ಮರದಲ್ಲೇ 20 ವರ್ಷಗಳ ಕಾಲ ಅಡಗಿ ಕುಳಿತಿತ್ತು ಸಾವು, ಇದು ಹತ್ಯೆಯೋ, ಅವಘಡವೋ ನೀವೇ ನಿರ್ಧರಿಸಿ
ಅಮೆರಿಕಾದಲ್ಲಿನ ಒಬ್ಬ ವ್ಯಕ್ತಿಯ ಸಾವಿನ ಕಥೆಯನ್ನು ಕೇಳಿದಾಗ ಆತನ ಸಾವು ಅಪಘಾತವೋ ಅಥವಾ ಅದೊಂದು ಕೊಲೆಯೋ, ಏನು ಹೇಳಬೇಕು ಎಂದು ತಿಳಿಯದು. ವ್ಯಕ್ತಿಯೊಬ್ಬನುವ ಯಾವ ಮೃ ತ್ಯು ವಿನಿಂದ 20 ವರ್ಷಗಳ ಮೊದಲು ತಪ್ಪಿಸಿಕೊಂಡಿದ್ದನೋ, ಅದೇ ಮೃತ್ಯು 20 ವರ್ಷಗಳ ನಂತರ ಮತ್ತೆ ಆತನನ್ನು ಅರಸಿ ಬಂದು ಆತನ ಪ್ರಾಣವನ್ನು ಕೊಂಡೊಯ್ದಿದೆ. ಹೆನ್ಸಿ ಜಿಗ್ ಲ್ಯಾಂಡ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಮೆಸ್ಸಿ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಮೆಸ್ಸಿ ಕೂಡಾ ಹೆನ್ರಿ ಮೇಲೆ ಬಹಳ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಒಂದು ದಿನ ಮೆಸ್ಸಿ ಹೆನ್ರಿಯ ಹತ್ತಿರ ಮದುವೆಯ ವಿಚಾರವನ್ನು ಪ್ರಸ್ತಾಪ ಮಾಡಿದಾಗ, ಹೆನ್ರಿ ಮದುವೆಗೆ ಒಪ್ಪಿಕೊಳ್ಳಲಿಲ್ಲ. ಹೆನ್ರಿಯ ಈ ನಿರ್ಧಾರದಿಂದ ಮೆಸ್ಸಿ ಆ ಘಾತಕ್ಕೆ ಒಳಗಾದಳು. ಆಕೆಗೆ ಆ ತಿರಸ್ಕಾರ ಸಹಿಸುವುದು ಸಾಧ್ಯವಿರಲಿಲ್ಲ.
ಖಿನ್ನತೆಗೆ ಒಳಗಾದ ಆಕೆ ಆ ತ್ಮ ಹ ತ್ಯೆ ಮಾಡಿಕೊಂಡು ಇಹ ಲೋಕವನ್ನು ತ್ಯಜಿಸಿದಳು. ಆದರೆ ಹೆನ್ರಿ ಗೆ ಮಾತ್ರ ಅಂತಹ ಯಾವುದೇ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಮೆಸ್ಸಿಯ ಆ ತ್ಮ ಹ ತ್ಯೆಯಿಂದ ಹೆನ್ರಿ ಗೆ ಯಾವುದೇ ರೀತಿಯ ಬೇಸರವಾಗಲಿಲ್ಲ. ಉದ್ಯಮಿಯಾದ ಆತ ಎಂದಿನಂತೆ ತನ್ನ ಚಟುವಟಿಕೆಗಳಲ್ಲಿ ತೊಡಗಿಕೊಂಡ. ಆದರೆ ಮೆಸ್ಸಿಗೆ ಆಕೆಯನ್ನು ಬಹಳ ಇಷ್ಟಪಡುವ ಒಬ್ಬ ಸಹೋದರನಿದ್ದ. ಮೆಸ್ಸಿಯ ಸಹೋದರ ತನ್ನ ಸಹೋದರಿಯ ಸಾವಿಗೆ ಕಾರಣವಾದ ಹೆನ್ರಿಯ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ. ತಾನು ಹೇಗಾದರೂ ಮಾಡಿ ಹೆನ್ರಿ ಯನ್ನು ಕೊ ಲ್ಲ ಬೇಕೆಂದು ಆಲೋಚನೆ ಮಾಡಿದ. ಅದಕ್ಕಾಗಿ ಆತ ಒಂದು ಪಿಸ್ತೂಲನ್ನು ಹಾಗೂ ಹೆನ್ರಿಯನ್ನು ಕೊ ಲ್ಲು ವ ಕ ಜಾಗವನ್ನು ನಿರ್ಧರಿಸಿದನು. ಹೆನ್ರಿ ಮರಗಳ ವ್ಯಾಪಾರವನ್ನು ಮಾಡುತ್ತಿದ್ದನು. ಆದ ಕಾರಣ ಆಗಾಗ ಆತ ಕಾಡಿಗೆ ಭೇಟಿ ನೀಡುತ್ತಿದ್ದರು.
ಹೀಗೆ ಒಂದು ಸಲ ಹೆನ್ರಿ ಕಾಡಿಗೆ ಬಂದಾಗ, ಅಲ್ಲೇ ಕಾದು ಕುಳಿತಿದ್ದ ಮೆಸ್ಸಿಯ ಸಹೋದರ ಹೆನ್ರಿಯ ಮೇಲೆ ಗುಂಡು ಹಾರಿಸಿದ. ಆದರೆ ಹೆನ್ರಿಯ ಅದೃಷ್ಟ ಎನ್ನುವಂತೆ ಗುಂಡು ಆತನಿಗೆ ಸ್ವಲ್ಪವೇ ತಾಗಿ, ಸೀದಾ ಒಂದು ಮರವನ್ನು ಹೊಕ್ಕಿತು. ಹೆನ್ರಿ ಸ್ವಲ್ಪ ಗಾಯಗೊಂಡು ಕೆಳಗೆ ಬಿದ್ದ. ಇದನ್ನು ನೋಡಿದ ಮೆಸ್ಸಿಯ ಸಹೋದರ ಆತ ಸತ್ತೇ ಹೋದರೆಂದು ಭಾವಿಸಿ ಮನೆಗೆ ಹಿಂತಿರುಗಿದ. ಸ್ವಲ್ಪ ಹೊತ್ತಿನ ನಂತರ ಹೆನ್ರಿ ಮೇಲೆದ್ದು ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡ. ಆದರೆ ಹೆನ್ರಿ ಸತ್ತುಹೋದರೆಂದು ಭಾವಿಸಿ ಮನೆಗೆ ಬಂದ ಮೆಸ್ಸಿಯ ಸಹೋದರನಿಗೆ ಇನ್ನು ತನಗೆ ಜೀವನದಲ್ಲಿ ಯಾವುದೇ ಗುರಿ ಇಲ್ಲ ಎಂದು ನಿರ್ಧರಿಸಿ, ಪ್ರೀತಿಯ ಸಹೋದರಿಯೇ ಇಲ್ಲದ ಮೇಲೆ ಬದುಕು ಏಕೆ?? ಎಂದು ತಾನು ಆತ್ಮಹತ್ಯೆ ಮಾಡಿಕೊಂಡ.
ಇತ್ತ ಕಡೆ ಹೆನ್ರಿ ತನ್ನ ಹೆಂಡತಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದ. ಇದೆಲ್ಲ ಕಳೆದು ಇಪ್ಪತ್ತು ವರ್ಷಗಳ ನಂತರ ವಿಧಿ ಆಡಿದ ಆಟ ನಿಜಕ್ಕೂ ಯಾರು ಊಹಿಸಲು ಸಾಧ್ಯವೇ ಇರಲಿಲ್ಲ ಎನ್ನುವಂತಿತ್ತು. ಹೌದು ಹೆನ್ರಿ ಮರಗಳ ವ್ಯಾಪಾರದ ವಿಷಯದಲ್ಲಿ ಹ ಬೇಟಿ ನೀಡಿದ. ಆ ಕಾಲದಲ್ಲಿ ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಲು ಡೈನಾಮೇಟ್ ಗಳನ್ನು ಬಳಸಲಾಗುತ್ತಿತ್ತು. ಇಲ್ಲಿ ಕೂಡಾ ಅದೇ ರೀತಿ ಡೈನಾಮೇಟ್ ಗಳನ್ನು ಬಳಸಲಾಯಿತು. ಡೈನಾಮೇಟ್ ಸಿಡಿದಾಗ 20 ವರ್ಷಗಳ ಹಿಂದೆ ಮೆಸ್ಸಿಯ ಸಹೋದರ ಯಾವ ಕಾರಣಕ್ಕೆ ಗುಂಡು ಹಾರಿಸಿ, ಅದು ಮರವೊಂದರಲ್ಲಿ ಸೇರಿತ್ತೋ, ಅದೇ ಗುಂಡು ಮತ್ತೊಮ್ಮೆ ಸಿಡಿದು 50 ಅಡಿ ದೂರದಲ್ಲಿ ನಿಂತಿದ್ದ ಹೆನ್ರಿಯ ತಲೆಗೆ ತಂದು ಬಡಿಯಿತು. ಹೆನ್ರಿ ಸ್ಥಳದಲ್ಲೇ ಸತ್ತು ಬಿದ್ದ. 20 ವರ್ಷಗಳ ಹಿಂದೆ ಮೆಸ್ಸಿಯ ಸಹೋದರ ತಪ್ಪು ಕಲ್ಪನೆಯಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದ. ಆದರೆ ಆತನ ಉದ್ದೇಶ 20 ವರ್ಷಗಳ ನಂತರ ಪೂರ್ತಿಯಾಗಿತ್ತು. ಅಲ್ಲಿಗೆ ಹೆನ್ರಿಯ ಅದೃಷ್ಟ ಮುಗಿದಿತ್ತು.