ಮಾಡಿದ್ದುಣ್ಣೋ ಮಹಾರಾಯ ! ಮುಳ್ಳುಹಂದಿಯ ಜೊತೆಗಿನ ಸೆಣಸಾಟ ಚಿರತೆಗೆ ಬಿತ್ತು ದುಬಾರಿ ; ವಿಡಿಯೋ ನೋಡಿದಾಗ ಗೊತ್ತಾಗುತ್ತೆ ಚಿರತೆಯ ಪೀಕಲಾಟ…

ಕಾಡು ಪ್ರಾಣಿಗಳ ಬದುಕಿಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ. ಈ ಪ್ರಾಣಿಗಳ ಜೀವನ ತುಂಬಾ ವಿಭಿನ್ನವಾಗಿರುತ್ತದೆ. ಬದುಕಿಗಾಗಿ ನಡೆಯುವ ಹೋರಾಟ ಅದ್ಭುತವಾಗಿರುತ್ತದೆ. ಇಲ್ಲಿ ಪ್ರತಿಯೊಂದು ಕ್ಷಣ ಸಂಘರ್ಷದಿಂದ ಕೂಡಿರುತ್ತದೆ. ಮಾಂಸಹಾರಿ ಪ್ರಾಣಿಗಳು ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವುದಕ್ಕಾಗಿ ಸಸ್ಯಹಾರಿ ಪ್ರಾಣಿಗಳ ಹಿಂದೆ ಸತತವಾಗಿ ಬಿದ್ದೇ ಇರುತ್ತವೆ. ಸಸ್ಯಹಾರಿ ಪ್ರಾಣಿಗಳು ಹೇಗಾದರೂ ಮಾಡಿ ಈ ಪ್ರಾಣಿಗಳಿಂದ ತಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುತ್ತವೆ. ಈ ಸಂಘರ್ಷಗಳು ನಡೆಯುವಾಗ ಫೋಟೋಗ್ರಾಫರುಗಳು ಸೆರೆಹಿಡಿದ ವಿಡಿಯೋಗಳು ವಿವಿಧ ಸೋಶಿಯಲ್ ಮೀಡಿಯಾ ಮಾಧ್ಯಮದಿಂದ ನಮ್ಮ ತನಕ ಬಂದು ತಲುಪುತ್ತವೆ. ಈಗ ಚಿರತೆಯ ಇದೇ ರೀತಿ ಬೇಟೆಯ ನಂತರದ ವಿಡಿಯೋ ಒಂದು ವೈರಲ್ ಆಗಿದೆ. ಚಿರತೆ ಆಡಿದ ಈ ಬೇಟೆ ನಿಜಕ್ಕೂ ತಿರುಗುಬಾಣವಾಗಿದೆ.

ವಿಡಿಯೋದಲ್ಲಿ ಚಿರತೆಯು ತುಂಬಾ ಅಸಹಾಯಕವಾಗಿ ಕಂಡುಬರುತ್ತಿದೆ. ಏಕೆಂದರೆ ಚಿರತೆಯ ಹೋರಾಟ ಮುಳ್ಳುಹಂದಿಯ ಜೊತೆಗೆ ನಡೆದಿದೆ. ಇಲ್ಲಿ ನೋಡುವ ವಿಡಿಯೋ ಹೋರಾಟದ ನಂತರದ್ದಾಗಿದೆ. ಚಿರತೆಯು ಮುಳ್ಳುಹಂದಿಯ ಮೇಲೆ ಬೇಟೆಗಾಗಿ ಎರಗಿದೆ. ಆದರೆ ಈ ಬೇಟೆ ಚಿರತೆಗೆ ತುಂಬಾ ದುಬಾರಿಯಾಗಿ ಪರಿಣಮಿಸಿದ್ದು ಪ್ರಸ್ತುತ ವಿಡಿಯೋದಲ್ಲಿ ಕಂಡುಬರುತ್ತಿದೆ. ಕಾರಣ ಚಿರತೆ ಬೇಟೆಗಾಗಿ ತಪ್ಪು ಪ್ರಾಣಿಯನ್ನು ಆಯ್ಕೆ ಮಾಡಿದೆ. ಈ ಹೋರಾಟದಲ್ಲಿ ಮುಳ್ಳು ಹಂದಿ ಚಿರತೆಗೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದನ್ನು ಕಾಣಬಹುದಾಗಿದೆ. ಕಾರಣ ಚಿರತೆಯ ಮುಖ ಹಾಗೂ ಮುಂದಿನ ಕಾಲುಗಳು ಮತ್ತು ಪೃಷ್ಟ ಭಾಗ ಎಲ್ಲಿಬೇಕಲ್ಲಿ ತೀಕ್ಷ್ಣವಾದ ಬಾಣಗಳ ರೀತಿಯಲ್ಲಿ ಹಂದಿಯ ಮುಳ್ಳುಗಳು ಚುಚ್ಚಿದ್ದನ್ನು ನೋಡಬಹುದು. ಹಾಗೆಯೇ ಚಿರತೆಯ ಎದೆಯ ಭಾಗ ಸಂಪೂರ್ಣವಾಗಿ ರಕ್ತ ಸಿಕ್ತವಾಗಿದೆ. ರಸ್ತೆಯ ಮೇಲೆ ಕುಳಿತ ಚಿರತೆಯು ತುಂಬಾ ಹತಾಶವಾಗಿ ಕಾಣುತ್ತಿವೆ. ಮತ್ತು ತನ್ನ ದೇಹಕ್ಕೆ ಚುಚ್ಚಿದ ಮುಳ್ಳುಗಳನ್ನು ತನ್ನ ಬಾಯಿಯ ಸಹಾಯದಿಂದ ಒಂದೊಂದಾಗಿ ತೆಗೆದುಕೊಳ್ಳುತ್ತಲಿದೆ.

ಚಿರತೆ ಇದು ಬೇಟೆಯಾಡುವುದರಲ್ಲಿ ತುಂಬಾ ನಿಪುಣರಾಗಿದ್ದರೂ ಮುಳ್ಳುಹಂದಿ ಅದರ ಈ ಅವಸ್ಥೆಯನ್ನು ಮಾಡಿದ ಪರಿ ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಈ ಬೇಟೆ ಚಿರತೆಗೆ ಒಟ್ಟಿನಲ್ಲಿ ತಿರುಗುಬಾಣವಾಗಿ ಪರಿಣಮಿಸಿದೆ.

ವಿಡಿಯೋ ನೋಡಿ

ಚಿರತೆಯ ಮನಕಲಕುವ ಈ ದೃಶ್ಯದ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಡಾಕ್ಟರ್ ಸಾಮ್ರಾಟ್ ಗೌಡ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕ ನೇಟಿಜನ್ಸ್ ಗಳು ಚಿರತೆಯ ಈ ಮನಕಲಕುವ ಅವಸ್ಥೆಯನ್ನು ಕಮೆಂಟ್ ಮಾಡುವುದರ ಮೂಲಕ ತಮ್ಮ ಕಳವಳವನ್ನು ವ್ಯಕ್ತ ಮಾಡಿದ್ದಾರೆ.