ಮಹಿಳೆಯ ಕಾಲುಂಗರ ಉಳಿಸಿತು ಮನೆಯಲ್ಲಿಯ ಲಕ್ಷಾಂತರ ರೂಪಾಯಿಯ ಸಂಪತ್ತು, ಆ#ಶ್ಚರ್ಯಗೊಳಿಸುವ ಘಟನೆ!!
ಪ್ರಸ್ತುತ ಡಿಜಿಟಲ್ ಯುಗದಿಂದ ಪ್ರತಿಯೊಬ್ಬರು ತಮ್ಮ ಬಳಿಯಲ್ಲಿದ್ದ ಹಣವನ್ನು ಸುರಕ್ಷಿತವಾಗಿ ಇಡಲು ಬ್ಯಾಂಕ್ ನಲ್ಲಿ ಇಡುತ್ತಿದ್ದಾರೆ. ಏಕೆಂದರೆ ಕಳ್ಳರು ತಮ್ಮ ಬಳಿಯಲಿದ್ದ ಹಣವನ್ನು ದೋಚಿಕೊಂಡು ಹೋಗಬಾರದು ಅನ್ನೋ ಉದ್ದೇಶದಿಂದ ಇಂದು ಪ್ರತಿಯೊಬ್ಬರು ತಮ್ಮ ಬಳಿಯಲಿದ್ದ ಸಂಪತ್ತು ಮತ್ತು ಹಣವನ್ನು ಹೆಚ್ಚಾಗಿ ಬ್ಯಾಂಕ್ ಖಾತೆ ಮತ್ತು ಬ್ಯಾಂಕ್ ಲಾಕರ್ ಗಳಲ್ಲಿ ಮುಚ್ಚಿಡುತ್ತಾರೆ. ಮೊದಲು ತುಂಬಾನೇ ಕಳ್ಳತನ ಮತ್ತು ದ#ರೊಡೆಯಂತಹ ಘಟನೆಗಳು ತುಂಬಾ ನಡೆಯುತ್ತಿದ್ದವು ಆದರೆ ಇಂದು ಆ ಪ್ರಮಾಣ ಕಡಿಮೆಯಾಗಿದೆ.
ಕೆಲವರ್ಷಗಳ ಹಿಂದೆ ಕಳ್ಳತನ ಮಾಡುವದು ಇದೊಂದು ಅವರ ದಿನನಿತ್ಯದ ಕಾರ್ಯವೇ ಆಗಿತ್ತು. ಕಳ್ಳತನ ಮಾಡುವ ಮುಖಾಂತರ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಆದರೆ ಇಂದು ಎಲ್ಲ ಕ್ಷೇತ್ರದಲ್ಲಿ ವಿಕಾಸ ವಾಗಿದ್ದರಿಂದ ತಮ್ಮ ಹೊಟ್ಟೆ ಪಾಡಿಗಾಗಿ ಯಾವುದೇ ಕೆಲಸ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಆದ್ದರಿಂದಲೇ ಈಗಿನ ಕಾಲದಲ್ಲಿ ಅಷ್ಟೊಂದು ಕಳ್ಳತನದ ಘಟನೆ ನಡೆಯುತ್ತಿಲ್ಲ. ಆದರೆ ಕೆಲವು ಜನ ಇಂದಿಗೂ ಸಹ ತಮ್ಮ ಕಾಯಕ ಹಾಗೆ ಮುಂದೇವರಿಸಿಕೊಂಡು ಬಂದಿದ್ದಾರೆ. ಅಂದರೆ ಕಳ್ಳತನ ಮಾಡುವ ಕಾರ್ಯ ಇಂದಿಗೂ ಮಾಡುತ್ತಿದ್ದಾರೆ. ಕಳ್ಳತನ ಮಾಡಲು ಹೋದಾಗ ಪ್ರತಿಯೊಂದು ಸಲ ಯಶಸ್ಸು ಕಾಣುತ್ತಾರೆ ಅಂತ ಹೇಳಲು ಬರುವದಿಲ್ಲ ಏಕೆಂದರೆ ಕೆಲವೊಮ್ಮೆ ಅವರ ಸಣ್ಣ ತಪ್ಪಿನಿಂದಾಗಿ ಎಲ್ಲರ ಕೈಗೆ ಸಿಲುಕಿ ಬಿಡುತ್ತಾರೆ.
ಪ್ರಸ್ತುತವಾಗಿ ಅಂತಹದೇ ಒಂದು ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ. ಬಿಹಾರನ ಸುಪೌಲ್ ಜಿಲ್ಲೆಯ ವಾರ್ಡ್ ನಂಬರ್ 24 ರಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ಕಳ್ಳ ಮಹಿಳೆಯ ಒಂದು ಕಾಲುಂಗರ ನಿಂದಾಗಿ ಎಲ್ಲರ ಕೈಗೆ ಸಿಕ್ಕಿಕೊಂಡಿದ್ದಾನೆ. ನಡೆದ ಘಟನೆ ಏನೆಂದರೆ, ಮೂವರು ಕಳ್ಳರು ಕೂಡಿ ಒಂದು ಮನೆಯಲ್ಲಿ ಕಳ್ಳತನ ಮಾಡಲು ಹೋಗುತ್ತಾರೆ. ಮನೆಯಲ್ಲಿ ಹೋದಾಗ ಮನೆಯಲ್ಲಿಯ ಎಲ್ಲ ಸದಸ್ಯರು ಮಲಗಿಕೊಂಡಿದ್ದನ್ನು ಕಂಡು ಈ ಮೂವರು ಮನೆಯಲ್ಲಿದ್ದ ಎಲ್ಲ ಸ್ಥಳದಲ್ಲಿ ಆಭರಣ ಮತ್ತು ಹಣದ ಹುಡುಕಾಟ ಮಾಡುತ್ತಾರೆ. ಕೊನೆಗೆ ಅವರಿಗೆ ಆ ಮನೆಯಲ್ಲಿ ಆರು ಸಾವಿರದ ಐದು ನೂರು ರೂಪಾಯಿಗಳು ಮಾತ್ರ ಸಿಗುತ್ತವೆ. ಇದರಿಂದ ಕೋಪಗೊಂಡ ಕಳ್ಳರು ಮನೆಯಲ್ಲಿ ಇದ್ದ ತಮಗೆ ಇಷ್ಟವಾದ ವಸ್ತುಗಳನ್ನು ಅಂದರೆ ಪಾತ್ರೆ, ಉಪಯುಕ್ತ ಸಾಮಾನುಗಳನ್ನು ಎತ್ತಿಕೊಂಡು ಹೋಗಲು ಸಜ್ಜಾಗುತ್ತಾರೆ.
ಇನ್ನೇನು ಮನೆಯಿಂದ ಹೊರಗಡೆ ಹೋಗಬೇಕು ಅನ್ನೋ ಹೊತ್ತಿಗೆ ಅವರಲ್ಲಿಯ ಒಬ್ಬ ಕಳ್ಳನ ಕಣ್ಣು ಆ ಮನೆಯಲ್ಲಿ ಮಲಗಿದ್ದ ಮಹಿಳೆಯ ಕಾಲಿನ ಕಡೆಗೆ ಹೋಗುತ್ತದೆ. ಆ ಮಹಿಳೆಯ ಕಾಲಲ್ಲಿ ಕಾಲುಂಗರ ಇರುವದನ್ನು ಕಂಡು ಇದನ್ನು ಸಹ ಹೆಗಾದರೂ ಮಾಡಿ ಕದ್ದುಕೊಂಡು ಹೋಗಬೇಕು ಅಂತ ಆ ಮಹಿಳೆಯ ಹತ್ತಿರ ಹೋಗಿ ಆ ಕಾಲುಂಗರಗಳನ್ನು ಸಾವಕಾಶವಾಗಿ ತಗೆಯಲು ಪ್ರಯತ್ನ ಮಾಡಿದ. ಆದರೆ ಆ ಕಾಲುಂಗರ ಬರದೆ ಇದ್ದಾಗ ಅವುಗಳನ್ನು ಜೋರಾಗಿ ಎಳೆದು ತಗೆಯಲು ಪ್ರಯತ್ನ ಮಾಡುತ್ತಾನೆ ಆಗ ಆ ಕಾಲುಂಗರಗಳು ಸಪ್ಪಳ ಬರುತ್ತದೆ. ಇದನ್ನು ಕೇಳಿ ಮನೆಯ ಮಾಲೀಕನು ಎಚ್ಚರಗೊಂಡು ಆ ಮಹಿಳೆಯ ಕಾಲಿನ ಬಳಿಯಲ್ಲಿದ್ದಬ್ ಕಳ್ಳನನ್ನು ಹಿಡಿದು ಪೊಲೀಸರ ವಶ ಪಡಿಸಿದ ಆದರೆ ಇನ್ನುಳಿದ ಇಬ್ಬರು ಕಳ್ಳರು ಮಾತ್ರ ಓಡಿ ಹೋದರು.
ವಾರ್ಡ ನಂಬರ 24 ರ ನಿವಾಸಿಯಾದ ಹೀರಾ ಕಾಮತ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಹೀರಾ ಕಾಮತ್ ತಾನು ಬಂಧಿಸಿದ ವ್ಯಕ್ತಿಯನ್ನು ಪೊಲೀಸ ಠಾಣೆಗೆ ಒಪ್ಪಿಸಿದರು. ತದನಂತರ ಆ ವ್ಯಕ್ತಿಯ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಆತನ ಹೆಸರು ಮಿಥಿಲೇಶ್ ಕುಮಾರ್ ಇದ್ದು ತಪ್ಪಿಸಿಕೊಂಡು ಹೋದ ಇಬ್ಬರ ಹೆಸರು ದೀಪಕ್ ಮತ್ತು ರಾಹುಲ್ ಇದೆ ಎಂದು ತಿಳಿದು ಬಂದಿದೆ. ಓಡಿ ಹೋದ ಇಬ್ಬರು ಕಳ್ಳರು ತಮ್ಮ ಜೊತೆಗೆ 6500 ರೂಪಾಯಿ, ಪಾತ್ರೆಗಳು ಮತ್ತು ಇನ್ನಿತರ ಸಾಮಾನುಗಳು ತಮ್ಮ ಜೊತೆಗೆ ತಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.