಯಾವಾಗ 18 ವರ್ಷದವನಿದ್ದನೋ ಆಗ ಆತನ ತಂದೆ ಕಣ್ಮರೆಯಾದರು. ಹರೀಶನಿಗೆ ಫುಟ್ವೇರ್ ಬಿಜಿನೆಸ್ ಮಾಡುವುದಿತ್ತು. ಆದರೆ ಅದು ಅಷ್ಟೊಂದು ಸರಿಯಾಗಿ ಮಾಡಲು ಬರುತ್ತಿರಲಿಲ್ಲ. ಈ ಕಾರಣದಿಂದಾಗಿ ಆಫ್ಲೈನ್ ಸ್ಟೋರ್ ಮುಚ್ಚಿಯೇ ಬಿಟ್ಟನು.

2008 ರಲ್ಲಿ ಕುಟುಂಬ ನಿರ್ವಹಣೆಯ ಕಾರಣಕ್ಕಾಗಿ ಒಂದು ಸ್ಟೋರ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಮೊದಮೊದಲು ಈ ಕೆಲಸಕ್ಕಾಗಿ ಹರೀಶನಿಗೆ ಬರಿ ಆರು ಸಾವಿರ ಸಂಬಳ ಸಿಗುತ್ತಿತ್ತು. ಹರೀಶ್ ಮಾತ್ರ ಅಲ್ಲಿಂದ ಕದಲದೆ ಎಷ್ಟೋ ವರ್ಷ ಅಲ್ಲಿಯೇ ಕೆಲಸ ಮಾಡಿದನು. ಹೀಗಾಗಿ ಆತನಿಗೆ ಮುಂದೆ ತಿಂಗಳಿಗೆ 30 ಸಾವಿರ ಸಂಬಳ ಹೆಚ್ಚಿತು.
ದುಡಿಮೆಗೆ ಸರಿಯಾದ ಸಂಬಳ ಹರೀಶನಿಗೆ ದೊರೆಯುತ್ತಿತ್ತು. ಆದರೆ ಹರೀಶನ ಮನಸ್ಸು ಮಾತ್ರ ತಾನು ಮಾಡುತ್ತಿದ್ದ ನೌಕರಿಯಲ್ಲಿ ಇರಲಿಲ್ಲ. ಈ ನೌಕರಿ ಮಾಡುತ್ತಿರುವಾಗ ಆತನಿಗೆ ಅನೇಕ ಆನ್ಲೈನ್ ಕೆಲಸ ಮಾಡುವ ವ್ಯಾಪಾರಿ ವರ್ಗದ ಜನರು ಭೇಟಿಯಾದರು. ಅವರಿಂದ ಹರೀಶನಿಗೆ ಆನ್ಲೈನ್ ವ್ಯವಸಾಯ ಮಾಡುವ ಕಲ್ಪನೆಗಳು ತಲೆಯಲ್ಲಿ ಹೊಳೆದವು.
ಅನಂತರ ಹರೀಶನು ಫುಟ್ವೇರ್ ತಯಾರಿಸುವ ಕಂಪನಿಗಳ ಜೊತೆಗೆ ಕೂಡಿಕೊಂಡು ಆನ್ಲೈನ್ ವ್ಯವಸಾಯ ಪ್ರಾರಂಭಿಸಿದನು. ಆತ ತನ್ನ ಮನೆಯಲ್ಲಿ ಒಂದು ಚಿಕ್ಕದಾದ ಆಫೀಸ್ ತಯಾರಿಸಿದನು. ಇ-ಕಾಮರ್ಸ್ ನಲ್ಲಿ ಹರೀಶನಿಗೆ ಸಾಕಷ್ಟು ಆರ್ಡರ್ ಗಳು ದೊರೆಯಲಾರಂಭಿದವು. ಇದನ್ನು ಮಾಡುತ್ತಿರುವ ಸಮಯದಲ್ಲಿಯೇ ಫ್ಲಿಪ್ಕಾರ್ಟ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಾಗ ಮಾತ್ರ ಹರೀಶನ ನಿಜವಾದ ಬಿಜಿನೆಸ್ ಆಗ ಪ್ರಾರಂಭವಾಯಿತು. 2015 ರಿಂದ ಪ್ರಾರಂಭಿಸಿದ ಫ್ಲಿಪ್ಕಾರ್ಟ್ ಜೊತೆಗಿನ ಬಿಜಿನೆಸ್ ನಂತರ ಹರೀಶನಿಗೆ ಹಿಂದೆ ನೋಡುವ ಅವಶ್ಯಕತೆಯೇ ಬೀಳಲಿಲ್ಲ.

ಐದು ವರ್ಷಗಳ ನಂತರ ಹರೀಶ್ ಈಗ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದಾನೆ. ಮೊದಮೊದಲು ಹರೀಶನಿಗೆ ಆರ್ಡರ್ ಸಿಗಲು ತುಂಬಾ ಕಷ್ಟವಾಯಿತು. ಆದರೂ ಸಮಾಧಾನದಿಂದ ಸಂಯಮವನ್ನು ಇಟ್ಟುಕೊಂಡು ಕಷ್ಟದಿಂದ ಕೆಲಸದಲ್ಲಿ ಹಾಗೆಯೇ ಮುಂದುವರೆದನು. ಈಗ ದಿನಕ್ಕೆ ಸುಮಾರು 5 ಸಾವಿರದ ಆರ್ಡರ್ ಗಳು ದೊರೆಯುತ್ತಿವೆ. ಈ ಬಿಸಿನೆಸ್ ನಿಂದ ಹರೀಶ್ ಈಗ ತಿಂಗಳಿಗೆ ಸುಮಾರು ಒಂದರಿಂದ ಒಂದುವರೆ ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾನೆ.