ಮಮತೆಯ ಮೈದುನನ ಮದುವೆಯಲ್ಲಿ ಅತ್ತಿಗೆ ಮಾಡಿದರು ಮನಸೆಳೆಯುವ ನೃತ್ಯ..! ನೋಡಿ ಈ ವಿಡಿಯೋ.

ಮದುವೆ ಅಂದಮೇಲೆ ಡಾನ್ಸ್ ಇಲ್ಲದೆ ಹೇಗೆ? ಸದ್ಯದ ಸಮಯದಲ್ಲಿ ಮನೆಯವರು ಡಾನ್ಸ್ ಮಾಡದೆ ಮದುವೆಗಳೇ ಆಗುತ್ತಿಲ್ಲ. ಅಷ್ಟೊಂದು ಮಹತ್ವದ್ದಾಗಿದೆ ಮದುವೆಯಲ್ಲಿ ಕುಣಿತ. ಹೆಚ್ಚುಕಡಿಮೆ ಮದುವೆಯಲ್ಲಿ ಎಲ್ಲರೂ ಹೇಗೆ ಆಗಲಿ, ಸ್ವಲ್ಪಾದರೂ ಡಾನ್ಸ್ ಮಾಡಿಯೇ ಮಾಡುತ್ತಾರೆ. ಕೆಲವರು ಸ್ವಲ್ಪ ಮಾಡಿದರೆ ಇನ್ನು ಕೆಲವರು ಹುಚ್ಚೆದ್ದು ಕುಣಿಯುತ್ತಾರೆ. ಈಗ ಪ್ರೀತಿಯ ಮೈದುನನ ಮದುವೆಯಲ್ಲಿ ಅತ್ತಿಗೆಯು ಮಾಡಿದ ಸುಂದರವಾದ ಡಾನ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿದೆ.

ಈ ವಿಡಿಯೋದಲ್ಲಿ ಅತ್ತಿಗೆ ಮದುವೆಯಾಗುತ್ತಿರುವ ಮೈದುನನ ಮದುವೆಯಲ್ಲಿ ತುಂಬಾ ಖುಷಿಯಿಂದ ಡಾನ್ಸ್ ಮಾಡುತ್ತಿದ್ದಾರೆ. ಮದುಮಗನ ಮೆರವಣಿಗೆ ಕಲ್ಯಾಣ ಮಂಟಪ ಕಡೆ ಹೋಗುತ್ತಿರುವಾಗ ಅತ್ತಿಗೆಯವರು ಬಾಲಿವುಡ್ ನ ಫೇಮಸ್ ಹಾಡಿಗೆ ಮೈದುನನ ಜೊತೆಗೆ ತುಂಬಾ ಸುಂದರವಾಗಿ ನೃತ್ಯ ಮಾಡುತ್ತಿದ್ದಾರೆ. ಹಾಡಿಗೆ ತಕ್ಕಂತೆ ಹಾವಭಾವಗಳನ್ನು ಪ್ರದರ್ಶಿಸುತ್ತಾ ನಟನೆ ಮಾಡುತ್ತಾರೆ ಮೈದುನನ ಮೇಲೆ ಪ್ರೀತಿಯ ಹಕ್ಕು ತೋರಿಸುತ್ತಾ ಮಮತೆಯಿಂದ ಅತ್ತಿಗೆಯವರು ಈ ನೃತ್ಯ ಮಾಡಿದ್ದಾರೆ. ಅತ್ತಿಗೆ ತನ್ನ ಮೈದುನನ ಮದುವೆಯಲ್ಲಿ ತೋರಿಸುತ್ತಿರುವ ಈ ಮಮತೆ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಅತ್ತಿಗೆಯವರು ತೊಟ್ಟುಕೊಂಡ ಸರಳವಾದ ಹಾಗೂ ಶಿಸ್ತಿನಿಂದ ಕೂಡಿದ ಉಡುಪು ಅವರ ಕುಣಿತಕ್ಕೆ ಮತ್ತಷ್ಟು ಮೆರಗು ತಂದಿದೆ.

ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದೆ.