ಮಳೆಯಲ್ಲಿ ಹೊರಬಿದ್ದ ಕೆಂಪು ಬಣ್ಣದ ಅಪರೂಪದ ಹಾವು; ಜನರಂತಿದ್ದಾರೆ “ಎಷ್ಟೊಂದು ಸುಂದರವಾಗಿದೆ!”
ಅಪರೂಪದ ಹಾವು, ರೆಡ್ ಕೊರಲ್ ಕುಕರಿ ಸ್ನೇಕ್ ಎಂದೇ ಹೆಸರಾದ ಈ ಹಾವಿನ ಫೋಟೋ ಸದ್ಯಕ್ಕೆ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದು UP ಯ ಲಖೀಮ್ ಪೂರ್ ನ್ಯಾಷನಲ್ ಪಾರ್ಕ್ ನಲ್ಲಿ ಎರಡು ದಿನ ಮುಂಚೆ ಕಂಡು ಬಂದಿದೆ. ಈ ಕೆಂಪು ಬಣ್ಣದ ಹಾವಿನ ಫೋಟೋ ಅಲ್ಲಿಯ ಕರ್ತವ್ಯನಿರತ ಅಧಿಕಾರಿಯೊಬ್ಬ ಕ್ಲಿಕ್ ಮಾಡಿದ್ದಾನೆ. ಆನಂತರ ಇದನ್ನು ವನ್ಯಜೀವ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಇಲಾಖೆಯವರು ಶೇರ್ ಮಾಡಿದ್ದಾರೆ.
ಈ ಪ್ರಜಾತಿಯ ಹಾವನ್ನು ಮೊಟ್ಟಮೊದಲು 1936 ರಲ್ಲಿ ದುಧವಾ ಹೆಸರಿನ ಊರಲ್ಲಿ ನೋಡಲಾಗಿತ್ತು. ಇದರ ಜ್ಯುಲಾಜಿಕಲ್ ಹೆಸರು ‘ಒಲಿಗೋಡೊನ್ ಖೇರಿಯನ್ಸಿಸ್’ ಇದೆ. ಹೊಳಪುಳ್ಳ ಈ ಹಾವಿನ ಆಕಾರ ವಿಶೇಷವಾಗಿದೆ. 82 ವರ್ಷಗಳ ದೀರ್ಘ ಅವಧಿಯ ನಂತರ ಮತ್ತೆ ಈಗ ಕಂಡು ಬಂದಿದೆ. ಭಾರತೀಯ ಅರಣ್ಯ ಇಲಾಖೆಯ ವರಿಷ್ಠ ಅಧಿಕಾರಿ ರಮೇಶ್ ಪಾಂಡೆಯವರ ಪ್ರಕಾರ ಈ ಹಾವು ತುಂಬಾ ಅಪರೂಪದದ್ದಾಗಿದೆ. ಮೊದಲು ಇದನ್ನು ನಾವು ನೋಡಿರಲಿಲ್ಲ ಎಂದು ಹೇಳುತ್ತಾರೆ.
ರವಿವಾರದಂದು ಫೋಟೋ ಶೇರ್ ಮಾಡುತ್ತ ವೈಲ್ಡ್ ಲೈನ್ಸ್ ಹೀಗೆ ಹೇಳಿದೆ, ದುಧವಾ ನ್ಯಾಷನಲ್ ಪಾರ್ಕ್ ವಿವಿಧತೆ ಮತ್ತು ಆಶ್ಚರ್ಯದಿಂದ ಕೂಡಿದೆ. ರೆಡ್ ಕೊರಲ್ ಕುಕರಿ ಹಾವು ತುಂಬಾ ಸುಂದರ ಮತ್ತು ದುರ್ಲಭವಾದ ಹಾವಿದೆ. ಇಂದು ಸಾಯಂಕಾಲ ಸಹುದ್ಯೋಗಿಗಳ ಮನೆಗಳ ಹತ್ತಿರ ಮಳೆಯಲ್ಲಿ ಕಂಡು ಬಂದಿದೆ.
#Dudhwa National Park is full of diversity and surprises. Red coral kukri snake, a very rare snake… today evening after rain near staff cottage.
— WildLense® (@WildLense_India) June 28, 2020
Courtesy: staff resident.#Snake #rare@rameshpandeyifs @ParveenKaswan @susantananda3 @htTweets @skumarias02 #wildlense pic.twitter.com/whk3Gtemde
ಸೋಶಿಯಲ್ ಮೀಡಿಯಾದಲ್ಲಿ ಈ ಹಾವಿನ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಜನರಿಗೆ ತುಂಬಾ ಮೆಚ್ಚಿಗೆಯಾಯ್ತು. ಅನೇಕರು ಟ್ವೀಟ್ ಮಾಡಿ ತಮ್ಮ ರಿಯಾಕ್ಷನ್ ಗಳನ್ನು ಕೊಟ್ಟಿದ್ದಾರೆ.
What a beauty!!!
— amy kaur (@Imaankaur) June 29, 2020
So beautiful!
— Harleen Kaur Dang (@DangHarleen) June 28, 2020
ತಜ್ಞರ ಪ್ರಕಾರ ರೆಡ್ ಕೋರೋಲ್ ಕುಕರಿ ಹಾವು ವಿಷಕಾರಿಯಾಗಿರುವದಿಲ್ಲ. ಇವು ಹುಳ ಹುಪ್ಪಡಿ ಮತ್ತು ವಾರ್ಮ್ಸ್ ಗಳನ್ನು ತಿನ್ನುತ್ತದೆ. ಇದಕ್ಕೆ ಕೇಸರಿ ಮಿಶ್ರ ಬಣ್ಣ ಮತ್ತು ಹಲ್ಲುಗಳ ಮೇಲಿಂದ ಹೆಸರಿಡಲಾಗಿದೆ. ಮೊಟ್ಟೆಗಳನ್ನೊಡೆಯಲು ನೇಪಾಳಿ ಕುಕರಿ ತರದ ಆಕಾರದ ಹಾಗೆ ಇರುತ್ತವೆ.