ಮರ ಕಡಿದ ವ್ಯಕ್ತಿಯನ್ನೇ ಕೊನೆಯಲ್ಲಿ ಎತ್ತಿ ನೆಲಕ್ಕಪ್ಪಳಿಸಿತು ಮರ; ಸೂಪರ್ ತಮಾಷೆಯ ವಿಡಿಯೋ ಶೇರ್ ಮಾಡಿದರು ಆನಂದ್ ಮಹೀಂದ್ರ.
ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಆನಂದ್ ಮಹೀಂದ್ರಾ ಅವರು ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಈಗ ತಮ್ಮ ಅಕೌಂಟ್ ನಿಂದ ತುಂಬಾ ವಿಶೇಷವಾದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನಂತರ ನಕ್ಕು ನಕ್ಕು ಸಾಕಾಗಿ ಹೋಗುತ್ತದೆ.
ಪ್ರಸ್ತುತ ವಿಡಿಯೋದ ಈ ದೃಶ್ಯದಲ್ಲಿ ಮೂವರು ಕೂಡಿ ದೊಡ್ಡದಾದ ಮರ ಒಂದನ್ನು ಕಡಿಯುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಮರ ಕಡಿದು ಕೆಳಗೆ ಉರುಳಿ ಬಿಡುತ್ತದೆ. ಆ ಮರ ಕೆಳಗೆ ಉರುಳುವಾಗ ಸುಮ್ಮನೆ ಉರುಳುವದಿಲ್ಲ. ತನ್ನನ್ನು ಕಡಿದ ಒಬ್ಬ ವ್ಯಕ್ತಿಗೆ ತುಂಬಾ ಖತರ್ನಾಕ್ ಶಿಕ್ಷೆ ಕೊಡುತ್ತದೆ.
ಅದೇ ಹೇಗೆ ಈ ವಿಡಿಯೋದಲ್ಲಿ ನೋಡಿ…
ಮರ ಕಡಿದು ಕೆಳಗೆ ಬೀಳುವಾಗ ದೊಡ್ಡ ಮರದ ಬೊಡ್ಡೆ ಕಡಿದ ವ್ಯಕ್ತಿಯ ಮುಂದೆಯೇ ಬರುತ್ತದೆ. ಆಗ ಮರದ ಬೊಡ್ಡೆ ಹಠಾತ್ ಒಮ್ಮೆಲೆ ಮೇಲೆ ಏಳುತ್ತದೆ. ಇದರಿಂದ ಪಕ್ಕದಲ್ಲಿಯೇ ನಿಂತ ವ್ಯಕ್ತಿಗೆ ಸರಿಯಾಗಿ ತನ್ನ ಮೇಲೆ ಎತ್ತಿಕೊಳ್ಳುತ್ತದೆ. ಆಗ ವ್ಯಕ್ತಿಗೆ ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿಯೇ ವ್ಯಕ್ತಿ ಬೊಡ್ಡೆಯ ಮೇಲೆ ಸವಾರಿ ಮಾಡಿರುತ್ತಾನೆ. ಕ್ಷಣದಲ್ಲಿ ಮರ ಆತನಿಗೆ ಎತ್ತಿ ಮತ್ತೆ ನೆಲಕ್ಕೆ ಅಪ್ಪಳಿಸಿ ಬಿಡುತ್ತದೆ. ಮರ ಕೊನೆಯ ಘಳಿಗೆಯಲ್ಲಿ ತನ್ನ ಸೇಡನ್ನು ಈ ರೀತಿಯಾಗಿ ತೀರಿಸಿಕೊಂಡಿದೆ ಎನ್ನಬಹುದು.
ಆನಂದ್ ಮಹೀಂದ್ರ ಅವರು ಶೇರ್ ಮಾಡಿದ ವಿಡಿಯೋಗೆ ಒಳ್ಳೆಯ ಕ್ಯಾಪ್ಶನ್ ನೀಡಿದ್ದಾರೆ. ಇಲ್ಲಿ ಅವರು ಮರವನ್ನು ಹೊಗಳಿದ್ದಾರೆ. ಹಾಗೂ ಅದು ವೀಡಿಯೋ ಮುಖಾಂತರ ಸ್ಪಷ್ಟವಾಗಿಯೇ ಸಂದೇಶವನ್ನು ನೀಡಿದೆ ಎಂದಿದ್ದಾರೆ.
ವಿಡಿಯೋ ನೋಡಿ
If you cut down trees, they won’t take it lying down 👏🏽👏🏽👏🏽https://t.co/TekNZiQSTF
— anand mahindra (@anandmahindra) August 23, 2022
ನೆಟ್ಟಿಗರು ಆನಂದ್ ಮಹೀಂದ್ರ ಅವರು ಶೇರ್ ಮಾಡಿದ ಈ ವೀಡಿಯೋವನ್ನು ಹಾಡಿ ಹೊಗಳಿದ್ದಾರೆ. ಪ್ರಕೃತಿಯ ಜೊತೆಗೆ ವೈರತ್ವ ಬೇಡ ಎಂದು ಒಬ್ಬ ಯೂಸರ್ ಎಂದಿದ್ದಾನೆ. ಇನ್ನೊಬ್ಬ ಯೂಸರ್ ಈ ಮರ ಕೊನೆ ಗಳಿಗೆಯಲ್ಲಿ ಮನುಷ್ಯನಿಗೆ, ‘ನಮ್ಮ ಅಳಿಗಾಲಿನಿಂದ ನಿಮ್ಮ ಉಳಿಗಾಲ ಎಂದಿಗೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ’ ಎಂದಿದ್ದಾನೆ.