ಮರಿಯಾನೆಗೆ ಜನ್ಮ ನೀಡುತ್ತಿತ್ತು ತಾಯಿಯಾನೆ; ಗುಂಪಾಗಿ ನಿಂತವು ಆನೆಗಳು ಸುತ್ತಲೂ! ವೈರಲ್ ಆಯ್ತು Video…

ಸೋಶಿಯಲ್ ಮೀಡಿಯಾದಲ್ಲಿ ಮಸಾಯಿ ಮಾರಾ ನ್ಯಾಷನಲ್ ಪಾರ್ಕ್ ನ ವಿಡಿಯೋ ಒಂದು ಸದ್ಯ ಜೋರಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದ ದೃಶ್ಯದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡುತ್ತಿದೆ. ಪ್ರಸ್ತುತ ವಿಡಿಯೋವನ್ನು ಗ್ಯಾಬರಿಯಲ್ ಕೋಮೋ ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 7 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

59 ಸೆಕೆಂಡುಗಳ ಈ ಫುಟೇಜ್ ನಲ್ಲಿ ಆನೆಯ ಮರಿ ತನ್ನ ತಾಯಿಯ ಗರ್ಭದಿಂದ ಯಾವ ರೀತಿ ಭೂಮಿಗೆ ಆಗಮಿಸುತ್ತದೆ ಎಂಬುದನ್ನು ನೋಡಬಹುದು. ತಾಯಿಆನೆಯ ಸುತ್ತಲೂ ಬೇರೆಲ್ಲ ಆನೆಗಳು ನಿಂತಿವೆ.

ನೋಡಿ ಈ ವಿಡಿಯೋ…

ತಾಯಿಯ ಗರ್ಭದಿಂದ ಭೂಮಿಗೆ ಬಂದ ನಂತರ ಆನೆಯ ಈ ಪುಟ್ಟಮರಿ ಎದ್ದು ನಿಲ್ಲಲು ಸಂಘರ್ಷ ಮಾಡುತ್ತಿದೆ. ವಿಶೇಷವೆಂದರೆ ಆನೆಯೊಂದು ಗರ್ಭ ನೀಡುವಾಗ ಉಳಿದ ಆನೆಗಳು ಅದರ ಸುತ್ತಲೂ ನಿಲ್ಲುತ್ತವೆ. ವಿಡಿಯೋದ ಕ್ಯಾಪ್ಷನಲ್ಲಿ ‘ಆನೆಯೂ ಕೀನ್ಯಾದ ಮಸಾಯಿ ಮಾರಾ ರಿಸರ್ವ್ ನಲ್ಲಿ ಮರಿಯಂದಕ್ಕೆ ಜನ್ಮ ನೀಡಿತು’, ಎಂದು ಬರೆದಿದ್ದಾರೆ.

ವಿಡಿಯೋ ನೋಡಿ

ಆನೆ ತನ್ನ ಮರಿಗೆ ಹೇಗೆ ಜನ್ಮ ನೀಡುತ್ತದೆ ಎಂಬುದನ್ನು ತಿಳಿಯಲು ಅಥವಾ ನೋಡಲು ಅನೇಕ ನೇಟಿಜನ್ಸ್ ಗಳು ತುಂಬಾ ಉತ್ಸುಕರಾಗಿದ್ದರು. ಪ್ರಸ್ತುತ ದೃಶ್ಯ ನೋಡಿ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬನು ‘ಅಯ್ಯೋ ಪಾಪ ಮಗು ಮಳೆಯಲ್ಲಿಯೇ ಹುಟ್ಟಿತು’ ಎಂದರೆ, ಇನ್ನೊಬ್ಬ ‘ಬೆಟ್ಟದ ಮೇಲೆ ಮಗು ಹುಟ್ಟಿದೆ ಮತ್ತು ಕೆಳಗೆ ಬೀಳುತ್ತಿದೆ’ ಎಂದಿದ್ದಾನೆ.