ಮಿಸ್ ಇಂಡಿಯಾ-22; ಸಿನಿ ಶೆಟ್ಟಿಯ ಭರ್ಜರಿ ಡಾನ್ಸ್ ವಿಡಿಯೋ ಆಯಿತು ವೈರಲ್! ತಾಗಿತು ನೇಟಿಜನ್ಸ್ ಗಳ ದೃಷ್ಟಿ…

ಕಳೆದ ಕೆಲವು ದಿನಗಳಿಂದ ಮಿಸ್ ಇಂಡಿಯಾ -22 ಯಾರಾಗುತ್ತಾರೆ ಎಂಬ ಪ್ರಶ್ನೆ ಕಾಡುತ್ತಿತ್ತು. ಕೊನೆಗೆ ಜುಲೈ 3 ರಂದು ನಮ್ಮದೇ ಕರ್ನಾಟಕದವರಾದ ಸಿನಿ ಶೆಟ್ಟಿಯವರ ಹೆಸರು ಅನೌನ್ಸ್ ಆಯಿತು. ಹಾಗೂ ಎಲ್ಲರೂ ಇವರಿಗೆ ಶುಭಾಶಯಗಳನ್ನು ಕೊರಿದ್ದೇ ಕೋರಿದ್ದು. ಈಗ ಇವರು ಡಾನ್ಸ್ ಮಾಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಸಿನಿ ಶೆಟ್ಟಿ ಅವರು ಈ ಸ್ಪರ್ಧೆಯಲ್ಲಿ ಒಟ್ಟು 31 ಎದುರಾಳಿಗಳನ್ನು ಸೋಲಿಸಿ ಈ ಪುರಸ್ಕಾರವನ್ನು ಗೆದ್ದಿದ್ದಾರೆ. ಈಗ ಇವರು ಡಾನ್ಸ್ ಮಾಡಿದ ವಿಡಿಯೋ ಒಂದು instagram ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಿನಿ ಶೆಟ್ಟಿ ಅವರು ತುಂಬಾ ಸುಂದರವಾಗಿ ಮೂವ್ಸ್ ಆಂಡ್ ಗ್ರೂವ್ಸ್ ಮಾಡಿದ್ದು ಕಂಡು ಬರುತ್ತದೆ. ಈ ಡ್ಯಾನ್ಸ್ ಮಾಡುವಾಗ ಸಿನಿ ಶೆಟ್ಟಿ ಅವರು ಕ್ರಾಪ್‌ ಕೆಮಿ ಟಾಪ್ ಮತ್ತು ಜಾಗರ್ ಪ್ಯಾಂಟ್ ತೊಟ್ಟಿದ್ದಾರೆ.

ವಿಡಿಯೋದಲ್ಲಿ ಸಿನಿ ಶೆಟ್ಟಿ ಅವರು ತಮ್ಮ ಈ ಡ್ರೆಸ್ ಜೊತೆಗೆ ಪಿಂಕ್ ಬಣ್ಣ ಶೂಜ್ ತೊಟ್ಟಿದ್ದಾರೆ. ತಮ್ಮ ಕೂದಲನ್ನು ಫ್ರೀಯಾಗಿ ಬಿಟ್ಟಿದ್ದಾರೆ. ವಿಡಿಯೋ ನೋಡುವಾಗ ಸಿನಿ ಶೆಟ್ಟಿಯವರು ತಮ್ಮ ಖುಷಿಯನ್ನು ಡಾನ್ಸ್ ರೂಪದಲ್ಲಿ ವ್ಯಕ್ತ ಮಾಡುತ್ತಿದ್ದಾರೆ ಎಂದು ಕಂಡು ಬರುತ್ತಿದೆ. ಸಿನಿಯವರು ಕರ್ನಾಟಕದ ಮೂಲದವರು ಆಗಿದ್ದರೂ ಅವರ ಹುಟ್ಟು ಮಾತ್ರ ಮುಂಬೈಯಲ್ಲಿಯೇ ಆಗಿದೆ. ಸದ್ಯ ಅವರು ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ (CFA) ಪ್ರೊಫೆಷನಲ್ ಕೋರ್ಸ್ ಮಾಡುತ್ತಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Instant Bollywood (@instantbollywood)

ಮೀಡಿಯಾ ರಿಪೋರ್ಟ್ ಪ್ರಕಾರ ಸಿನಿ ಶೆಟ್ಟಿಯವರು ಪ್ರೊಫೆಷನಲ್ ಭರತನಾಟ್ಯಮ್ ಡಾನ್ಸರ್ ಸಹ ಆಗಿದ್ದಾರೆ. ಇವರು 4 ವರ್ಷದವರಿದ್ದಾಗಿನಿಂದಲೇ ಡಾನ್ಸ್ ಕಲಿಯಲು ಶುರು ಮಾಡಿದರು. ತಮ್ಮ 14ನೇ ವಯಸ್ಸಿಗೆ ಭರತನಾಟ್ಯಂನಲ್ಲಿ ಆರಂಗೆತ್ರಮ್ ಕಂಪ್ಲೀಟ್ ಮಾಡಿದರು.