ಮೂವರು ನನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದರೆಂದ ಸಂತ್ರಸ್ತೆ: ರಾಜ್ ಕುಂದ್ರಾ ಪ್ರತಿಷ್ಠೆ ಮಣ್ಣು ಪಾಲು

ಉದ್ಯಮಿ ರಾಜ್ ಕುಂದ್ರಾ ಈಗಾಗಲೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆಯ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಲ್ಲದೇ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ. ಇನ್ನು ಹೊರಗೆ ನಟಿಯರಾದ ಗೆಹನಾ ವಸಿಷ್ಠ ಹಾಗೂ ರೋವಾ ಖಾನ್ ಇಬ್ಬರೂ ಕೂಡಾ ರಾಜ್ ಕುಂದ್ರಾ ಪರವಾಗಿ ಮಾತನಾಡುತ್ತಿದ್ದು ಅವರ ಬಗ್ಗೆ ಮಾಡಿರುವ ಆರೋಪಗಳು ಸುಳ್ಳು ಎಂದು ರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇದೀಗ ಇಬ್ಬರು ನಟಿಯರೂ ಸಂಕಷ್ಟಕ್ಕೆ ಸಿಲುಕುವ ಸಂದರ್ಭ ಎದುರಾಗುತ್ತಿದೆ ಎನ್ನಲಾಗಿದೆ. ಏಕೆಂದರೆ ಇಂತಹ ಸಿನಿಮಾಗಳ ನಿರ್ಮಾಣದಿಂದ ಬಾಧಿತರಾಗಿರುವ ಇಬ್ಬರು ನಟಿಯರು ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ ಗೆಹನಾ ವಸಿಷ್ಠ ಹಾಗೂ ರೋವಾ ಖಾನ್ ವಿರುದ್ಧ ಆರೋಪವನ್ನು ಮಾಡಿದ್ದಾರೆ ಎನ್ನಲಾಗಿದ್ದು, ಈ ಇಬ್ಬರು ನಟಿಯರು ಬಲವಂತವಾಗಿ ಬೇರೆ ನಟಿಯರಿಂದ ಅ ಶ್ಲೀ ಲ ಸಿನಿಮಾಗಳಲ್ಲಿ ಕೆಲಸವನ್ನು ಮಾಡಿಸುತ್ತಿದ್ದಾರೆ ಎನ್ನಲಾಗಿದೆ.

ಅ ಶ್ಲೀ ಲ ಚಿತ್ರಗಳ ಚಿತ್ರೀಕರಣಕ್ಕೆ ಬ ಲಿ ಯಾದಂತಹ ಇಬ್ಬರು ಸಂತ್ರಸ್ತ ನಟಿಯರು ನೀಡಿರುವ ಹೇಳಿಕೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇಬ್ಬರು ಸಂತ್ರಸ್ತೆಯರು ಗೆಹನಾ ವಸಿಷ್ಠ ಮತ್ತು ರೋವಾ ಖಾನ್ ತಮ್ಮಿಂದ ಬಲವಂತವಾಗಿ, ತಮ್ಮನ್ನು ಬೆದರಿಸಿ ಅಂತಹ ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರೂ ಸಹ ತಮ್ಮನ್ನು ಮಡ್ ಐಲ್ಯಾಂಡ್ ಬಂಗಲೆ ಯೊಂದಕ್ಕೆ ಕರೆದುಕೊಂಡು ಅಲ್ಲಿ ಚಿತ್ರೀಕರಣವನ್ನು ನಡೆಸಲಾಗಿತ್ತು ಎಂದು ಹೇಳಿದ್ದು, ಆ ವೇಳೆಯಲ್ಲಿ ತಾವು ಬೇಡವೆಂದರೂ ಬಲವಂತವಾಗಿ ಬೆದರಿಕೆಯನ್ನು ಹಾಕಿ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಮೊದಲ ಸಂತ್ರಸ್ತೆಯು, 2018ರಲ್ಲಿ ರೌನಕ್ ಹೆಸರಿನ ಒಬ್ಬ ಕಾಸ್ಟಿಂಗ್ ಮ್ಯಾನೇಜರ್ ಅವರು ತನಗೆ ರೋವಾ ಜೊತೆ ಒಂದು ಪ್ರಾಜೆಕ್ಟ್ ಕೊಡಿಸಿದರು. ಅದಾದ ನಂತರ ಫೆಬ್ರವರಿ 2, 2021ರಲ್ಲಿ ರೌನಕ್ ನನಗೆ ಕರೆ ಮಾಡಿ ಮಲಾಡ್ ನಲ್ಲಿ ಭೇಟಿಯಾಗುವಂತೆ ಹೇಳಿದರು. ಅವರು ಹೇಳಿದ ಜಾಗಕ್ಕೆ ಹೋದಾಗ, ರೌನಕ್ ಮತ್ತು ರೋವಾ ಇಬ್ಬರೂ ಅಲ್ಲಿಗೆ ಜೊತೆಯಾಗಿ ಒಂದೇ ಕಾರಿನಲ್ಲಿ ಬಂದರು. ನಂತರ ನನ್ನನ್ನು ಕರೆದುಕೊಂಡು ಮಡ್ ಐಲ್ಯಾಂಡಿನ ಬಂಗಲೆಗೆ ಹೋದರು. ಅಲ್ಲಿ ನನಗೆ 25 ಸಾವಿರ ರೂಪಾಯಿಗಳನ್ನು ನೀಡಿ, ಸ್ಕ್ರಿಪ್ಟ್ ಕೊಟ್ಟರು. ಸ್ಕ್ರಿಪ್ಟ್ ಓದಿದ ಮೇಲೆ ನಾನು ಆ ಸಿನಿಮಾ ಮಾಡಲು ಒಪ್ಪಿಗೆ ನೀಡಲಿಲ್ಲ.

ಆಗ ಮುಂದೆ ಒಳ್ಳೆಯ ಪ್ರಾಜೆಕ್ಟ್ ಗಳು ಬರಬೇಕಾದರೆ ಇಂತಹ ಪ್ರಾಜೆಕ್ಟಗಳನ್ನು ಮಾಡಲೇಬೇಕು ಎಂದು ಹೇಳಿದರು. ಅಲ್ಲದೇ ಆ ಸಿನಿಮಾದ ಲೀಡ್ ಕಲಾವಿದರಾದ ಭಾನು ಒಳ್ಳೆಯ ಬ್ರೇಕ್ ಗಾಗಿ ಈ ರೀತಿಯ ಸಿನಿಮಾ ಮಾಡಬೇಕು ಎಂದರು. ಆಗ ಒಂದರ್ಧ ಸಿನಿಮಾದ ಶೂಟಿಂಗ್ ಮುಗಿದ ಮೇಲೆ ನನಗೆ ನ ಗ್ ವಾಗಿ ನಟಿಸಲು ಹೇಳಿದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಆಗ ನನಗೆ ರೋವಾ ಬೆದರಿಕೆ ಹಾಕಿದರು. ನಿನ್ನ ಮೇಲೆ ಕೇಸನ್ನು ಹಾಕುತ್ತೇನೆ, ಚಿತ್ರೀಕರಣಕ್ಕೆ ಖರ್ಚಾದ ಹಣವನ್ನು ನೀನೇ ಕೊಡಬೇಕಾಗುತ್ತದೆ. ನಮಗೆ ಎದುರಾದ ನಷ್ಟವನ್ನು ನೀನೆ ಭರ್ತಿ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರಿಂದ, ಬೇರೆ ದಾರಿಯಿಲ್ಲದೇ ನಾನು ಆ ಸಿನಿಮಾದಲ್ಲಿ ಅವರು ಹೇಳಿದ ಸನ್ನಿವೇಶಗಳಲ್ಲಿ ಭಾಗವಹಿಸಿದ ಎಂದು ಹೇಳಿದ್ದಾರೆ.

ಇದೇ ರೀತಿ ಬಾಧಿತರಾದ ಮತ್ತೊಬ್ಬ ಸಂತ್ರಸ್ತೆ, ವೆಬ್ ಸಿರೀಸ್ ನ ಚಿತ್ರೀಕರಣದ ಹೆಸರಿನಲ್ಲಿ ನನ್ನನ್ನು ಮಡ್ ಐಲ್ಯಾಂಡ್ ನಲ್ಲಿರುವ ಬಂಗಲೆಗೆ ಕರೆಸಿದರು. ಅಲ್ಲಿ ಒಂದು ರಾಜ ರಾಣಿ ಮತ್ತು ಮೂರು ಜನ ಕುಬ್ಜರ ಕತೆಯ ಸಿನಿಮಾ ಇದು ಎಂದು ಹೇಳಿದರು. ಹೀಗೆ ಚಿತ್ರೀಕರಣದ ವೇಳೆಯಲ್ಲಿ ನನ್ನನ್ನು ಒಂದು ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಮೂರು ಜನ ಬಲವಂತವಾಗಿ ನನ್ನೊಡನೆ ದೈಹಿಕ ಸಂಪರ್ಕ ಮಾಡಿದರು. ಅನಂತರ ಗೆಹನಾ ನನಗೆ ಹೊಸ ಬಟ್ಟೆಗಳನ್ನು ನೀಡಿ ಶೂಟಿಂಗ್ ಗೆ ಹೋಗೋಣ ಎಂದಳು. ನಾನು ಆಗ ಬರುವುದಿಲ್ಲ ಎಂದಾಗ ಚಿತ್ರೀಕರಣಕ್ಕೆ ಖರ್ಚಾಗಿರುವ ಹಣ ನೀನೇ ಕಟ್ಟಬೇಕು ಎಂದು ಬೆದರಿಕೆ ಹಾಕಿದರು.

ಅಲ್ಲದೆ ನನ್ನ ಮೇಲೆ ದೂರು ನೀಡುವುದಾಗಿ, ಆಗ ನಮಗೆ ಆದ ನಷ್ಟವನ್ನು ನೀನೇ ಭರಿಸಬೇಕಾಗುತ್ತದೆ ಎಂಬುದು ಹೇಳಿದಾಗ, ನನ್ನ ಬಳಿ ಅಷ್ಟು ಹಣವಿಲ್ಲದ ಕಾರಣ ಅವರು ಹೇಳಿದಂತೆ ಮಾಡಲು ಒಪ್ಪಿದೆ. ಆಗ ಆಕಾಶ್ ಹೆಸರಿನ ಯುವಕನೊಬ್ಬ ಮತ್ತೊಮ್ಮೆ ಬಲವಂತವಾಗಿ ನನ್ನ ದೈಹಿಕ ಸಂಪರ್ಕವನ್ನು ಮಾಡಿದ. ಅದಾದ ನಂತರ ಚಿತ್ರೀಕರಣದ ಕುರಿತಾಗಿ ಹೊರಗಡೆ ಬಾಯಿ ಬಿಟ್ಟರೆ ಪರಿಸ್ಥಿತಿಗಳು ನೆಟ್ಟಗಿರುವುದಿಲ್ಲ ಎಂದು ನನಗೆ ಎಚ್ಚರಿಕೆಯನ್ನು ನೀಡಿದರು. ಹತ್ತು ಸಾವಿರ ರೂಪಾಯಿಗಳನ್ನು ಕೈಗೆ ಕೊಟ್ಟು ಅಲ್ಲಿಂದ ಕಳುಹಿಸಿದರು ಎಂದು ಹೇಳಿದ್ದಾರೆ. ಈ ಇಬ್ಬರು ಸಂತ್ರಸ್ತರ ಹೇಳಿಕೆಯ ನಂತರ ಇಷ್ಟು ದಿನ ರಾಜ್ ಕುಂದ್ರಾ ಪರವಾಗಿ ಧ್ವನಿ ಎತ್ತಿದ್ದ ಗೆಹನಾ ಹಾಗೂ ರೋವಾ ಇಬ್ಬರಿಗೂ ಆತಂಕ ಕಾಡಿದೆ. ಗೆಹನಾ ಪ್ರಸ್ತುತ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.