ಮಿತಿಮೀರಿದ ವೇಗದಲ್ಲಿ ಬಂದ ಟ್ರಕ್; ಬೈಕ್ ಸವಾರನ ನಿರ್ಲಕ್ಷ್ಯ ತನದಿಂದ ಸಂಭವಿಸಿತು ಭೀ-ಕರ ಅ-ಪಘಾ-ತ! ಘಟನೆ CCTV ಯಲ್ಲಿ ಸೆರೆ!

ಲಾಕ್ ಡೌನ್ ನಂತರ ರಸ್ತೆಯ ಮೇಲೆ ನಿಧಾನವಾಗಿ ವಾಹನಗಳ ಓಡಾಟ ಮತ್ತೆ ಮೊದಲಿನ ಹಾಗೆ ಶುರುವಾಗಿದೆ. ಹೀಗಾಗಿ ಇನ್ನು ದುರ್ಘಟನೆಗಳ ವರದಿಗಳು ಬರುವುದು ಸಹಜ.

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿಯ ಒಂದು ಘಟನೆ ವರದಿಯಾಗಿದೆ. ಮಿತಿಮೀರಿದ ವೇಗದಲ್ಲಿ ಬರುತ್ತಿರುವ ಟ್ರಕ್ ಬೈಕ್ ಸವಾರನಿಗೆ ಉಡಾಯಿಸಿದ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಘಾತದಲ್ಲಿ ವೇಗದಲ್ಲಿ ಬರುತ್ತಿರುವ ಟ್ರಕ್ಕೀನ ಎದುರುಗಡೆ ಬೈಕ್ ಸವಾರ ಬಂದಾಗ ಟ್ರಕ್ಕಿನ ಚಾಲಕನಿಗೆ ಟ್ರಕ್ ಮೇಲೆ ನಿಯಂತ್ರಣವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಡ್ರೈವರ್ ಟ್ರಕ್ಕನ್ನು ನಿಯಂತ್ರಿಸುವಷ್ಟರಲ್ಲಿ ಟ್ರಕ್ ಆತನ ಮೇಲೆ ಹಾಯ್ದುಹೋಗಿತ್ತು. ಈ ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ಸುದ್ದಿಯಾದಾಗ ಸ್ಥಾನಿಕರು ಬೇಗನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ಕಂಡುಬಂದ ಪ್ರಕಾರ ಈ ದುರ್ಘಟನೆ ರಸ್ತೆಯ ತಿರುವಿನಲ್ಲಿ ಘಟಿಸಿದೆ. ವೇಗದಲ್ಲಿರುವ ಟ್ರಕ್ ತಿರುವಿನಲ್ಲಿ ಮುಂದೆ ಬಂದಾಗ ಆಕಸ್ಮಿಕವಾಗಿ ಅದರ ಎದುರುಗಡೆ ಬೈಕ್ ಸವಾರನು ಬಂದಿದ್ದಾನೆ. ಬೈಕ್ ಸವಾರನಿಗೆ ಅಪಘಾತವಾಗುವ ಚಿಹ್ನೆ ಗೊತ್ತಾದಾಗ ಆತ ತನ್ನ ಬೈಕ್ ಬದಿಗೆ ತೆಗೆದುಕೊಳ್ಳುವಷ್ಟರಲ್ಲಿ ವೇಗದಲ್ಲಿರುವ ಟ್ರಕ್ ಆತನ ಮೈಮೇಲೆ ಸಂಚರಿಸಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಡಿಯೋ ನೋಡಿ….

ತಿರುವಿನಲ್ಲಿ ಯಾವ ರೀತಿಯಾಗಿ ವಾಹನವನ್ನು ಚಲಾಯಿಸಬೇಕು ಎಂಬುದರ ಬಗ್ಗೆ ಸತತವಾಗಿ ಸೂಚನೆಗಳನ್ನು ನೀಡಿದರೂ ವಾಹನ ಚಾಲಕರು ಅತ್ತ ಕಡೆಗೆ ಗಮನವೇ ನೀಡುವುದಿಲ್ಲ. ಹೀಗಾಗಿ ಜನರ ಜೀವಕ್ಕೆ ಕುತ್ತು ಬರುತ್ತದೆ. ತಿರುವಿನಲ್ಲಿ ವಾಹನಗಳನ್ನು ನಿಯಂತ್ರಿಸುವುದು ಕೆಲವೊಮ್ಮೆ ಅಸಾಧ್ಯವಾಗುತ್ತದೆ, ಆಗ ಅದರ ಪರಿಣಾಮ ಅಪಘಾತಗಳಲ್ಲಿ ಕಂಡು ಬರುತ್ತದೆ.