ಮಹಿಳೆಯ ಜಿಪುಣತನ ಕಂಡು ಜನ ಶಾಕ್: 3 ವರ್ಷಗಳಿಂದ ಒಗೆದಿಲ್ಲ ಬಟ್ಟೆ, ಒಳುಉಡುಪು ಖರೀದಿಸಿ ಆಯ್ತು 23 ವರ್ಷಗಳು!
ನನ್ನ ಸುತ್ತ ಮುತ್ತಲಲ್ಲಿ ಬಹಳಷ್ಟು ಜನರು ತಮ್ಮ ಬಳಿಯಿರುವ ಹಣವನ್ನು ಬಹಳ ಆಲೋಚನೆ ಮಾಡಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಇಂತಹವರಿಗೆ ಅನಾವಶ್ಯಕ ವಸ್ತುಗಳ ಮೇಲೆ ಹಣವನ್ನು ಹೂಡಿಕೆ ಮಾಡುವುದು ಇಷ್ಟವಾಗುವುದಿಲ್ಲ
ಅಲ್ಲದೇ ಇವರು ಬರಲಿರುವ ದಿನಗಳಿಗಾಗಿ ಹಣವನ್ನು ಉಳಿತಾಯ ಮಾಡುವ ಕಡೆಗೆ ಗಮನವನ್ನು ನೀಡುತ್ತಾರೆ. ಆದರೆ ಎಂದಾದರೂ ನೀವು ಮಹಿಳೆಯೊಬ್ಬರು ಬಟ್ಟೆಗಳನ್ನು ಒಗೆಯಲು ಡಿಟರ್ಜೆಂಟ್ ಪೌಡರ್ ಆಗಲೀ ಅಥವಾ ಟಾಯ್ಲೆಟ್ ನಲ್ಲಿ ಟಾಯ್ಲೆಟ್ ಪೇಪರ್ ಕೂಡಾ ಬಳಸದೇ, ಅದಕ್ಕೆ ಬಳಸುವ ಹಣವನ್ನು ಸಹಾ ಉಳಿತಾಯ ಮಾಡುವ ಆಲೋಚನೆ ಮಾಡುತ್ತಾರೆ ಎಂದರೆ ನೀವು ನಂಬುವಿರಾ?? ಈ ವಿಷಯವನ್ನು ಕೇಳಿದಾಗ ಇಂತಹವರು ಇರುತ್ತಾರಾ? ಎನ್ನುವ ಅನುಮಾನ ನಿಮಗೆ ಮೂಡಬಹುದು. ಅಂತಹ ಅನುಮಾನ ನಿಮ್ಮದಾದರೆ ಇಂದು ನಾವು ನಿಮಗೆ ಅಂತಹ ಒಬ್ಬ ಮಹಿಳೆಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ.
ಹೌದು ಇಲ್ಲೊಬ್ಬ ಮಹಿಳೆ ಅಗತ್ಯ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವ ಮನಸ್ಸಿಲ್ಲದೇ ಅದನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರುವ ಕೇಟ್ ಹಾಶಿಮೊಟೋ. ನೋಡಲು ಒಬ್ಬ ಸಾಮಾನ್ಯ ಮಹಿಳೆಯಂತೆ ಕಂಡು ಬರುವ ಈಕೆಯಲ್ಲಿನ ಒಂದು ವಿಶೇಷತೆ ಏನೆಂದರೆ ಈಕೆ ತಮ್ಮ ಜೀವನದಲ್ಲಿ ಅಗತ್ಯವಿರುವ ಸಣ್ಣ, ದೊಡ್ಡ ವಸ್ತುಗಳನ್ನು ಕೊಳ್ಳುವಲ್ಲಿ ಆಕೆ ಸದಾ ಹಿಂದೇಟು ಹಾಕುತ್ತಾರೆ, ಆ ಹಣವನ್ನು ಉಳಿಸಲು ಆಲೋಚನೆ ಮಾಡುವ ಆಕೆ ಅಗತ್ಯ ಸಾಮಾನುಗಳನ್ನು ಖರೀದಿ ಮಾಡುವುದಿಲ್ಲ. ಅಲ್ಲದೇ ಇದು ಸಹಾ ಹಣ ಉಳಿತಾಯ ಮಾಡುವ ಹಾದಿ ಎಂದು ಆಕೆ ಹೇಳುತ್ತಾರೆ.
ಟಿ ಎಲ್ ಸಿ ಯ ಎಕ್ಸ್ಟ್ರೀಮ್ ಚೀಪ್ ಸ್ಕೇಟರ್ ಶೋ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಕೇಟ್ ತನ್ನ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆಕೆ ತಾನು ಕಳೆದ ಮೂರು ವರ್ಷಗಳಿಂದಲೂ ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದು,
ಈ ನಗರವು ವಾಸಿಸುವುದಕ್ಕೆ ಬಹಳ ದುಬಾರಿಯಾಗಿದೆಯೆಂದೂ, ಅದೇ ಕಾರಣದಿಂದಾಗಿಯೇ ತಾನು ಖರ್ಚನ್ನು ಉಳಿಸುವುದಕ್ಕಾಗಿ ವಿಶೇಷ ಮಾರ್ಗಗಳನ್ನು ಕಂಡುಕೊಂಡಿರುವುದಾಗಿ ಹೇಳಿದ್ದಾರೆ. ಅದೇ ಕಾರಣದಿಂದ ಯಾವ ಯಾವ ವಸ್ತಗಳು ಖರೀದಿಯಲ್ಲಿ ಹಣ ಖರ್ಚು ಮಾಡಬೇಕಾಗುವುದೋ ಅಲ್ಲೆಲ್ಲಾ ಖರ್ಚನ್ನು ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಈ ಮಹಿಳೆ.
ಆಕೆ ಈ ಮೂಲಕ ಹಣವನ್ನು ಉಳಿಸುತ್ತಿದ್ದಾರೆ. ಜೀವನ ನಡೆಸಲು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಬಳಸಿಕೊಂಡು ಜೀವನ ನಡೆಸುತ್ತಾರೆ. ಈ ರೀತಿಯಲ್ಲಿ, ಕೇಟ್ ಕೇವಲ $ 200 ಅಂದರೆ ಮಾಸಿಕ 14,800 ರೂಪಾಯಿಗಳನ್ನು ತನ್ನ ಜೀವನ ನಿರ್ವಹಣೆಗಾಗಿ ಖರ್ಚು ಮಾಡುತ್ತಿದ್ದಾರೆ. ಸಂದರ್ಶನದ ವೇಳೆ ಕೇಟ್ ಮಾತನಾಡುತ್ತಾ ತಾನು ಮನೆಗಾಗಿ ಹೊಸ ಪೀಠೋಪಕರಣಗಳನ್ನು ಎಂದಿಗೂ ಖರೀದಿ ಮಾಡುವುದಿಲ್ಲ, ಬದಲಾಗಿ ರಸ್ತೆ ಬದಿಯಲ್ಲಿ ಬಿದ್ದಿರುವಂತಹ ವ್ಯರ್ಥ ವಸ್ತುಗಳನ್ನು ಬಳಸಿ ಪೀಠೋಪಕರಣಗಳನ್ನು ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೇ ಕೆಲವು ಸಂದರ್ಭಗಳಲ್ಲಿ ಜನರು ತಮ್ಮ ಹಳೆಯ ಪೀಠೋಪಕರಣಗಳನ್ನು ರಸ್ತೆಯ ಬದಿಯಲ್ಲಿ ಎಸೆಯುವುದು ಉಂಟು, ಅಂತಹುವುಗಳನ್ನು ತಾನು ತಂದು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಕಸ ಆಯುವವರು ಅವುಗಳನ್ನು ಎತ್ತಿಕೊಂಡು ಹೋಗುವ ಮೊದಲೇ ತಾನು ಉಪಯೋಗಕ್ಕೆ ಬರುವುದನ್ನು ಆರಿಸಿಕೊಳ್ಳುತ್ತೇನೆ ಅದನ್ನು ಮನೆಗೆ ತರುತ್ತೇನೆ. ಈ ಮೂಲಕ ಕೂಡಾ ನಾನು ಬಹಳಷ್ಟು ಹಣವನ್ನು ಉಳಿಸುತ್ತೇನೆ ಎಂದು ಕೇಟ್ ಹೇಳಿದ್ದಾರೆ. ಇನ್ನು ಆಕೆ ಒಂದಷ್ಟು ಯೋಗ ಮ್ಯಾಟ್ ಗಳನ್ನು ಸೇರಿಸಿ ತನ್ನ ಹಾಸಿಗೆಯನ್ನು ಮಾಡಿಕೊಂಡಿದ್ದಾರೆ. ಊಟ ಮಾಡಲು ಮೇಜು ಅಥವಾ ಡೈನಿಂಗ್ ಟೇಬಲ್ ಬದಲಾಗಿ ಮ್ಯಾಗಜೀನ್ ಗಳ ಕಟ್ಟುಗಳ ಮೇಲೆ ಇಟ್ಟುಕೊಂಡು ತಿನ್ನುತ್ತಾರೆ.
ಮನೆಯಲ್ಲಿ ಇರುವ ಓವನ್ ಅನ್ನು ಆಕೆ ಮನೆಯಲ್ಲಿನ ವಸ್ತುಗಳನ್ನು ಇಡುವ ಶೆಲ್ಫ್ ಆಗಿ ಬಳಸುತ್ತಿದ್ದಾರೆ. ಕೇಟ್ ತಾನು ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಜೊತೆ ಹೊಸ ಬಟ್ಟೆಯನ್ನು ಖರೀದಿ ಮಾಡಿಲ್ಲ ಎಂದಾಗ ಎಲ್ಲರಿಗೂ ಆಶ್ಚರ್ಯ ಆಗುವುದು ಖಂಡಿತ.
ಆಕೆ 1998 ರಲ್ಲಿ ಒಳ ಉಡುಪು ಖರೀದಿ ಮಾಡಿದ್ದರಂತೆ. ಅಂದಿನಿಂದ ಇಂದಿನವರೆಗೆ ಅವರು ತಮಗಾಗಿ ಯಾವುದೇ ಬಟ್ಟೆಗಳನ್ನು ಖರೀದಿ ಮಾಡಿಲ್ಲ. ಸ್ನಾನ ಮಾಡುವಾಗಲೇ ಬಟ್ಟೆಗಳು ನೀರಿನಲ್ಲಿ ಸ್ವಚ್ಛವಾಗುತ್ತದೆ, ಅದಕ್ಕೆ ಪ್ರತ್ಯೇಕವಾಗಿ ಲಾಂಡ್ರಿ ಸೋಪಿನ ವೆಚ್ಚ ಮಾಡುವುದಿಲ್ಲ. ಅಲ್ಲದೇ ಮೂರು ವರ್ಷಗಳಿಂದ ಬಟ್ಟೆಗಳನ್ನು ಒಗೆದಿಲ್ಲ ಎಂದಿದ್ದಾರೆ ಕೇಟ್.
ಇದು ಮಾತ್ರವೇ ಅಲ್ಲ, ಆಕೆ ಹಣವನ್ನು ಉಳಿಸಲು ಕೇಟ್ ಟಾಯ್ಲೆಟ್ ಪೇಪರ್ ಖರೀದಿಸುವುದಿಲ್ಲ ಎಂದು ತಿಳಿಸಿದ್ದಾರೆ. ಆಕೆ ಕೇವಲ ತಾನು ಸ್ನಾನ ಮಾಡುವುದಕ್ಕೆ ಮಾತ್ರವೇ ನೀರು ಮತ್ತು ಸೋಪನ್ನು ಮಾತ್ರ ಬಳಸುತ್ತಾರೆ. ಹೀಗೆ ಹಲವು ವಿಷಯಗಳಲ್ಲಿ ಹಣವನ್ನು ಉಳಿಸುವ ಮೂಲಕ, ಕೇಟ್ ಕೇವಲ 6 ತಿಂಗಳಲ್ಲಿ 5 ಸಾವಿರ ಪೌಂಡ್ ಅಂದರೆ 6 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಉಳಿಸಿದ್ದಾರೆ ಎಂದು ತಿಳಿಸಿದಾಗ ಕೇಳುವವರು ಸಹಾ ಆಶ್ಚರ್ಯವನ್ನು ಪಟ್ಟಿದ್ದಾರೆ ಎನ್ನುವುದು ವಾಸ್ತವ.