ಮರಿಗಳ ರಕ್ಷಣೆಗಾಗಿ ಒಂದರ ಮೇಲೆ ಮತ್ತೊಂದು ಧಾಳಿಯಿಟ್ಟ ಆನೆ ಮತ್ತು ಘೇಂಡಾಮೃಗ: ಮಾತೃಪ್ರೇಮ ಇದೇ ಎಂದು ಮೆಚ್ಚಿದ ನೆಟ್ಟಿಗರು
ತಾಯಿಯ ಪ್ರೀತಿ ಎನ್ನುವ ವಿಷಯ ಬಂದಾಗಲೆಲ್ಲ ಅದು ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆಯುತ್ತದೆ. ಏಕೆಂದರೆ ಈ ಜಗತ್ತಿನಲ್ಲಿ ಮಾತೃ ಪ್ರೇಮಕ್ಕೆ ಮಿಗಿಲಾದಂತಹುದು ಇನ್ನಾವುದೂ ಇಲ್ಲ ಎಂಬುದನ್ನು ಜಗತ್ತಿನ ಎಲ್ಲರೂ ಕೂಡಾ ಒಪ್ಪುವಂತಹ ವಾಸ್ತವವಾದ ವಿಷಯವಾಗಿದೆ. ತಾಯಿಯು ತೋರುವ ನಿಷ್ಕಲ್ಮಶವಾದ ಪ್ರೀತಿ, ನಿಸ್ವಾರ್ಥದಿಂದ ತೋರುವ ಮಮತೆ, ಮಾಡುವ ಆರೈಕೆಗಳು ಇನ್ನು ಯಾರಿಂದಲೂ ಕೂಡಾ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಮಾತೃ ಪ್ರೇಮದ ವಿಚಾರದಲ್ಲಿ ಪ್ರಾಣಿ ಹಾಗೂ ಮನುಷ್ಯರಿಗೆ ವ್ಯತ್ಯಾಸವಿಲ್ಲ. ಇಲ್ಲಿ ತನ್ನ ಶಿಶುಗಳಿಗೆ ತೊಂದರೆಯಾಗುತ್ತದೆ ಎನ್ನುವ ಅರಿವಾದ ಕೂಡಲೇ ತಾಯಿಯು ತನ್ನ ಮಕ್ಕಳನ್ನು ಕಾಪಾಡಲು ಮುಂದಾಗುವುದು ಸಹಜ. ಅದಕ್ಕಾಗಿ ಆಕೆ ಇಂತಹ ಅಪಾಯವನ್ನು ಬೇಕಾದರೂ ಎದುರಿಸಲು ಸಿದ್ಧವಾಗಿರುತ್ತಾಳೆ.
ಪ್ರಾಣಿಗಳ ವಿಚಾರಕ್ಕೆ ಬಂದಾಗಲೂ ಅರಣ್ಯಗಳಲ್ಲಿ ವಾಸಿಸುವ ವನ್ಯ ಜೀವಿಗಳು ತಮ್ಮ ಮರಿಗಳನ್ನು ಬಹಳ ಆರೈಕೆಯಿಂದ ಸಾಕುವುದು ಮಾತ್ರವೇ ಅಲ್ಲದೇ ಕ್ರೂ ರ ಮೃ ಗಗಳ ಆಕ್ರಮಣದಿಂದ ಕಾಪಾಡಲು ಸದಾ ಸಜ್ಜಾಗಿರುತ್ತವೆ. ಅಲ್ಲದೆ ಅಂತಹ
ಅ ಪಾ ಯ ವೇನಾದರೂ ಎದುರಾದರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಮರಿಗಳನ್ನು ಕಾಪಾಡುವ ಪ್ರಯತ್ನವನ್ನು ಮಾಡುತ್ತವೆ. ಹೆಣ್ಣು ಅಥವಾ ತಾಯಿಯಾದ ಪ್ರಾಣಿಯು ಹೀಗೆ ಮರಿಗಳನ್ನು ರಕ್ಷಣೆ ಮಾಡುವ ಅದೆಷ್ಟೋ ವೀಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಈಗಾಗಲೇ ವೈರಲ್ ಆಗಿವೆ. ಈಗ ಅಂತಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ಇಲ್ಲಿ ಎರಡು ಪ್ರಾಣಿಗಳ ನಡುವೆ ನಡೆದ ಸಣ್ಣ ಹೋ ರಾ ಟ ದ ದೃಶ್ಯ ಇಲ್ಲಿದೆ.
ವಿಡಿಯೋದಲ್ಲಿ ಗಮನಿಸಿದಾಗ ಹೆಣ್ಣಾನೆಯೊಂದು ತನ್ನ ಮರಿಗಳ ದಂಡಿನ ಜೊತೆಗೆ ನೀರಿನ ಹೊಂಡದ ಬಳಿಗೆ ಬಂದಿದೆ. ಮರಿಗಳ ದಂಡು ಸ್ವಲ್ಪ ದೂರದಲ್ಲಿ ಇದ್ದು, ಅನೆಯು ಮೊದಲು ನೀರಿನ ಹೊಂಡದ ಬಳಿಗೆ ಹೆಜ್ಜೆ ಹಾಕಿದೆ. ಆದರೆ ಅದೇ ವೇಳೆಗೆ ಅಲ್ಲೇ ತನ್ನ ಮರಿಯೊಂದಿಗೆ ಇದ್ದ ಗೆಂಡಾಮೃಗವೊಂದು, ಬಹುಶಃ ಆನೆ ತನ್ನ ಮರಿಗೆ ತೊಂದರೆ ಕೊಡಬಹುದೇನೋ ಎನ್ನುವ ಆತಂಕದಿಂದ ಆನೆಯ ಮೇಲೆ ಧಾ ಳಿ ಇಡಲು ಮುಂದಾಗಿದೆ. ಆನೆ ಕೂಡ ಅದೇ ರೀತಿ ಭಾವಿಸಿ, ಅದೇ ಆಲೋಚನೆಯಿಂದ ಘೇಂಡಾಮೃಗದ ಮೇಲೆ ಧಾ ಳಿಯನ್ನು ಇಡಲು ತಾನೂ ಮುಂದಾಗಿದೆ. ಮೊದಲು ಆನೆಯ ಕಡೆಗೆ ನುಗ್ಗಿ ಬಂದ ಘೇಂಡಾಮೃಗ ಆನೆಯ ಧಾ ಳಿ ಯನ್ನು ತಡೆಯಲಾಗದೆ ಅಲ್ಲಿಂದ ಓಡಿ ಹೋಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಶೇರ್ ಮಾಡಿರುವ ಈ ವಿಡಿಯೋ ಜೊತೆಗೆ ಅವರು ಶೀರ್ಷಿಕೆಯಲ್ಲಿ ಭೂಮಿಯ ಮೇಲಿನ ದೊಡ್ಡ ಗಾತ್ರದ ಪ್ರಾಣಿ, ವಿಶ್ವದ ಎರಡನೇ ಡೊಡ್ಡ ಸಸ್ತನಿಯ ಮೇಲೆ ಮಾಡಿದ ಧಾ ಳಿ ಎಂದು ಬರೆದುಕೊಂಡಿದ್ದಾರೆ. ಇನ್ನು ಅವರು ಶೇರ್ ಮಾಡಿದ ಈ ವೀಡಿಯೋವನ್ನು ಈಗಾಗಲೇ ಮೂರು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಒಂದು ಸಾವಿರಕ್ಕಿಂತ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದಾರೆ ಹಾಗೂ ನೂರಾರು ಜನ ನೆಟ್ಟಿಗರು ಈ ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ವಟಿರ್ ಬಳಕೆದಾರರೊಬ್ಬರು, ಆನೆ ಧಾ ಳಿ ಮಾಡಿದ ಸಂದರ್ಭದಲ್ಲಿ ಘೇಂಡಾಡಾಮೃಗ ದ ಮರಿಗೆ ಯಾವುದೇ ತೊಂದರೆ ನೀಡಿಲ್ಲ. ಅದೇ ಗಜ ರಾಜನ ಒಳ್ಳೆಯತನ, ಅದಕ್ಕೆ ಅದನ್ನು ಪೂಜಿಸಲಾಗುವುದು ಎಂದಿದ್ದಾರೆ.
Thr largest land animal on Earth takes on the second largest land mammal in the world. pic.twitter.com/hDhXR8sm8p
— Susanta Nanda IFS (@susantananda3) December 19, 2020
ಇನ್ನೊಬ್ಬ ಟ್ವಿಟರ್ ಬಳಕೆದಾರರು ಕೂಡಾ ಇಲ್ಲಿ ಎರಡು ಪ್ರಾಣಿಗಳು ತಮ್ಮ ತಮ್ಮ ಮರಿಗಳ ರಕ್ಷಣೆಯ ವಿಷಯ ಬಂದೊಡನೆ ಇಂತಹದೊಂದು ಕಾ ದಾ ಟ ಕ್ಕೆ ಮುಂದಾಗಿವೆ, ಅವುಗಳಿಗೆ ಮರಿಯ ರಕ್ಷಣೆ ಮುಖ್ಯ ಎಂದಿದ್ದಾರೆ. ಮತ್ತೆ ಕೆಲವರು ತಾಯಿಯ ಪ್ರೀತಿಯೇ ಹಾಗೆ ಶಿಶುವಿನ ರಕ್ಷಣೆ ಎಂದು ಬಂದಾಗ ಎದುರಿಗಿರುವ ಪ್ರಾಣಿಯ ಗಾತ್ರವನ್ನು ಲೆಕ್ಕ ಮಾಡುವುದಿಲ್ಲ, ಎಂತಹ ಅ ಪಾ ಯವನ್ನು ಬೇಕಾದರೂ ಎದುರಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು ಕಾಡಿನಲ್ಲಿ ತನ್ನ ಜಾಗಕ್ಕೆ ಅನ್ಯರ ಪ್ರವೇಶವನ್ನು ಪ್ರಾಣಿಗಳು ಒಪ್ಪದಿರುವಾಗ ಇಂತಹ ಹೋ ರಾ ಟ ನಡೆಯುವುದು ಎಂದಿದ್ದಾರೆ.