ಮಿಸ್ ಯೂನಿವರ್ಸ್ ಪ್ರಶಸ್ತಿ ಗೆದ್ದ ನಂತರ ಭಾರತದ ಈ ಯುವತಿ ಹರ್ನಾಜ್ ಸಂಧುಳಿಗೆ ದೊರೆತ ಹಣ ಮತ್ತು ಸೌಲಭ್ಯಗಳೇನು ಗೊತ್ತಾ?

ಭಾರತದ 21 ವರ್ಷದ ಹುಡುಗಿ ಹರ್ನಾಜ್ ಕೌರ್ ಸಂಧು 2021ರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದಕ್ಕೂ ಮೊದಲು ಬಾಲಿವುಡ್ ನಟಿಯರಾದ ಸುಶ್ಮಿತಾ ಸೇನ್ (1994) ಮತ್ತು ಲಾರಾ ದತ್ತ (2000) ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಇಸ್ರೇಲ್ ನ ಇವಿಯಟ್ ಪಟ್ಟಣದಲ್ಲಿ ನಡೆದ LIVA ಮಿಸ್ ದೀವಾ ಯೂನಿವರ್ಸ್ 2021 ರಲ್ಲಿ ಹರ್ನಾಜ್ ಸಂಧು ಅವರು 75 ದೇಶಗಳ ಸುಂದರ ಯುವತಿಯರ ಮೇಲೆ ತಮ್ಮ ವರ್ಚಸ್ಸನ್ನು ಸ್ಥಾಪಿಸುತ್ತಾ ಈ ಪ್ರಶಸ್ತಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ಹರ್ನಾಜ್ ಸಂಧು ಅವರು ಗೆದ್ದ ಈ ಪ್ರಶಸ್ತಿಯಿಂದ ಅವರಿಗೆ ಸಿಗುವ ಸೌಲಭ್ಯಗಳೇನು ಮತ್ತು ಎಷ್ಟೊಂದು ಹಣ ಈ ಪ್ರಶಸ್ತಿಯಿಂದ ದೊರೆಯಲಿದೆ ಎಂಬುದು ಇಲ್ಲಿ ತಿಳಿದುಕೊಳ್ಳೋಣ.

ಕ್ಯಾಶ್ ಪ್ರೈಸ್ – ಮೀಡಿಯಾ ರಿಪೋರ್ಟ್ ಪ್ರಕಾರ, ಮಿಸ್ ಯುನಿವರ್ಸ್ 2021ರ ಈ ಪ್ರಶಸ್ತಿಯನ್ನು ಗೆದ್ದ ಹರ್ನಾಜ್ ಳಿಗೆ ಸುಮಾರು 250,000 ಡಾಲರ್ ಅಂದರೆ 1,89,15,987 ರೂಪಾಯಿಗಳು. ಇದರ ಜೊತೆಗೆ ಹರ್ನಾಜ್ ಳಿಗೆ ಇನ್ನು ಯಾವ ಸೌಲಭ್ಯಗಳು ಸಿಗಲಿವೆ ಎಂಬುದನ್ನು ಇಲ್ಲಿ ನೋಡಿ.

  • ಫ್ರೀ ವರ್ಲ್ಡ್ ಟೂರ್.
  • ನ್ಯೂಯಾರ್ಕ್ ಪಟ್ಟಣದ ಮಿಸ್ ಯೂನಿವರ್ಸ್ ಅಪಾರ್ಟ್ಮೆಂಟ್ನಲ್ಲಿ ಒಂದು ವರ್ಷದವರೆಗೆ ವಾಸಿಸಬಹುದು. ಮತ್ತು ಬಹುಶಃ ಅಲ್ಲಿ ಮಿಸ್ ಯು ಎಸ್ ಜೊತೆಗೆ ಫ್ಲ್ಯಾಟನ್ನು ಶೇರ್ ಮಾಡಬೇಕಾಗಿಯು ಬರಬಹುದು.
  • ಈ ಮಿಸ್ ಯೂನಿವರ್ಸ್ ಅಪಾರ್ಟ್ಮೆಂಟ್ನಲ್ಲಿ ಒಂದು ವರ್ಷಕ್ಕೆ ಬೇಕಾಗುವ ದಿನಸಿ ಸಾಮಾನುಗಳ ಸಹಿತ ತಿರುಗಾಡಲು ಅವಶ್ಯಕತೆ ಇರುವ ವಾಹನ ಸೌಲಭ್ಯ.
  • ಇವರಿಗೆ ಮೇಕಪ್ ಆರ್ಟಿಸ್ಟ್ ಮತ್ತು ಅಸಿಸ್ಟೆಂಟ್ ಟೀಮ್ ದೊರೆಯುತ್ತದೆ.
  • ಒಂದು ವರ್ಷದ ಸಲುವಾಗಿ ಮಿಸ್ ಯೂನಿವರ್ಸ್ ಗೆ ಮೇಕಪ್, ಹೇರ್ ಸ್ಟೈಲ್, ಶೂಸ್, ಬಟ್ಟೆ ಮತ್ತು ಸ್ಕಿನ್ ಕೇರ್ ಉತ್ಪಾದನೆಗಳು ಸಿಗುತ್ತವೆ.
  • ಪ್ರೊಫೆಷನಲ್ ಸ್ಟೈಲ್, ಸ್ಕಿನ್ ಸೈಂಟಿಸ್ಟ್ ಹಾಗೂ ಡೆಂಟಲ್ ಸರ್ವಿಸ್ ಸಿಗುತ್ತದೆ.
  • ಪ್ರವಾಸಕ್ಕಾಗಿ ಸುತ್ತಾಡುವಾಗ ಹೋಟೆಲ್ ಗಳಲ್ಲಿ ವಾಸ್ತವ್ಯ ಮತ್ತು ಊಟದ ಖರ್ಚು ಇವೆಲ್ಲವೂ ಮುಕ್ತವಾಗಿ ಸಿಗಲಿದೆ.

ಹರ್ನಾಜ್ ಸಂಧು ಈಕೆ ಯಾರು?

ಚಂಡಿಗಡದ ನಿವಾಸಿಯಾಗಿರುವ ಹರ್ನಾಜ್ ಇವರು ಮಾಡೆಲ್ ಜೊತೆಗೆ ನಟಿಯು ಆಗಿದ್ದಾರೆ. ಇವರು ಪಂಜಾಬಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ‘ಯಾರಾ ದಿಯಾ ಪೂ ಬಾರಾ’ ಮತ್ತು ‘ಬಾಯಿ ಜಿ ಕುಟ್ಟಾಂಗೆ’ ಈ ಪಂಜಾಬಿ ಚಿತ್ರಗಳಲ್ಲಿ ಕಂಡುಬಂದಿದ್ದಾರೆ.

ಇವರು ಇಲ್ಲಿಯವರೆಗೆ ಅನೇಕ ಸುಂದರಿ ಸ್ಪರ್ಧೆಗಳಲ್ಲಿ ಭಾಗ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಇವರು ಅಭ್ಯಾಸದಲ್ಲಿಯೂ ಸಹ ತುಂಬಾ ಜಾಣರಾಗಿದ್ದಾರೆ. ಗ್ರಾಜುಯೇಟ್ ಮುಗಿಸಿ ಸದ್ಯ ಪೋಸ್ಟ್ ಗ್ರಾಜುಯೇಟ್ ಸ್ಟಡಿ ಮಾಡುತ್ತಿದ್ದಾರೆ. ಇವರಿಗೆ ಕುದುರೆ ಸವಾರಿ ಮತ್ತು ಸ್ವಿಮಿಂಗ್ ಅಂದರೆ ತುಂಬಾ ಇಷ್ಟ.