ಮುಗ್ಧ ಮಗುವಿನ ಮನಸ್ಸಿಗೆ ಸ್ಪಂದಿಸಿದ ಗ್ರೇಟ್ ವ್ಯಕ್ತಿ.100 % ಹೃದಯ ತಟ್ಟುವ ಸಖತ್ ಸೂಪರ್ ವಿಡಿಯೋ;

ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರಂತೆ ನಡೆಯುವ ಶಕ್ತಿ ಕೆಲವರಿಗಷ್ಟೇ ಇರುತ್ತದೆ. ಬರೀ ತಮ್ಮ ಮಕ್ಕಳನ್ನಷ್ಟೇ ಮಕ್ಕಳನ್ನು ತಿಳಿದುಕೊಳ್ಳುವ ಜನ ಸಾಕಷ್ಟು ಇದ್ದಾರೆ. ಬೇರೆಯವರ ಮಕ್ಕಳ ಜೊತೆಗೂ ತಮ್ಮ ಮಕ್ಕಳಂತೆ ವರ್ತಿಸುವ ಜನರು ಮಾತ್ರ ಈ ಭೂಮಿಯ ಮೇಲೆ ತುಂಬಾ ಕಡಿಮೆ ಕಾಣಲು ಸಿಗುತ್ತಾರೆ. ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿಯ ದೃಶ್ಯ ನೂರಕ್ಕೆ ನೂರು ಪ್ರತಿಶತ ನಿಮ್ಮ ಮನ ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರಸ್ತುತ ವಿಡಿಯೋದಲ್ಲಿ ಕಂಡುಬರುವ ಪ್ರಕಾರ, ವ್ಯಕ್ತಿಯೊಬ್ಬ ಮೆಟ್ರೋ ಟ್ರೈನ್ ನಲ್ಲಿ ಸಂಚರಿಸುತ್ತಿದ್ದಾನೆ. ಆತನ ಬದಿಯಲ್ಲಿ ಹುಡುಗನೊಬ್ಬ ತನ್ನ ತಾಯಿಯ ಜೊತೆಗೆ ಕುಳಿತಿದ್ದಾನೆ. ವ್ಯಕ್ತಿಯು ಮೊಬೈಲ್ ನಲ್ಲಿ ಲೀನವಾಗಿ ಕುಳಿತಿದ್ದಾನೆ. ಆತನ ಬದಿಗೆ ಕುಳಿತ ಬಾಲಕ ತುಂಬಾ ಆಸಕ್ತಿಯಿಂದ ವ್ಯಕ್ತಿಯು ಆಪರೇಟ್ ಮಾಡುತ್ತಿರುವ ಮೊಬೈಲ್ ನ್ನೇ ತದೇಕಚಿತ್ತದಿಂದ ನೋಡುತ್ತಿದ್ದಾನೆ. ಮಗುವಿನ ಮೊಬೈಲ್ ನೋಡುವ ಹವ್ಯಾಸ, ಆಸಕ್ತಿ ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಮೊಬೈಲ್ ಆಪರೇಟ್ ಮಾಡುತ್ತಿರುವ ವ್ಯಕ್ತಿಯ ಗಮನಕ್ಕೆ ಇದು ಬರುತ್ತಿದ್ದಂತೆಯೇ ಇಯರ್ ಪೀಸ್ ತೆಗೆದು ಮೊಬೈಲ್ ನ್ನು ಹುಡುಗನಿಗೆ ಕೊಟ್ಟುಬಿಡುತ್ತಾನೆ. ಆಗ ಹುಡುಗ ತುಂಬಾ ಆಸಕ್ತಿಯಿಂದ ಮೊಬೈಲ್ ತೆಗೆದುಕೊಂಡು ಅದರಲ್ಲಿ ಲೀನವಾಗುತ್ತಾನೆ. ವಿಡಿಯೋದಲ್ಲಿಯ ಈ ದೃಶ್ಯ ನಿಜಕ್ಕೂ ನೋಡುಗರಿಗೆ ಇಷ್ಟವಾಗುವಂತಹ ಸನ್ನಿವೇಶವಾಗಿದೆ. ಇಲ್ಲಿ ಖರ್ಚು ಮಾಡಬಹುದಾದಂತಹ ಯಾವುದೇ ಹಣ ಅಥವಾ ವಸ್ತು ಇಲ್ಲ. ಬರೀ ಕೆಲವೇ ಕೆಲವು ನಿಮಿಷಗಳ ದೊಡ್ಡ ಮನಸ್ಸು ಬೇಕಾಗಿತ್ತಷ್ಟೇ ಅಲ್ವೇ? ಅದನ್ನೇ ಆ ವ್ಯಕ್ತಿ ಮಾಡಿ ತೋರಿಸಿ ದೊಡ್ಡ ಗುಣ ಮೆರೆದಿದ್ದಾನೆ ಎಂದು ತಿಳಿದು ಬರುತ್ತದೆ.

ವೀಡಿಯೋ ನೋಡಿ

ಹೃದಯವನ್ನು ತಟ್ಟುವ ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಸಾವಿರಾರು ಜನರ ಮನಸ್ಸನ್ನು ಗೆದ್ದಿದೆ. ಫ್ರೆಂಡ್ಸ್ ನಿಮಗೆ ಹೇಗನಿಸಿತು ಈ ವಿಡಿಯೋ?