ಮರುಭೂಮಿಯಾದ ದುಬೈ ಶ್ರೀಮಂತ ರಾಷ್ಟ್ರ ಹೇಗಾಯ್ತು? ಇಲ್ಲಿದೆ ಅದರ ರೋಚಕ ಇತಿಹಾಸ

ದುಬೈ ಎಂದರೆ ಭೂ ಲೋಕ ಸ್ವರ್ಗ, ಪ್ರವಾಸಿಗರ ಕನಸು ಎನ್ನುವಂತೆ ಬೆಳೆದು ನಿಂತಿರುವ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದು. ದಶಕಗಳ ಹಿಂದೆ ಒಂದು ಮರುಭೂಮಿಯಾಗಿದ್ದ ದುಬೈ ಇಂದು ಶ್ರೀಮಂತ ದೇಶ, ಕನಸಿನ ಲೋಕ ತೆರೆದಿಡುವ ಪ್ರವಾಸಿ ತಾಣ, ಸಕಲ ವೈಭೋಗಗಳಿಂದ ಮೆರೆಯುವ ನಾಡಾಗಿದ್ದು ವಿಚಿತ್ರವೆಂದರೆ ಅವರಿಗೆ ಇಲ್ಲಿ ಸರಿಯಾದ ನೀರು, ಆಹಾರ ಮತ್ತು ಖನಿಜಗಳು ಕೂಡಾ ಲಭ್ಯವಿಲ್ಲ. ಹಾಗಿದ್ದರೆ ದುಬೈ ಇಷ್ಟೊಂದು ಶ್ರೀಮಂತ ರಾಷ್ಟ್ರವಾಗಿ ಜಗತ್ತಿನ ಕಣ್ಣು ಕು ಕ್ಕುವಂತೆ ಬೆಳೆದಿದ್ದಾರೂ ಹೇಗೇ? ಎನ್ನುವುದರ ಹಿಂದೆ ನಿಜಕ್ಕೂ ಒಂದು ಸ್ಪೂರ್ತಿಯನ್ನು ನೀಡುವ ಕಥೆಯೇ ಇದೆ ಎಂದು ತಿಳಿದರೆ ನೀವು ಕೂಡಾ ಮೆಚ್ಚದೇ ಇರಲಾರಿರಿ ಹಾಗೂ ಹೊಗಳದೇ ಸುಮ್ಮನಾಗವುದಿಲ್ಲ.

ಅನೇಕರು ದುಬೈ ತೈಲ ವ್ಯಾಪಾರದಿಂದ ದೊಡ್ಡ ಲಾಭ ಪಡೆಯುತ್ತಿದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಇದು ಸತ್ಯಕ್ಕೆ ಬಹಳ ದೂರವಾದ ಮಾತು. ಏಕೆಂದರೆ‌ ದುಬೈನ ಆದಾಯದ ಕೇವಲ 1% ಮಾತ್ರವೇ ತೈಲ ವ್ಯಾಪಾರದಿಂದ ಗಳಿಸುವುದು. ಹಾಗಾದರೆ ದುಬೈನ ಆದಾಯದ ಮೂಲ ಏನು ಎನ್ನುವಿರಾ? ಬನ್ನಿ ವಿವರವಾಗಿ ತಿಳಿಯೋಣ. ದುಬೈ ಇಂದು ಈ ಮಟ್ಟಕ್ಕೆ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಅಲ್ಲಿನ ಶೇಖ್ ಮಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್‌. ಇವರು ನೀಡಿದ ಒಂದು ಮಾಸ್ಟರ್ ಸ್ಟ್ರೋಕ್ ಇಂದು ದುಬೈ ಅನ್ನು ಜಗತ್ತಿನ ಶ್ರೀಮಂತ ಹಾಗೂ ಐಶಾರಾಮೀ ಸೌಲಭ್ಯಗಳುಳ್ಳ ದೇಶವನ್ನಾಗಿ ಮಾಡಿದೆ. ಹೌದು ತೈಲದಿಂದ ಟೂರಿಸಂ ಎನ್ನುವ ಅವರ ಕಾರ್ಯ ತಂತ್ರ ದುಬೈನ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ ಹಾಕಿದೆ.

ದುಬೈನ ಮೂಲ ಮಂತ್ರ ಏನೇ ಮಾಡಿದರೂ ದೊಡ್ಡದಾಗಿ ಮಾಡುವುದು, ಇತಿಹಾಸ ಸೃಷ್ಟಿಸುವುದು, ಏನಾದರೂ ಸರಿ ವಿಭಿನ್ನವಾಗಿ ಮಾಡಿದಾಗ ಜಗತ್ತು ಸಹಜವಾಗಿಯೇ ದೃಷ್ಟಿ ಹರಿಸುತ್ತದೆ, ತಮ್ಮ ಬಗ್ಗೆ ಚರ್ಚಿಸುತ್ತದೆ, ಭೇಟಿ ನೀಡುತ್ತದೆ ಎಂಬುದನ್ನು ಅರಿತ ಶೇಖ್ ಮಹಮದ್ ಬಿನ್ ರಾಶಿದ್ ಅಲ್ ಮುಕ್ತುಮ್ ಅವರ ಜೊತೆಗೆ ಅವರಂತೇ ಆಲೋಚಿಸುವ ವ್ಯಕ್ತಿಗಳು ಜೊತೆಗೂಡಿದರು, ಅದರ ಫಲವೇ ವಿಶ್ವದಲ್ಲೇ ಎತ್ತರವಾದ ಬುರ್ಜು್ ಕಲೀಫಾ ಕಟ್ಟಡ, ನೀರಿನೊಳಗೆ ಆಟದ ಮೈದಾನ, ಮಾನವ ನಿರ್ಮಿತ ದ್ವೀಪಗಳು, ವಿಶಾಲವಾದ ಮಾಲ್ ಗಳ ನಿರ್ಮಾಣಕ್ಕೆ ಕಾರಣವಾಯಿತು. ಲೈಫ್ ಟೈಂ ಟೂರಿಸಂ ಅಭಿವೃದ್ಧಿಯಾಯಿತು. ಇಂದು ದುಬೈನ ಮೂಲ ಆದಾಯ ಬರುವುದೇ ಟೂರಿಸಂ ನಿಂದ‌ ಎಂದರೆ ಸುಳ್ಳಲ್ಲ.

ವಿಶಿಷ್ಠವಾದ, ವಿಭಿನ್ನವಾದ ನಿರ್ಮಾಣಗಳ ಕಡೆ ಗಮನ ನೀಡುವ ದುಬೈ ನ ಆಡಳಿತ ಮುಂಬರುವ ಹತ್ತು ವರ್ಷಗಳಲ್ಲಿ ದುಬೈ ಹೇಗಿರಬೇಕು ಎಂದು ಪ್ಲಾನ್ ಮಾಡುತ್ತದೆ. ನೀರಿಲ್ಲದ ದೇಶದಲ್ಲಿ ವಿಶ್ವದಲ್ಲೇ ಅತಿ ಸುಂದರವಾದ ಹೂವಿನ ಉದ್ಯಾನವನ ಇದೆ. ಇನ್ನು ದುಬೈನಲ್ಲಿ ಸರ್ಕಾರಿ ಕೆಲಸಗಳಿಗೆ ಅಗತ್ಯ ಇರುವಷ್ಟು ಮಂದಿಯನ್ನು ಮಾತ್ರವೇ ನೇಮಕ ಮಾಡಲಾಗುತ್ತದೆ. ಪೋಲಿಸ್ ಠಾಣೆಗಳು ಹೆಚ್ಚಿವೆಯಾದರೂ ಪೋಲಿಸರ ಸಂಖ್ಯೆ ಕಡಿಮೆ, ಏಕೆಂದರೆ ಬಹುತೇಕ ಕಾರ್ಯಗಳು ಆನ್ಲೈನ್ ನಲ್ಲೇ ನಡೆಯುತ್ತವೆ‌. ಎಲ್ಲಾ ಸೌಲಭ್ಯ ನೀಡುವ ಈ ದೇಶದಲ್ಲಿ ತಪ್ಪು ಮಾಡಿದವರಿಗೆ ವಿ ಧಿಸುವ ದಂ ಡ ಕೂಡಾ ದೊಡ್ಡ ಪ್ರಮಾಣದಲ್ಲೇ ಇರುವುದು ತಪ್ಪು ಮಾಡುವುದಕ್ಕೆ ಕಡಿವಾಣ ಹಾಕಿದೆ.

ದುಬೈನಲ್ಲಿ ಡಿಸ್ನಿ ಲ್ಯಾಂಡ್ ನಿರ್ಮಾಣಕ್ಕೆ ಡಿಸ್ನಿ ಒಪ್ಪದ ಕಾರಣ ಅದಕ್ಕಿಂತಲೂ ದೊಡ್ಡದಾದ ದುಬೈ ಲ್ಯಾಂಡ್ ನಿರ್ಮಾಣ ಮಾಡಿದೆ ಇಲ್ಲಿನ ಆಡಳಿತ. ಮಾನವ ನಿರ್ಮಿತ ದ್ವೀಪಗಳಲ್ಲಿ ಮನೆಗಳ ನಿರ್ಮಾಣ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಮಾಲ್ ಫೆಸ್ಟಿವಲ್ ಕೂಡ ಇಲ್ಲಿ ಜನಪ್ರಿಯ. ಇದೀಗ ವಿಶ್ವದಲ್ಲೇ ಅತಿ ದೊಡ್ಡ ಮಾಲ್ ನಿರ್ಮಾಣಕ್ಕೆ ದುಬೈ ಕೈ ಹಾಕುತ್ತಿದ್ದು, ಈ ಮಾಲ್ ನೊಳಗೆ ಸುಮಾರು ಏಳು ಕಿಲೋ ಮೀಟರ್ ಗಳ ವಾಕಿಂಗ್ ಸ್ಟ್ರೀಟ್, ಮಕ್ಕಳಿಗೆ ಗಾರ್ಡನ್ ನಂತಹ ಆಧುನಿಕ ಸೌಲಭ್ಯಗಳು ಇರುವುದಂತೆ. ಇದಲ್ಲದೇ ಸಾಗರದ ತಳದಲ್ಲಿ ನೀರಿನೊಳಗೆ ದುಬೈನಿಂದ ಭಾರತಕ್ಕೆ ಬುಲೆಟ್ ಟ್ರೈನ್ ನಿರ್ಮಾಣಕ್ಕೆ ಕೂಡಾ ಮುಂದಾಗಿದೆ ದುಬೈ.

ಒಟ್ಟಾರೆ ದುಬೈ ಜೀವನದಲ್ಲಿ ಒಂದು ಗುರಿ, ದೃಷ್ಟಿಕೋನ ಇದ್ದರೆ ಕನಸನ್ನು ನನಸು ಮಾಡಬಹುದು, ಮರಳು ಗಾಡಿನಲ್ಲಿ ಕೂಡಾ ಅಂದದ ಹೂ ಅರಳಿಸಬಹುದು ಎನ್ನವುದಕ್ಕೆ ಜೀವಂತ ಸಾಕ್ಷಿಯಾಗಿದೆ‌. ದುಬೈನಂತೆ ಎಲ್ಲಾ ಕಡೆ ಆಲೋಚನೆ ಮಾಡಿದರೆ ನಿಜಕ್ಕೂ ಅಭಿವೃದ್ಧಿ ಎನ್ನುವುದು ಕನಸಾಗಿ ಉಳಿಯದೇ ನನಸಾಗುವುದು ಖಚಿತ.