ಮನೆ ಛಾವಣಿ ಸೀಳಿಕೊಂಡು ಆಕಾಶದಿಂದ ಬಂತು ಅದೃಷ್ಟ: ಒಂದೇ ರಾತ್ರಿಯಲ್ಲಿ ಬಡವ ಕೋಟ್ಯಾಧೀಶನಾಗಿಬಿಟ್ಟ
ದೇವರು ನಮಗೆ ಒಳ್ಳೆಯದನ್ನು ಮಾಡಬೇಕು ಅಂತ ನಿರ್ಧಾರ ಮಾಡಿದ್ದರೆ ಅಥವಾ ಅದೃಷ್ಟ ಅನ್ನೋದು ನಮ್ಮ ಹಣೆ ಬರಹದಲ್ಲಿ ಇದ್ದರೆ ನಮಗೆ ದಕ್ಕಬೇಕಾಗಿರೋದು ಎಲ್ಲಿಂದಲೋ, ಹೇಗೋ ಯಾವುದೋ ಒಂದು ರೂಪದಲ್ಲಿ ನಮಗೆ ಬಂದು ಸೇರುತ್ತೆ ಅನ್ನೋ ಮಾತನ್ನು ನಾವೆಲ್ಲ ಕೂಡಾ ಕೇಳುತ್ತಾ ಬಂದಿದ್ದೇವೆ. ಕಷ್ಟಪಟ್ಟು ಕೆಲಸ ಮಾಡಿದರೆ ಆ ಭಗವಂತ ಒಂದಲ್ಲಾ ಒಂದು ದಿನ ನಮ್ಮನ್ನ ಹರಸಿ, ಕರುಣೆಯ ಮಳೆಯನ್ನೇ ಹರಿಸುವನು ಅಂತ ಹೇಳೋದನ್ನು ಕೂಡಾ ನಾವೆಲ್ಲಾ ಕೇಳಿದ್ದೇವೆ. ಕೆಲವೊಮ್ಮೆ, ಕೆಲವು ಕಡೆ ಈ ವಿಚಾರಗಳು ನಿಜ ಕೂಡಾ ಆಗಿ ಬಿಡುತ್ತದೆ. ಇಂದು ಬಡವನಾಗಿದ್ದವನು ನಾಳೆ ವೇಳೆಗೆ ಸಿರಿವಂತ ಆಗಿ ಬಿಡಬಹುದು, ಬಿಡಿಗಾಸು ಇಲ್ಲದವನ ಬಳಿ ಎಣಿಸಲಾರದಷ್ಟು ಹಣ ಬಂದು ಸೇರಬಹುದು ಕೂಡಾ.
ಈಗ ಇಂತಹುದೇ ಒಂದು ವಿಸ್ಮಯ ಎನಿಸುವ ಘಟನೆ ಒಂದು ಕಡೆ ನಡೆದಿದ್ದು, ಇರುಳು ಕಳೆದು ಹಗಲಾಗುವ ವೇಳೆಗೆ ಬಡವನೊಬ್ಬ ಕೋಟ್ಯಾಧೀಶನಾಗಿದ್ದಾನೆ. ಹಾಗಾದರೆ ಒಂದೇ ಒಂದು ರಾತ್ರಿಯಲ್ಲಿ ಅದೆಂತ ವಿಚಿತ್ರ ಅಥವಾ ಅದ್ಭುತ ನಡೆದು ಆತ ಹೀಗೆ ಕೋಟ್ಯಾಧೀಶ ಆದ ಅಂತ ನಿಮಗೆ ಪ್ರಶ್ನೆ ಮೂಡಿರಬಹುದು ಅಲ್ವಾ, ಹೌದು ಈತನಿಗೆ ಅದೃಷ್ಟ ಅನ್ನೋದು ಆಕಾಶದಿಂದ ಬಂದಿದೆ. ಬನ್ನಿ ಏನು ಈ ವಿಚಿತ್ರ ಎನಿಸುವ ವಿಷಯ ಅಂತ ಸಂಪೂರ್ಣವಾಗಿ ತಿಳಿಯೋಣ. ಇಂತಹುದೊಂದು ವಿಸ್ಮಯಕಾರಿ ಘಟನೆ ನಡೆದಿರುವುದು ಇಂಡೋನೇಷ್ಯಾದ ಸುಮಾತ್ರ ವಲಯದಲ್ಲಿ.

ಇಂಡೋನೇಷ್ಯಾದ ಸುಮಾತ್ರ ಪ್ರದೇಶದಲ್ಲಿ ಜೋಸುವಾ ಹುತಾಗಲುಂಗ್ ಎನ್ನುವ ವ್ಯಕ್ತಿ ತನ್ನ ಮನೆ ಹಾಗೂ ಕುಟುಂಬದೊಡನೆ ವಾಸ ಮಾಡ್ತಾ ಇದ್ದು, ಕುಟುಂಬದ ನಿರ್ವಹಣೆಗಾಗಿ ಆತ ಶವ ಪೆಟ್ಟಿಗೆ ಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಾನೆ. ಆರ್ಥಿಕವಾಗಿ ಆತನೇನು ಸುಸ್ಥಿತಿಯಲ್ಲಿ ಇಲ್ಲ, ಶವಪೆಟ್ಟಿಗೆ ಮಾರಿ ಬಂದ ಹಣದಿಂದ ಆತ ತನ್ನ ಕುಟುಂಬದ ಅವಶ್ಯಕತೆಗಳನ್ನು ಪೂರೈಸುತ್ತಾನೆ. ಅಲ್ಲದೇ ಉಳಿತಾಯ ಎನ್ನುವ ಹೆಸರಿನಲ್ಲಿ ಆತನ ಖಾತೆಯಲ್ಲಿ ಬಿಡಿಗಾಸು ಕೂಡಾ ಇಲ್ಲ ಎನ್ನುವುದು ಕೂಡಾ ನಿಜ. ಆದರೆ ಈಗ ಆತನ ಜೀವನದಲ್ಲೊಂದು ಅದೃಷ್ಟ ಆತನನ್ನು ಹುಡುಕಿ ಬಂದಿದೆ.

ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಜೋಸುವ ಮನೆಯ ಹೊರೆಗೆ ಕೆಲಸ ಮಾಡುವಾಗ, ಆಕಾಶದಿಂದ ರಭಸವಾಗಿ ಬಂದ ಉಲ್ಕೆಯೊಂದು ಆತನ ಮನೆಯ ಛಾವಣಿಗೆ ತಗುಲಿ ನೆಲಕ್ಕೆ ಬಂದು ಅಪ್ಪಳಿಸಿದೆ. ಈ ಉಲ್ಕೆಯ ತೂಕ 2.1 ಕಿಲೋ ಗ್ರಾಂ ಇದೆ ಎನ್ನಲಾಗಿದೆ. ಈ ಉಲ್ಕೆ ಸುಮಾರು ನಾಲ್ಕೂವರೆ ಮಿಲಿಯನ್ ವರ್ಷಗಳಷ್ಟು ಪುರಾತನವಾದದ್ದು ಎನ್ನಲಾಗಿದ್ದು ಇದು ಜೇಸುವಾನ ಜೀವನವನ್ನೇ ಬದಲಿಸಿದೆ. ಈ ಉಲ್ಕೆಯ ಒಂದು ಗ್ರಾಂ ಬೆಲೆ ಸುಮಾರು 857 ಡಾಲರ್ ಗಳು ಎನ್ನಲಾಗಿದೆ. ಅಂದರೆ ಎರಡು ಕೆಜಿ ಇರುವ ಈ ಉಲ್ಕೆಯ ಬೆಲೆ ಎಷ್ಟಿರಬಹುದು ಎಂದು ಅಂದಾಜಿಸಿದರೆ ತಿಳಿದು ಬಿಡುತ್ತದೆ.

ಪ್ರಸ್ತುತ ಜೋಸುವಾ ಗೆ ಈ ಉಲ್ಕೆಯಿಂದ ಹತ್ತು ಕೋಟಿ ರೂಪಾಯಿಗಳು ಬಂದಿದೆ ಎನ್ನಲಾಗಿದೆ. ಆತ ಮೂವತ್ತು ವರ್ಷ ದುಡಿದರೂ ಕೂಡಾ ಇಷ್ಟು ಗಳಿಸುವುದು ಸಾಧ್ಯವಿರಲಿಲ್ಲ. ಉಲ್ಕೆ ಬಿದ್ದ ಪರಿಣಾಮ ಆತನ ಮನೆಯ ಛಾವಣಿ ಕೂಡಾ ಕು ಸಿದಿದೆ. ಉಲ್ಕೆಯ ಬಿದ್ದಾಗ ಅದು ಬಹಳ ಬಿಸಿ ಇತ್ತು ಎನ್ನಲಾಗಿದೆ. ಅದು ಬಿದ್ದಾಗ ಉಂಟಾದ ಭಾರೀ ಸದ್ದಿಗೆ ನೆರೆಹೊರೆಯವರು ಕೂಡಾ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಆಕಾಶದಿಂದ ಬಿದ್ದ ಉಲ್ಕೆಯು ಜೋಸುವಾ ನ ಜೀವನದ ದಿಕ್ಕನಂತೂ ಖಂಡಿತ ಬದಲಾಯಿಸಿ ಒಂದೇ ದಿನದಲ್ಲಿ ಆತನನ್ನು ಕೋಟಿಗಳ ಒಡೆಯನನ್ನಾಗಿ ಮಾಡಿದೆ.