ಮನೆಯ ಕರೆಂಟ್ ಬಿಲ್ ನೋಡಿ ಶಾಕ್ ಆದ ಹರಭಜನ್! ಕೇಳ್ತಿದ್ದಾರೆ – “ಈ ಬಿಲ್ ಬರೀ ನನ್ನ ಮನೆಯದೋ ಇಲ್ಲ ಪೂರ್ತಿ ಬಡಾವಣೆಯದೋ?”

ಭಾರತೀಯ ಕ್ರಿಕೇಟ್ ತಂಡ ಪೂರ್ವ ಸ್ಪಿನ್ನರ್ ಹರಿಭಜನ್ ಸಿಂಗ್ ಅವರು ಒಂದು ಕಾಲದಲ್ಲಿ ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳ ವಿಕೇಟ್ ಗಳನ್ನು ಗಿಲ್ಲಿತರ ಉಡಾಯಿಸಿ ಬಿಡುತ್ತಿದ್ದರು. ಅಲ್ಲದೆ ಅವರು ಸೂಪರ್ ಸ್ಪಿನ್ನರ್ ಬಾಲರ್ ಎಂದೇ ಪ್ರಸಿದ್ಧವಾಗಿದ್ದರು. ಅವರು ಪಂದ್ಯದಲ್ಲಿ ಬಾಲಿಂಗ್ ಮಾಡಲು ಬಂದರೆ ಸಾಕು ಮುಂದಿರುವ ಬ್ಯಾಟ್ಸ್ಮನ್ ಗಳ ಎದೆ ಝಲ್ಲೆನ್ನುತ್ತಿತು. ಅಂತಹ ಪ್ರಸಿದ್ಧ ಬಾಲರ್ ಇಂದು ಕ್ರಿಕೆಟ್ ತಂಡದಿಂದ ಹೊರಗಿದ್ದರೂ ಸಹ ಕ್ರಿಕೇಟ್ ಜೊತೆಗಿನ ಸಂಬಂಧ ಅಷ್ಟೊಂದು ಕಡಿಮೆ ಯಾಗಿಲ್ಲ. ಏಕೆಂದರೆ ಎಷ್ಟೋ ಮ್ಯಾಚ್ ಗಳಲ್ಲಿ ಕಾಮೆಂಟರಿ ಮಾಡುತ್ತಾರಲ್ಲದೆ, ಕ್ರಿಕೇಟ್ ಪ್ರಾರಂಭವಾಗುವದಕ್ಕಿಂತ ಮುಂಚೆ ಮ್ಯಾಚ್ ನ ಬಗ್ಗೆ ಚರ್ಚೆ ಮಾಡುವದರಲ್ಲಿ ಸಹಭಾಗಿ ಯಾಗಿ ತಮ್ಮ ಕ್ರಿಕೆಟ್ ಬಗ್ಗೆ ಇದ್ದ ಪ್ರೀತಿ ಉಳಿಸಿಕೊಂಡಿದ್ದಾರೆ.

ಇತ್ತೀಚೆಗೆ ಹರಿಭಜನ್ ಸಿಂಗ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದು ಈಗ ಎಲ್ಲೆಡೆಗೂ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ ನಲ್ಲಿದ್ದದ್ದು ಏನೆಂದು ತಿಳಿದುಕೊಳ್ಳೋಣ ಬನ್ನಿ.

ತಿಂಗಳ ಎಲೆಕ್ಟ್ರಿಕ್ ಬಿಲ್ ನೋಡಿ ಹರಿಭಜನ್ ಸಿಂಗ್ ಅವರು ತುಂಬಾ ಆಶ್ಚರ್ಯಗೊಂಡಿದ್ದಾರೆ. ಏಕೆಂದರೆ ತಾವು ವಾಸವಾಗಿದ್ದ ಮುಂಬೈ ಮನೆಯ ಲೈಟ್ ಬಿಲ್ ಈ ತಿಂಗಳಿನ ಬಿಲ್, ಸಾಧಾರಣ ಬಿಲ್ ಗಿಂತ ಸುಮಾರು ಏಳು ಪಟ್ಟು ಜಾಸ್ತಿ ಬಂದಿದೆ ಅಂತ ಹರಿಭಜನ್ ಸಿಂಗ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಸದ್ಯಕ್ಕೆ ದೇಶದ ತುಂಬೆಲ್ಲ ಸುಮಾರು ಮೂರು ತಿಂಗಳಿಂದ ಲಾಕ್ಡೌನ್ ಚಾಲ್ತಿಯಲ್ಲಿದೆ. ಕೋರೊನಾ ವೈರಸ್ ತಡೆಗಟ್ಟಲು ಈ ಕಟ್ಟುನಿಟ್ಟಿನ ಕ್ರಮ ಸರಕಾರ ಕೈಗೊಂಡಿದೆ. ಅದರಿಂದ ದೇಶದ ಆರ್ಥಿಕ ಮಟ್ಟ ತುಂಬಾ ಕುಸಿತಗೊಂಡಿದೆ. ಮಹಾರಾಷ್ಟ್ರದ ತುಂಬೆಲ್ಲಾ ಸದ್ಯಕ್ಕೆ ವಿದ್ಯುತ್ ಬಿಲ್ ಸಾಮಾನ್ಯವಾದ ಚಾರ್ಜ್ ಗಿಂತ ಹೆಚ್ಚಾಗಿ ಚಾರ್ಜ್ ಮಾಡುತ್ತಿರುವ ಸುದ್ದಿಗಳು ತಿಳಿದು ಬಂದಿವೆ. ಅಷ್ಟೇ ಅಲ್ಲ ಹಲವಾರು ಸ್ಟಾರ್ ವ್ಯಕ್ತಿಗಳ ಮನೆಗಳ ಲೈಟ್ ಬಿಲ್ ಸಹ ತುಂಬಾನೇ ಜಾಸ್ತಿಯಾಗಿ ಬಂದಿವೆ. ಇದರಿಂದ ಅನೇಕ ಸೆಲೆಬ್ರಿಟಿಗಳು ಲೈಟ್ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ಅದರಲ್ಲಿ ಹರಿಭಜನ್ ಸಿಂಗ್ ಅವರು ಸಹಭಾಗಿಯಾಗಿದ್ದರೆ.

ಹರಿಭಜನ್ ಸಿಂಗ ಅವರು ತಮ್ಮ ಟ್ವಿಟ್ಟರ್ ನಲ್ಲಿ ಆಶ್ಚರ್ಯಕರವಾದ ಮೂರು ಇಮೋಜಿಗಳನ್ನು ಹಾಕುತ್ತ, ಅದಾನಿ ಎಲೆಕ್ಟ್ರಿಕ್ಸಿಟಿ ಮುಂಬೈ ಗೆ ಟ್ಯಾಗ್ ಮಾಡಿ, ‘ಇಷ್ಟೋಂದು ಬಿಲ್ , ಸಂಪೂರ್ಣ ಬಡಾವಣೆಯ ವಿದ್ಯುತ್ ಚಾರ್ಜ್ ನನ್ನ ಬಿಲ್ಲಲ್ಲೇ ಜೋಡಿಸಿದ್ದೀರಾ?’ ಅಂತ ಬರೆದಿದ್ದಾರೆ. ಅದಾನಿ ಕಂಪನಿಯ ಕಡೆಯಿಂದ ಬಂದ ಮೆಸೇಜ್ ಶೇರ್ ಮಾಡುತ್ತಾ, ‘ಸಾಮಾನ್ಯ ಬಿಲ್ ಗಿಂತ ಸುಮಾರು ಏಳು ಪಟ್ಟು ಜಾಸ್ತಿ!!! ವಾಹ…!” ಅಂತ ಬರೆದಿದ್ದಾರೆ.

ಅವರ ಈ ಪೋಸ್ಟಿನ ಪ್ರಕಾರ ಭಜಿ ಯವರ ಲೈಟ್ ಬಿಲ್ 33900 ರೂ ಬಂದಿದೆ. ಅಂದರೆ ಇದು ಏಳು ಪಟ್ಟಿನಷ್ಟು ಹೆಚ್ಚಿದೆ ಅಂತ ಹೇಳಿದ್ದಾರೆ. ಇದರ ಮೇಲಿಂದ ಅವರ ಒಂದು ತಿಂಗಳಿನ ಲೈಟ್ ಬಿಲ್ ಸಾಮಾನ್ಯವಾಗಿ 4500-5000 ರೂಪಾಯಿಗಳವರೆಗೆ ಬರಬಹುದು. ಲಾಕ್ಡೌನ್ ದಿಂದ ವಿದ್ಯುತ್ ಕಂಪನಿ ಯವರು ತಮ್ಮ ಆರ್ಥಿಕತೆ ಸುಧಾರಣೆ ಮಾಡಿಕೊಳ್ಳಲು ಈ ಪ್ರಕಾರವಾಗಿ ಮಾಡುತ್ತಿರಬಹುದು ಎನ್ನಲಾಗುತ್ತಿದೆ.