ಮೀಸೆ ಇರುವ ‘ಈ’ ರಾಜಕುಮಾರಿಯನ್ನು ಪಡೆಯಲು 13 ಹುಡುಗರು ತಮ್ಮ ಜೀ ವವನ್ನೇ ಕೊಟ್ಟಿದ್ದರು! ಅಷ್ಟಕ್ಕೂ ಯಾರು ಈ ರಾಜಕುಮಾರಿ..?

ರವಿ ಕಾಣದ್ದನ್ನು ಕವಿ ಕಾಣುವನು, ಎಂಬ ಉಕ್ತಿಯ ಹಾಗೆ ಸೌಂದರ್ಯದ ವ್ಯಾಖ್ಯೆಗೆ ಸೀಮೆ ಇಲ್ಲ. ಸುಂದರತೆ ನೋಡುಗರ ಕಣ್ಣಿನಲ್ಲಿರುತ್ತದೆ. ಸೌಂದರ್ಯಯುತವಾಗಿ ಕಾಣಿಸಲು ಅನೇಕ ಕಾರಣಗಳು ಇವೆ. ಶರೀರದ ಯಾವುದೇ ಒಂದು ಭಾಗದಿಂದ ಸುಂದರತೆ ಖುಲಾಯಿಸುವದು ಅಂತ ಹೇಳಲು ಸಾಧ್ಯವಿಲ್ಲ. ಬಾಡಿ ಶೇಪ್, ಎತ್ತರ, ಬಣ್ಣ, ಸರಳವಾದ ಮೂಗು, ಕೇಶರಾಶಿ, ಕಣ್ಣುಗಳು, ಮುಖ, ಧರಿಸುವ ಬಟ್ಟೆಗಳು ಹೀಗೆ ಒಂದರೆಡಲ್ಲ ಅನೇಕ ಕಾರಣಗಳು ಇರುತ್ತವೆ. ಸದ್ಯಕ್ಕೆ ‘ಬಾಲಿವುಡ್ ನಿಂದ ಹಿಡಿದು ನಮ್ಮ ಬಡಾವಣೆವುಡ್’ ವರೆಗೆ ಎಲ್ಲರೂ ತೆಳ್ಳಗಾಗುವ ಸಲುವಾಗಿ ಸತತ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಮೊದಲು ಹೀಗಿರಲಿಲ್ಲ. ನಾನು ಹೇಳುತ್ತಿರುವದು 19 ನೆ ಶತಕದ ಕಾಲಖಂಡದಲ್ಲಿಯದು. ಆಗ ದಪ್ಪಗಿದ್ದರೆ ಮಾತ್ರ ಸುಂದರ ಎಂಬ ಸಮಯವೊಂದಿತ್ತು. ಕಾಲಕಾಲಕ್ಕೆ ಸೌಂದರ್ಯದ ದೃಷ್ಟಿಯಲ್ಲಿ, ವ್ಯಾಖ್ಯೆಯಲ್ಲಿ ಬಲಾವಣೆಯಾಗುತ್ತ ಬಂತು. ಆಗಿನ ಕಾಲದ ತುಂಬಾ ದಪ್ಪ ಮತ್ತು ಮುಖದ ಮೇಲೆ ಮೀಸೆ ಇದ್ದ ರಾಜಕುಮಾರಿಯ ಕಥೆಯೊಂದನ್ನು ಇಲ್ಲಿ ಓದುವಾ…

ಸದ್ಯಕ್ಕೆ ಇರಾಣದ ರಾಜಕುಮಾರಿಯೊಬ್ಬಳ ಫೋಟೋ ಒಂದು ವೈರಲ್ ಆಗುತ್ತಿದೆ. ಈಕೆಯ ಹೆಸರು ‘ಅಲ್ ಕಜರ್ ಸುಲ್ತಾನಾ’. ಈಕೆ ತುಂಬಾ ದಪ್ಪಗಾಗಿದ್ದು ಮುಖದ ಮೇಲೆ ಮೀಸೆ ಉಳ್ಳವಳಾಗಿದ್ದಳು. ಆದರೂ ಈಕೆಯೇ ಸೌಂದರ್ಯದ ಪ್ರತೀಕವೆಂದು ಆ ಕಾಲದಲ್ಲಿ ಗುರುತಿಸಲಾಗುತ್ತಿತ್ತು. ಹೀಗಾಗಿ ಈಕೆಗೆ ಮದುವೆಯಾಗಲು ಪ್ರಯತ್ನ ಪಟ್ಟು ವಿಫಲವಾದ ನಂತರ 13 ಹುಡುಗರು ತಮ್ಮ ಜೀವನವನ್ನೇ ಮುಗಿಸಿಕೊಂಡರೆಂದು ಹೇಳಲಾಗುತ್ತದೆ. ಕಾರಣ ಆ 13 ಹುಡುಗರಿಗೆ ಕಜರ್ ರಾಜಕುಮಾರಿಯು ಮದುವೆ ಮಾಡಿಕೊಳ್ಳುವದಕ್ಕೆ ಸ್ಪಷ್ಟವಾಗಿ ತಿರಸ್ಕರಿಸಿದಳಂತೆ. ಇದೇ ಕಾರಣದಿಂದ ಆ ಹುಡುಗರು ಮನನೊಂದು ನಿರಾಶೆಯಲ್ಲಿ ಈ ಹೆಜ್ಜೆಯನ್ನು ಇಟ್ಟಿದ್ದರು.

ಇನ್ನು ಈ ರಾಜಕುಮಾರಿಯು ಮದುವೆಯಾಗದೆಯೇ ಇರಲಿಲ್ಲ ಅಂತ ಇಲ್ಲ, ಅವಳ ಮದುವೆ ಮೊದಲೇ ‘ಅಮೀರ್ ಹುಸೇನ್ ಖಾನ್ ಶೋಜಾ ಎ ಸಲ್ತನೇಹ್’ ನ ಜೊತೆಗೆ ಆಗಿತ್ತು. ಆತನಿಂದ ಎರಡು ಗಂಡು ಎರಡು ಹೆಣ್ಣು ಮಕ್ಕಳನ್ನು ಹೆತ್ತಿದ್ದಳು, ಮುಂದೆ ಇಬ್ಬರದ್ದೂ ವಿ ಚ್ಚೇ ದ ನವಾಗಿತ್ತು.

ಕಜರ್ ರಾಜಕುಮಾರಿಗೆ ಆ ಕಾಲದಲ್ಲಿ ಆಧುನಿಕ ವಿಚಾರಸರಣಿಯನ್ನು ಹೊತ್ತ ಸ್ತ್ರೀಯರಲ್ಲಿ ಗಣನೆ ಮಾಡಲಾಗುತ್ತಿತ್ತು. ಇದಕ್ಕೆ ಕಾರಣ ಕಜರ್ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವು ಹೆಚ್ಚಾಗಿತ್ತು. ಅವಳಿಗೆ ವೆಸ್ಟರ್ನ್ ಉಡುಪುಗಳೆಂದರೆ ತುಂಬಾ ಇಷ್ಟವಂತೆ, ಮತ್ತು ಅವುಗಳನ್ನೇ ತೊಟ್ಟುಕೊಳ್ಳುತ್ತಿದ್ದಳು. ಆಗಿನ ಕಾಲದಲ್ಲಿ ಬುರಖಾ ತೆಗೆದು ಹಾಕಿದ ಮೊದಲ ಮಹಿಳೆ ಎಂದು ಕಜರ್ ಕಡೆಗೆ ನೋಡಲಾಗುತ್ತದೆ.

ಹೀಗೆಲ್ಲ ಇದ್ದರೂ ಮಾಹಿತಿಯ ಪ್ರಕಾರ ಆಕೆಯೇನು ಸಾಚಾ ಆಗಿರಲಿಲ್ಲವಂತೆ. ಆಕೆಯ ಅನೇಕ ಬಾಹ್ಯ ಸಂಬಂಧಗಳು ಇದ್ದವು. ಅದರಲ್ಲಿ ಮುಖ್ಯವಾಗಿ ಇಬ್ಬರ ಜೊತೆಗೆ ಅಲಿ ಖಾನ್ ಅಜೀಜಿ ಅಲ್ ಸುಲ್ತಾನ ಮತ್ತು ಇರಾನಿ ಕವಿ ಆರಿಫ್ ಕಾಜವಿನಿ ಇವರ ಜೊತೆಗೆ ಜಾಸ್ತಿ ಸಂಬಂಧವಿತ್ತು.