ಮಾಡುವ ಕೆಲಸದಲ್ಲಿ ಖುಷಿ ಕಂಡಾಗ ಅದು ಕೆಲಸವಾಗದೆ ಆಟವಾಗುತ್ತದೆ. ಉಲ್ಟಾ ನೆಗೆದು ಈತನು ಚೀಲ ಎತ್ತುವ ಐಡಿಯಾ ಸೂಪರ್! ನೋಡಿ ಈ ವಿಡಿಯೋದಲ್ಲಿ…

ವಾಸ್ತವಿಕವಾಗಿ ನೇಟಿಜನ್ಸ್ ಗಳಿಗೆ ಈ ವಿಡಿಯೋ ಇಷ್ಟವಾಗುವ ಕಾರಣವೇನೆಂದರೆ, ಈ ವ್ಯಕ್ತಿಯು ತನ್ನ ಕೆಲಸವನ್ನು ಎಷ್ಟೊಂದು ಆನಂದದಿಂದ ಮಾಡುತ್ತಿದ್ದನೆಂಬುದು ಗೊತ್ತಾಗುತ್ತದೆ. ಪ್ರಸ್ತುತ ಈ ವಿಡಿಯೋವನ್ನು ನೋಡಿ, ಯಾವುದೇ ಕೆಲಸ ಮಾಡಬೇಕಾದರೆ ಈ ರೀತಿ ಸ್ಟೈಲ್ ನಲ್ಲಿ ಮಾಡಿ ಎಂದು ನೀವು ಇನ್ನೊಬ್ಬರಿಗೆ ಹೇಳುವಿರಿ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕೆಲಸವನ್ನು ತುಂಬಾ ಖುಷಿಯಿಂದ ಮಾಡುತ್ತಿದ್ದಾನೆ. ಅದರ ಜೊತೆಗೆ ತನ್ನ ಕೆಲಸದ ಆನಂದವನ್ನು ಸಹ ಪಡೆಯುತ್ತಿದ್ದಾನೆ.

ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡುವುದರ ಜೊತೆಗೆ ಅದರ ಕ್ಯಾಪ್ಷನ್ ನಲ್ಲಿ, ‘ಕೆಲಸ ಮಾಡುವುದರ ಜೊತೆಗೆ ಮಜಾ ತೆಗೆದುಕೊಳ್ಳಿ’ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ, ವ್ಯಕ್ತಿಯು ತಳ್ಳುವ ಗಾಡಿಯ ಮೇಲಿಂದ ತುಂಬಿದ ಚೀಲವನ್ನು ಪಲ್ಟಿ ಹೊಡೆದು ತನ್ನ ಬೆನ್ನ ಮೇಲೆ ತುಂಬಾ ಆರಾಮಾಗಿ ಎತ್ತುತ್ತಿದ್ದಾನೆ ಅಥವಾ ತೆಗೆದುಕೊಳ್ಳುತ್ತಿದ್ದಾನೆ. ಚೀಲವನ್ನು ತನ್ನ ಬೆನ್ನ ಮೇಲೆ ತೆಗೆದುಕೊಳ್ಳುವ ತುಂಬಾ ಸರಳವಾದ ಹಾಗೂ ಅಷ್ಟೇ ತಮಾಷೆಯ ಆತನ ಈ ಐಡಿಯಾ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾದಂತೆ ಕಾಣುತ್ತಿದೆ. ಹೀಗಾಗಿ ಈ ವ್ಯಕ್ತಿಯು ತನ್ನ ಕೆಲಸದ ಜೊತೆಗೆ ಸಂತೋಷವನ್ನು ಸಹ ಪಡೆಯುತ್ತಿದ್ದಾನೆ. ಕೆಲಸವನ್ನು ಮಾಡಿ ಅದರ ಜೊತೆಗೆ ಆನಂದವನ್ನು ಸಹ ಪಡೆಯಿರಿ.

ಈ ಕಾರ್ಮಿಕ ಚೀಲವನ್ನು ತನ್ನ ಬೆನ್ನಿನ ಮೇಲೆ ತೆಗೆದುಕೊಳ್ಳುವ ಅಥವಾ ಏರಿಸಿಕೊಳ್ಳುವ ಈ ಯೂನೀಕ್ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ಗಾಳಿಯಂತೆ ವೈರಲ್ ಆಗುತ್ತಿದೆ. ಆತನ ಭರ್ಜರಿ ಐಡಿಯಾ ಎಲ್ಲರಿಗೂ ಮಂತ್ರಮುಗ್ಧ ಮಾಡಿದೆ. ವಿಡಿಯೋ ನೋಡಿದ ಅನೇಕರು ಕಾರ್ಮಿಕನ ಈ ಐಡಿಯಾವನ್ನು ಶ್ಲಾಘಿಸಿದ್ದಾರೆ.

ನೋಡಿ ಈ ವಿಡಿಯೋ…

ಈ ವಿಡಿಯೋ ನೋಡಿ ಲೈಕ್ ಮಾಡುವುದರ ಜೊತೆಗೆ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ಹೊರಹಾಕುತ್ತಿದ್ದಾರೆ. ಎಷ್ಟೋ ನೆಟ್ಟಿಗರು ಇಮೋಜಿಗಳನ್ನು ಸಹ ಪೋಸ್ಟ್ ಮಾಡುತ್ತ ತಮ್ಮ ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ..

ಈ ವಿಡಿಯೋ ನೋಡಿ ಒಬ್ಬ ಯೂಸರ್, ನಾವು ಮನಸ್ಸು ಮಾಡಿದರೆ ಎಷ್ಟೇ ಕಠಿಣವಾದ ಕೆಲಸವೇ ಆಗಿರಲಿ ಅದನ್ನು ತುಂಬಾ ಮಜದಿಂದ ಮಾಡಬಹುದು ಎಂದಿದ್ದಾನೆ. ಈ ವಿಡಿಯೋ ನೋಡಿ ಒಂದು ಮಾತನ್ನು ಹೇಳಬಹುದು ಅದೇನೆಂದರೆ ‘ಕೆಲಸ ಮಾಡಿ ಸ್ಟೈಲನಲ್ಲಿ’.