ಮಹಾಭಾರತ’ ಧಾರಾವಾಹಿಯ ಕಲಾಕಾರರಿಗೆ ಸಿಗುತ್ತಿದ್ದ ಸಂಬಳ ಎಷ್ಟಿತ್ತು ಗೊತ್ತಾ? ನಿಜಕ್ಕೂ ವಿಶ್ವಾಸವಿಡಲಾರಿರಿ!
ಲಾಕ್ ಡಾವುನ್ ಕಾರಣದಿಂದ ಕೇಂದ್ರ ಸರಕಾರವು ಜನರ ಮನರಂಜನೆಗಾಗಿ ಹಳೆಯ ಜನಪ್ರಿಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲು ಸೂಚಿಸಿತು.ಇದರಲ್ಲಿ ರಾಮಾಯಣ,ಮಹಾಭಾರತ,ಶ್ರೀಕೃಷ್ಣ ಗಳಂತಹ ಧಾರವಾಹಿಗಳಿವೆ.28 ಮಾರ್ಚ್ ದಿಂದ ಮಧ್ಯಾಹ್ನ 12 ಮತ್ತು ಸಾಯಂಕಾಲ 7 ಗಂಟೆಗೆ ‘ಮಹಾಭಾರತ’ ಈ ಮಹಾಧಾರಾವಾಹಿಯೂ ಮರುಪ್ರಸಾರವಾಗುತ್ತಿದೆ.ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ ಪಾತ್ರವರ್ಗಕ್ಕೆ ಆಗ ಎಷ್ಟೊಂದು ಸಂಬಳ ಅಥವಾ ಗೌರವಧನ ಸಿಗುತ್ತಿತ್ತು ಎಂಬುದರ ಬಗ್ಗೆ ತಿಳಿಯುವಾ.

ಆ ಸಮಯದಲ್ಲಿ ಈ ಧಾರಾವಾಹಿಯು TRP ಯ ಅನೇಕ ದಾಖಲೆಗಳನ್ನು ಧೂಳಿಪಟಮಾಡಿತು.tv ಯಲ್ಲಿ ಪ್ರಸಾರವಾಗುವ ಎಲ್ಲಕ್ಕೂ ಜನಪ್ರಿಯ ಕಾರ್ಯಕ್ರಮ ಇದಾಗಿತ್ತು.ಇದು ಭಾರತದಲ್ಲಷ್ಟೇ ಅಲ್ಲ ಯುನಾಯ್ಟೆಡ್ ಕಿಂಗಡಮ್ ಒಳಗೊಂಡು ಜಗತ್ತಿನ ಅನೇಕ ದೇಶಗಳಲ್ಲಿಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಆದಾಗ್ಯೂ ‘ಮಹಾಭಾರತದ’ ಸಂಪೂರ್ಣ ಪಾತ್ರವರ್ಗಕ್ಕೆ ಒಂದು ಎಪಿಸೋಡಿಗೆ ಬರೀ 3000 ₹ ಗೌರವಧನ ದೊರೆಯುತ್ತಿತ್ತು.
‘ಮಹಾಭಾರತ’ ಈ ಸಂಪೂರ್ಣ ಧಾರಾವಾಹಿಯನ್ನು ತಯಾರಿಸಲು 9 ಕೋಟಿ ₹ ಗಳಷ್ಟು ವೆಚ್ಚಮಾಡಲಾಗಿತ್ತು. ಆದರೆ ಈಗಿನ tv ಸೀರಿಯಲ್ ಕಲಾಕಾರರು ಲಕ್ಷದಿಂದ ಹಿಡಿದು ಕೋಟ್ಯಾವಧಿ ₹ ಗಳನ್ನು ಗಳಿಸುತ್ತಾರೆ.

ಆಗಿನ ಕಾಲದಲ್ಲಿ ಈ ಧಾರಾವಾಹಿ ಎಲ್ಲರಿಗೂ ಒಂದು ರೀತಿಯ ಹಚ್ಚನ್ನೇ ಹಿಡಿಸಿತ್ತು.ಇದರಲ್ಲಿ ಹಳ್ಳಿಯ ಜನರು ಸಹಿತ ಹಿಂದೆ ಇರಲಿಲ್ಲ.ಗ್ರಾಮೀಣ ಭಾಗದಲ್ಲಿಯ ಜನರು ಧಾರಾವಾಹಿ ಪ್ರಾರಂಭವಾಗುವ ಮುನ್ನವೇ ತಮ್ಮ ಕೆಲಸಗಳನ್ನು ಬೇಗ ಮುಗಿಸಿ ಊರಲ್ಲಿದ್ದ ಒಂದೋ ಎರಡೋ tv ಗಳ ಮುಂದೆ ಹೋಗಿ ಎಲ್ಲರೂ ಕೂಡಿಕೊಂಡೆ ‘ಮಹಾಭಾರತ’ವನ್ನು ವೀಕ್ಷಿಸುತ್ತಿದ್ದರು.