ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿನ್ನುವುದರಿಂದ ಸಿಗುವ ಲಾಭಗಳು, ಕೋಟಿ ರೂಪಾಯಿ ಖರ್ಚು ಮಾಡಿದರೂ ಸಿಗುವುದಿಲ್ಲ!
ಬೆಲ್ಲದಲ್ಲಿ ಅನೇಕ ಪ್ರಕಾರದ ಔಷಧೀಯ ಗುಣಗಳಿವೆ. ಭಾರತದಲ್ಲಿ ಮೊದಲು ಸಕ್ಕರೆಯ ಉಪಯೋಗ ಮಾಡುತ್ತಲೇ ಇರಲಿಲ್ಲ. ಪ್ರತಿಯೊಂದಕ್ಕೂ ಬೆಲ್ಲವನ್ನು ಉಪಯೋಗಿಸುವ ರೂಢಿ ಇತ್ತು. ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ವಿಶೇಷವಾಗಿ ಬೆಲ್ಲವನ್ನು ಉಪಯೋಗಿಸುವ ಪರಂಪರೆ ಇತ್ತು.
ಸಕ್ಕರೆಗಿಂತಲೂ ಬೆಲ್ಲ ಯಾವತ್ತೂ ದೇಹಕ್ಕೆ ಉಪಯುಕ್ತವಾಗಿದೆ. ಇದರ ಸೇವನೆಯಿಂದ ಮಧುಮೇಹ ಆಗುವ ಸಾಧ್ಯತೆಗಳು ತುಂಬಾ ಕಡಿಮೆ. ದೈನಂದಿನ ಅಡುಗೆಯಲ್ಲಿಯೂ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಿದರೆ ತುಂಬಾನೇ ಒಳ್ಳೆಯದು. ಆದರೆ ಇದರ ಉಪಯೋಗ ಹೇಗೆ ಮಾಡಬೇಕು ಎಂಬುದನ್ನು ತಿಳಿಯುವದು ಅಗತ್ಯ. ಯಾಕೆಂದರೆ ಸರಿಯಾದ ರೀತಿಯಲ್ಲಿ ಇದರ ಸೇವನೆ ಮಾಡಿದ್ದೇ ಆದಲ್ಲಿ ಇದು ನಮಗೆ ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಮುಂಜಾನೆ ಹಾಸಿಗೆಯಿಂದ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಬೆಲ್ಲದ ತುಣಕನ್ನು ತಿಂದು ಉಗುರು ಬೆಚ್ಛಗಿನ ನೀರನ್ನು ಕುಡಿಯಬೇಕು. ಇದು ದೇಹಕ್ಕೆ ತುಂಬಾ ಉಪಯೋಗ. ಇನ್ನು ದೈನಂದಿನ ಚಹಾದಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಬೇಕು. ಇದರಿಂದ ಚಹಾಕ್ಕೆ ಪರಿಮಳದ ಜೊತೆಗೆ ವಿಶೇಷ ರುಚಿ ಪ್ರಾಪ್ತವಾಗುವುದು. ಈ ರೀತಿ ನಿಯಮಿತವಾಗಿ ಮಾಡಿದರೆ ದೇಹದ ತೂಕದಲ್ಲಿ ಬದಲಾವಣೆ ಕಂಡು ಬರುವುದು. ಹಾಗೂ ಇದರಿಂದ ದೇಹಕ್ಕೆ ಕಬ್ಬಿಣಾಂಶ ಹೇರಳವಾಗಿ ಸಿಗುವದು. ಇನ್ನು ರಾತ್ರಿಯ ಊಟವಾದ ಮೇಲೆ ಒಂದು ತುಣುಕು ಬೆಲ್ಲದ ಸೇವನೆಯು ಮುಂಜಾನೆಯ ಮೊದಲ ಕೆಲಸ ತುಂಬಾ ಸುಲಭ ಮಾಡುವದು. ಹೀಗೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ ದೂರವಾಗುವುದು. ಆಹಾರವು ಸರಿಯಾಗಿ ಪಚನವಾಗುವದರಿಂದ ಹೊಟ್ಟೆ ಹಗುರಾಗಿರುವದು. ಹೊಟ್ಟೆಯ ವಿಕಾರಗಳಿಂದ ಮುಕ್ತರಾಗುವಿರಿ.
ಕೂದಲಿನ ಆರೋಗ್ಯಕ್ಕೂ ಬೆಲ್ಲವು ತುಂಬಾ ಉತ್ತಮ. ಇದರ ಸೇವನೆಯಿಂದ ಕೂದಲು ಉದರುವ ಸಮಸ್ಯೆಯಿಂದ ಮುಕ್ತರಾಗುವಿರಿ. ಬೆಲ್ಲದ ಸೇವನೆಯಿಂದ ರಕ್ತ ಪರಿಚಲನೆ ಚೆನ್ನಾಗಿ ಆಗಿ ಕೂದಲಿನ ಬೇರು ಸಶಕ್ತವಾಗುವವು. ಒಂದು ವೇಳೆ ದೇಹದಲ್ಲಿ ರಕ್ತವು ಕಡಿಮೆ ಇದ್ದರೆ ಬೆಲ್ಲಿನ ಸೇವನೆ ಅದನ್ನು ತುಂಬಿ ತೆಗೆಯುವದು. ಇದರಿಂದ ರಕ್ತ ಶುದ್ಧವಾಗುವದರ ಜೊತೆಗೆ ರಕ್ತದ ಪ್ರಮಾಣವು ಹೆಚ್ಚುತ್ತದೆ. ಇದರಿಂದ ಅಶಕ್ತತೆ ಇಲ್ಲಂದಂತಾಗಿ ದೇಹಕ್ಕೆ ಶಕ್ತಿ ದೊರೆಯುವುದು.
ಬೆಲ್ಲಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ಇಲ್ಲದಂತಾಗಿಸುತ್ತದೆ. ಕೀಲು ನೋವುಗಳನ್ನು ಕಡಿಮೆ ಮಾಡುತ್ತದೆ. ತಲೆನೋವು ಇದ್ದರೆ ಅದನ್ನು ಕಡಿಮೆ ಮಾಡುವದು. ಮಂಡಿ ನೋವು ಸಹಿತ ನಿವಾರಣೆಯಾಗುವದು. ಇದನ್ನು ಸೇವಿಸಿದ ನಂತರ ನೀರು ಕುಡಿಯುವುದನ್ನು ಮರೆಯಬೇಡಿ.

ಒಂದು ವೇಳೆ ನೀವು ಸಕ್ಕರೆ ಸೇವನೆ ಹೆಚ್ಚು ಮಾಡುತ್ತಿದ್ದರೆ ಅದನ್ನು ಇಂದಿನಿಂದಲೇ ನಿಲ್ಲಿಸಿಬಿಡಿ. ಅದರ ಬದಲಾಗಿ ಬೆಲ್ಲವನ್ನು ಸೇವಿಸಲು ಪ್ರಾರಂಭಿಸಿ. ಕಾರಣ ಇದರಿಂದ ದೇಹಕ್ಕೆ ಒಂದಲ್ಲ ಎರಡಲ್ಲ ಅನೇಕ ಲಾಭಗಳು ಆಗುತ್ತವೆ.