ಮಿಲಿಯನ್ ಗಟ್ಟಲೆ ಆಸ್ತಿ ಇರುವ ಮುಖೇಶ್ ಅಂಬಾನಿಯ ಮಗನನ್ನು ಸ್ನೇಹಿತರು ಭಿಕಾರಿಯೆಂದು ಚುಡಾಯಿಸುತ್ತಿದ್ದರಂತೆ!

ರಿಲಯನ್ಸ್ ಇಂಡಸ್ಟ್ರೀಸ್ ನ‌ ಮುಖ್ಯಸ್ಥರಾದ ಮುಖೇಶ್ ಅಂಬಾನಿ ವಿಶ್ವದ ಐದನೇ ಅತಿ ದೊಡ್ಡ ಹಾಗೂ ಏಷ್ಯಾ ಮತ್ತು ಭಾರತದ ನಂಬರ್ 1 ಶ್ರೀಮಂತ ವ್ಯಕ್ತಿ ಎಂಬುದು ಜಗಜ್ಜಾಹೀರಾಗಿರುವ ವಿಷಯ. ತಮ್ಮಲ್ಲಿರುವ ಅಪಾರ ಸಂಪತ್ತಿನ ಜೊತೆಜೊತೆಗೆ ಮುಖೇಶ್ ಅಂಬಾನಿ ಅವರು ದಾನ ಕಾರ್ಯಗಳಿಗಾಗಿ ಕೂಡಾ ಜನಪ್ರಿಯರಾಗಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೊರೊನಾ ಸಂದರ್ಭದಲ್ಲಿ, ಅವರು ಬರೋಬ್ಬರಿ 458 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದರು. ಹೀಗೆ ಕೋಟಿಗಳ ಗಟ್ಟಲೆ ಆಸ್ತಿಯಿರುವ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಮಗ ನನ್ನು ಶಾಲೆಯಲ್ಲಿ ಆತನ ಗೆಳೆಯರು ಹಾಗೂ ಅನ್ಯ ವಿದ್ಯಾರ್ಥಿಗಳು ಭಿ ಕಾ ರಿ ಎಂದು ಕರೆದು ಗೇಲಿ ಮಾಡುತ್ತಿದ್ದರು ಎಂದರೆ ಆಶ್ಚರ್ಯವಾಗದೇ ಇರಲಾರದು.

ಈ ವಿಷಯವನ್ನು ಸ್ವತಃ ನೀತಾ ಅಂಬಾನಿ ಅವರೇ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದು ತಮ್ಮ ಕೊನೆಯ ಮಗ ಅನಂತ್ ಅಂಬಾನಿ ಯನ್ನು ಶಾಲೆಯಲ್ಲಿ ಆತನ ಸ್ನೇಹಿತರು ನೀನೇನು ಅಂಬಾನಿನೋ ಅಥವಾ ಭಿ ಕಾ ರಿನೋ ಎಂದು ಗೇಲಿ ಮಾಡುತ್ತಿದ್ದರಂತೆ. ತಮ್ಮ ಮಕ್ಕಳ ಶಾಲೆಯ ದಿನಗಳಲ್ಲಿ ನೀತಾ ಅಂಬಾನಿ ತಮ್ಮ ಮಗನಿಗೆ ಪ್ರತಿ ಶುಕ್ರವಾರ ಐದು ರೂಪಾಯಿ ಕೊಡುತ್ತಿದ್ದರಂತೆ. ಒಮ್ಮೆ ಅವರ ಮಗ ಶಾಲೆಯಿಂದ ಬಂದವನೇ ಓಡಿ ಬಂದು ನನಗೆ ಇನ್ನು ಮುಂದೆ ಐದರ ಬದಲು ಹತ್ತು ರೂಪಾಯಿ ಬೇಕೆಂದು ಕೇಳಿದನಂತೆ. ಆಗ ಏಕೆ ಎಂದು ನೀತ ಅವರು ಪ್ರಶ್ನೆ ಮಾಡಲು, ಕ್ಯಾಂಟೀನ್ ನಲ್ಲಿ ಸ್ನೇಹಿತರು ನೀನೇನೂ ಅಂಬಾನಿಯ ಮಗನೋ ಅಥವಾ ಭಿ ಕ್ಷು ಕನೋ ಎನ್ನುತ್ತಾರೆ ಎಂದು ಹೇಳಿದನಂತೆ.

ಮಗನ ಮಾತು ಕೇಳಿ ನೀತಾ ಮತ್ತು ಮುಖೇಶ್ ಅಂಬಾನಿ ಇಬ್ಬರೂ ಕೂಡಾ ಸಿಕ್ಕಾಪಟ್ಟೆ ನಕ್ಕಿದ್ದೂ ಉಂಟಂತೆ. ನೀತಾ ಅಂಬಾನಿ ಅವರು ಮಾತನಾಡುತ್ತಾ ನಾನು ಮತ್ತು ಮುಖೇಶ್ ಇಬ್ಬರೂ ಕೂಡಾ ನಮ್ಮ ಮಕ್ಕಳನ್ನು ನೆಲದ ಮೇಲೆ ನಿಲ್ಲುವುದನ್ನು ಹೇಳಿಕೊಡಲು ಮೊದಲ ಆದ್ಯತೆ ನೀಡಿದೆವು. ಅವರಿಗೆ ಹಣದ ಬಗ್ಗೆ ವ್ಯಾಮೋಹ ಉಂಟಾಗದಂತೆ, ತಾವು ಎಷ್ಟು ಶ್ರೀಮಂತರು ಎನ್ನುವ ಭಾವನೆ ಅವರಲ್ಲಿ ಮೂಡದಂತೆ ಎಚ್ಚರಿಕೆ ವಹಿಸಿದೆವು. ಏಕೆಂದರೆ ಹಣ ಎನ್ನುವುದು ಕಷ್ಟಪಟ್ಟರೆ ಮಾತ್ರ ಸಿಗುತ್ತದೆ ಎನ್ನುವುದರ ಅವಗಾಹನೆ ನಮ್ಮ ಮಕ್ಕಳಿಗೆ ಆಗುವ ಅವಶ್ಯಕತೆ ಇತ್ತು ಎಂದಿದ್ದಾರೆ.

ನೀತಾ ಅವರು ತಮ್ಮ ಮಗಳು ಇಶಾ ಅಮೆರಿಕಾಗೆ ಓದಲು ಹೋದಾಗ ಆಕೆಯನ್ನು ಪ್ರತ್ಯೇಕವಾಗಿ ಫ್ಲಾಟ್ ಅಥವಾ ಮನೆಯಲ್ಲಿ ವಾಸ ಇಡಲಾಗಿರಲಿಲ್ಲ. ಆಕೆಯನ್ನು ಹಾಸ್ಟೆಲ್ ನಲ್ಲೇ ಓದಿಸುತ್ತಿದ್ದೆವು. ಅಲ್ಲಿ ಒಂದೇ ಕೋಣೆಯಲ್ಲಿ ಇಶಾ ಜೊತೆ ಇನ್ನೂ ಒಂದಷ್ಟು ಜನ ಹುಡುಗಿಯರು ಕೂಡಾ ಇದ್ದರು, ಆಗ ಇಶಾ ತನ್ನ ಕೋಣೆಯನ್ನು ಮಾತ್ರವಲ್ಲದೇ ಬಾತ್ ರೂಂ ಕೂಡಾ ಹದಿನೈದರಿಂದ ಇಪ್ಪತ್ತು ಜನ ಇತರೆ ವಿದ್ಯಾರ್ಥಿನಿಯರ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೇ ರಜೆ ದೊರೆತಾಗ ಕೂಡಾ ಮಕ್ಕಳನ್ನು ಕರೆ ತರಲು ಎಂದೂ ಕೂಡಾ ಪ್ರೈವೇಟ್ ಜೆಟ್ ಬಳಸಿಲ್ಲ. ಅವರು ಏರ್ ಇಂಡಿಯಾ ವಿಮಾನದಲ್ಲೇ ಪ್ರಯಾಣ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ನೀತಾ ಅಂಬಾನಿ ಅವರು ತಮ್ಮ ಅಪಾರ ಸಂಪತ್ತಿನ ಹಿನ್ನೆಲೆಯಲ್ಲಿ ಮಗಳನ್ನು ಅಮೆರಿಕಾದಲ್ಲಿ ಒಂದು ಮನೆ ಮಾಡಿ ಇಟ್ಟು ಎಲ್ಲಾ ಸೌಲಭ್ಯ ಒದಗಿಸಿ ಓದಿಸಬಹುದಿತ್ತು, ಮಗನಿಗೆ ಸ್ಕೂಲ್ ಗೆ ಹೋಗುವಾಗ ಸಾವಿರಗಳೇ ಕೊಟ್ಟು ಕಳುಹಿಸಬಹುದಿತ್ತು. ಆದರೆ ಅವರಿಗೆ ಹಣದ ಮಹತ್ವ ಏನೆಂದು ಅರಿವು ಮೂಡಿಸಲು ಶ್ರೀಮಂತಿಕೆಯನ್ನು ಅವಶ್ಯಕತೆ ಇದ್ದಷ್ಟೇ ಬಳಸಿ ಮಕ್ಕಳನ್ನು ಬೆಳೆಸುವ ಪ್ರಯತ್ನವನ್ನು ಮಾಡಿದ್ದು ನಿಜಕ್ಕೂ ಒಂದು ಮಾದರಿ ಅಥವಾ ಉತ್ತಮ ನಡೆ ಎಂದೇ ಹೇಳಬಹುದು.