ಮಹಿಳೆ ಮಾಡಿದ ಪ್ರತಾಪ್ ನೋಡಿ! ಪ್ರಿಯಕರನ ಜೊತೆಗೆ ಸಂಸಾರ ನಡೆಸಲು ಗಂಡನ ಮನೆಯಲ್ಲಿಯೇ ಮಾಡಿದಳು ಕಳ್ಳತನ!!

ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ. ಮನೆಯಲ್ಲಿ CCTV ಗಳಿದ್ದರೂ ಸಹಿತ ಮಹಿಳೆ ತನ್ನ ಪ್ರಿಯಕರನ ಜೊತೆಗೂಡಿ ಈ ಕೆಲಸಕ್ಕೆ ಮಂಗಳ ಹಾಡಿದ್ದಾಳೆ.

ಮಹಾರಾಷ್ಟ್ರದ ಪುಣೆಯಲ್ಲಿ ಜೂನ್ 7 ರಂದು ಕಳ್ಳತನ ವಿಚಿತ್ರವಾದ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯು ತನ್ನ ಪ್ರಿಯಕರನ ಜೊತೆಗೆ ಒಂದು ದೊಡ್ಡ ಪ್ಲಾನಿಂಗ್ ಮಾಡಿದ್ದಾಳೆ. ಪ್ರಿಯಕರನ ಜೊತೆಗೆ ತನ್ನ ಸಂಸಾರವನ್ನು ಜೋರಾಗಿ ಮಾಡುವ ಸಲುವಾಗಿ ತನ್ನ ಗಂಡನ ಮನೆಯಲ್ಲಿಯೇ 1.74 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾಳೆ.

ಈ ಕಳ್ಳತನ ಮಾಡುವ ಬಗ್ಗೆ ಪ್ರಿಯಕರನ ಜೊತೆಗೆ ಕೂಡಿಕೊಂಡು ವ್ಯವಸ್ಥಿತವಾಗಿ ಪ್ಲಾನ್ ಮಾಡಿದ್ದಾಳೆ. ಮೊದಲು ಮನೆಯ ಸಂಬಂಧಪಟ್ಟ ಎಲ್ಲ ಕೀಲಿ ಕೈ ಗಳನ್ನು ಪಡೆದಿದ್ದಾಳೆ. ಮನೆಯಲ್ಲಿ ಕೂಡಿಸಲಾದ CCTV ಕ್ಯಾಮೆರಾಗಳ ಮುಖ ಬೇರೆ ಕಡೆಗೆ ತಿರುಗಿಸಿದ್ದಾಳೆ. ಇಷ್ಟಾದರೂ ಕಳ್ಳತನ ಮಾಡಿದ ಕುಕೃತ್ಯ CCTV ಯಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿ ಆಕೆಯ ಪ್ರಿಯಕರನಿಗಾಗಿ ಪೊಲೀಸ್ ಹುಡುಕಾಟ ನಡೆಸಿದೆ.

ಅಕ್ಷಯ್ ದಿಲೀಪ್ ಭಂಡಾರಿ ಹೆಸರಿನ ವ್ಯಕ್ತಿಯ ಮನೆಯಲ್ಲಿ ಒಡವೆಗಳು ಮತ್ತು ನಗದು ಕಳ್ಳತನವಾದ ಬಗ್ಗೆ ತಕರಾರು ದಾಖಲಿಸಿದ ಬಗ್ಗೆ ಪೊಲೀಸರು ವರದಿ ಮಾಡಿದ್ದಾರೆ. ತಕರಾರು ದಾಖಲಿಸಿದ ವ್ಯಕ್ತಿ ಪುಣೆಯ ಬಿಬವೇವಾಡಿಯಲ್ಲಿ ಲೋಕೇಶ್ ಹೆಸರಿನ ಸೊಸೈಟಿಯ ಗಾಯತ್ರಿ ಅಪಾರ್ಟಮೆಂಟ್ ನಲ್ಲಿ ಪ್ಲಾಟ್ ನಂ.1 ರಲ್ಲಿ ತನ್ನ ಕುಟುಂಬದ ಜೊತೆಗೆ ಇರುತ್ತಾನೆ. ನಾಲ್ಕು ವರ್ಷಗಳ ಮೊದಲು ಈತನ ತಮ್ಮ ಅಕ್ಷಯ್ ಜೊತೆಗೆ ಮೃಣಾಲ್ ಹೆಸರಿನ ಹುಡುಗಿಯ ಮದುವೆಯಾಯಿತು. ತಮ್ಮ ಅಕ್ಷಯ್ ಮಸಾಲೆಯ ವ್ಯಾಪಾರ ಮಾಡುತ್ತಾನೆ. ಆತ ತನ್ನ ಮನೆಯಲ್ಲಿ ಒಡವೆ ಮತ್ತು ನಗದು ಇಟ್ಟಿದ್ದನು.

ಅಕ್ಷಯ್ ಹೇಳುವ ಪ್ರಕಾರ ಮೃಣಾಲ್ ತನ್ನ ಪ್ರಿಯಕರನ ಜೊತೆಗೆ ಮನೆಯಲ್ಲಿಂದ ಆಭರಣಗಳು ಮತ್ತು ನಗದು ಹಣವನ್ನು ಕದ್ದೊಯ್ದಿದ್ದಾಳೆಂಬ ಸತ್ಯ CCTV ಹೊರ ಹಾಕಿದೆ. CCTV ಯ ಮುಖವನ್ನು ತಿರುಗಿಸುವಾಗ ಕಂಡ ಮಹಿಳೆಯ ಕೈ ಬೇರಾರದ್ದು ಅಲ್ಲದೆ ಅದು ಮೃಣಾಲ್ ಳದೇ ಇದೆ ಎಂದು ಸಾಬೀತಾಗಿದೆ. ಕುಟುಂಬದ ಮಾನವನ್ನುಳಿಸುವ ಸಲುವಾಗಿ ಪೊಲೀಸರಲ್ಲಿ ತಕರಾರು ದಾಖಲಿಸದೆ ಮೊದಲು ಮೃಣಾಲ್ ಳನ್ನು ಸಮಜಾಯಿಷಿ ನೀಡಿ ಪ್ರಿಯಕರನಿಗೆ ಕರೆಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಯತ್ನ ವಿಫಲವಾದಾಗ ಪೊಲೀಸರಲ್ಲಿ ತಕರಾರು ದಾಖಲಿಸಿದ್ದಾರೆ.

ಪ್ರಿಯಕರನೊಂದಿಗೆ ವಿದೇಶಕ್ಕೆ ಹಾರಿ ಹೋಗುವ ಪ್ಲಾನಿತ್ತು.

ಎಸ್. ಪಿ. ಕುಮಾರ್ ಘಾಡಗೆಯವರ ಪ್ರಕಾರ ಬೂಬಾನೆ ಹೆಸರಿನ ವ್ಯಕ್ತಿಯ ಜೊತೆಗೆ 2013 ರಿಂದ ಮಹಿಳೆಯ ಅನೈತಿಕ ಸಂಬಂಧವಿತ್ತು. ಪ್ರಸ್ತುತ ಮದುವೆ 2016 ಆಕೆಯ ಮನಸ್ಸಿನ ವಿರುದ್ಧವಾಗಿ ನಡೆದಿತ್ತು. ಮಹಿಳೆ ಹೇಳುವ ಹಾಗೆ ತನ್ನ ಪ್ರಿಯಕರನನ್ನು 2013 ರಿಂದ ಪ್ರೀತಿಸುತ್ತಿದ್ದಳು. ಗಂಡನ ಮನೆಯಿಂದ ಇಷ್ಟು ದೊಡ್ಡ ಮೊತ್ತ ಕದ್ದ ನಂತರ ಇಬ್ಬರೂ ವಿದೇಶಕ್ಕೆ ಹೋಗಿ ಮದುವೆಯಾಗುವ ವಿಚಾರ ಹೊಂದಿದ್ದರು. ಬೂಬಾನೆ ವಿರೋಧದಲ್ಲಿ ಆಂಧ್ರ ಮತ್ತು ಕರ್ನಾಟಕದಲ್ಲಿ ಮೋಸ ಮತ್ತು ಕಳ್ಳತನದ ಅನೇಕ ಕೇಸುಗಳು ದಾಖಲಾಗಿವೆ. ಸದ್ಯಕ್ಕೆ ಪೊಲೀಸರು ಬೂಬಾನೆಯ ಶೋಧ ನಡೆಸಿದ್ದಾರೆ.