ಮೀನುಗಾರನಿಗೆ ಸಿಕ್ಕಿತು ಅತ್ಯಂತ ದುರ್ಲಭ ಕಿತ್ತಳೆ ಬಣ್ಣದ ಮುತ್ತು; ಒಂದೇ ರಾತ್ರಿಯಲ್ಲಿ ಆದನು ‘ಇಷ್ಟೊಂದು’ ಕೋಟಿ ರೂಪಾಯಿ ಒಡೆಯ!
ಜೀವನ ಯಾವಾಗ ಹೇಗೆ ಬದಲಾಗುತ್ತದೆ ಯಾರಿಗೂ ಗೊತ್ತಾಗುವುದಿಲ್ಲ. ಇಂದು ಶ್ರೀಮಂತವಿದ್ದ ವ್ಯಕ್ತಿ ನಾಳೆ ಬಡವನಾಗಬಹುದು. ಬಡವನಿರುವ ವ್ಯಕ್ತಿ ಶ್ರೀಮಂತನಾಗುತ್ತಾನೆ.
ಜೀವನೋಪಾಯಕ್ಕಾಗಿ ಮೀನುಗಳನ್ನು ಹಿಡಿದು ಮಾರಾಟ ಮಾಡುವ ಮೀನುಗಾರನೊಬ್ಬನ ಜೀವನವು ಇದೇ ರೀತಿ ಬದಲಾಗಿದೆ. ಸಮುದ್ರದಲ್ಲಿ ಮೀನು ಹಿಡಿದು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಒಬ್ಬ ಮೀನುಗಾರನಿಗೆ ಕಿತ್ತಳೆ ಬಣ್ಣದ ಅಮೂಲ್ಯವಾದ ಮುತ್ತೊಂದು ದೊರಕಿದೆ. ಆ ಮುತ್ತಿನ ಬೆಲೆ ಸುಮಾರು 2.5 ಕೋಟಿ ರೂಪಾಯಿಗಳಷ್ಟು ಇದೆ.
ಸಮುದ್ರದ ಗರ್ಭದಲ್ಲಿ ಅನಂತ ಹಾಗೂ ಅಮೂಲ್ಯ ರತ್ನಗಳು ಇರುತ್ತವೆ. ಇದಕ್ಕಾಗಿ ಅನೇಕರು ಶೋಧಿಸುವ ಕೆಲಸವನ್ನು ಸಹಿತ ಮಾಡುತ್ತಾರೆ. ಆದರೆ ಎಲ್ಲರಿಗೂ ಇದರಲ್ಲಿ ಯಶಸ್ಸು ದೊರೆಯುವುದಿಲ್ಲ. ಆದರೆ ಅದೃಷ್ಟ ಬಲದಿಂದ ಎಷ್ಟೋ ಮೀನುಗಾರರಿಗೆ ಇಂಥ ಅಮೂಲ್ಯವಾದ ರತ್ನಗಳು ದೊರಕಿದ್ದನ್ನು ಸುಮಾರು ಸಲ ಕೇಳುತ್ತೇವೆ. ಅವುಗಳ ಬೆಲೆ ಲಕ್ಷ ಅಥವಾ ಕೋಟಿಗಳಲ್ಲಿ ಇರುತ್ತದೆ.
ಪ್ರಸ್ತುತ ಈ ಕಿತ್ತಳೆ ಬಣ್ಣದ ಮುತ್ತು ಥೈಲ್ಯಾಂಡ್ ದೇಶದ ಮೀನುಗಾರನಿಗೆ ದೊರಕಿದೆ. ಆತನ ಹೆಸರು ಹಾಚಾಯಿ. ಈತ ತನ್ನ ಸಹೋದರನೊಂದಿಗೆ ಸಮುದ್ರದ ದಡದಲ್ಲಿಯ ಚಿಪ್ಪುಗಳನ್ನು ಆರಿಸಿ ಮನೆಗೆ ತೆಗೆದುಕೊಂಡು ತಂದೆಗೆ ತೋರಿಸಿದ್ದಾರೆ.
ತಂದೆ ಅವುಗಳನ್ನು ಸ್ವಚ್ಛ ಮಾಡಲು ಹೇಳಿದ್ದಾಗ ಈ ಕಿತ್ತಳೆ ಬಣ್ಣದ ಮುತ್ತು ಚಿಪ್ಪಿನಿಂದ ಹೊರಬಿದ್ದಿದೆ. ಈ ಅಮೂಲ್ಯ ಮತ್ತು ಅಪರೂಪದ ಮುತ್ತು ಸೀ ಸ್ನೆಲ್ ಮೇಲೋದಿಂದ ತಯಾರಾಗುತ್ತದೆ. ಮತ್ತು ಹೆಚ್ಚಾಗಿ ಇದು ಚಿಪ್ಪಿನಲ್ಲಿಯೇ ಇರುತ್ತದೆ.
37 ವರ್ಷದ ಹಾಚಾಯಿ ಮುತ್ತು ದೊರೆತ ಬಗ್ಗೆ ತುಂಬಾ ವಿಶೇಷವಾಗಿ ಹೇಳುತ್ತಾನೆ. ಆತನ ಕನಸಿನಲ್ಲಿ ಒಬ್ಬ ವೃದ್ದನು ಬಂದು ಕಡಲ ತೀರಕ್ಕೆ ಬಂದು ನನ್ನನ್ನು ಭೆಟ್ಟಿಯಾಗಿ ಹೋಗು ಎಂದು ಹೇಳಿದ್ದನಂತೆ.
ನನ್ನ ಅದೃಷ್ಟ ನನ್ನನ್ನು ಮುತ್ತಿನ ವರೆಗೆ ಕರೆದುಕೊಂಡು ಹೋಗಿತ್ತು. ಈ ಮುತ್ತನ್ನು ತುಂಬಾ ಹೆಚ್ಚಿನ ಬೆಲೆಗೆ ಮಾರುವ ಉದ್ದೇಶವಿದೆ. ಈ ಮುತ್ತಿನ ಮಾರುಕಟ್ಟೆಯ ಬೆಲೆ ಸುಮಾರು 2.5 ಕೋಟಿಗಳಷ್ಟು ಇದೆ ಎಂದು ಹೇಳಲಾಗುತ್ತಿದೆ.