ಮೆಟ್ರೋ ನಲ್ಲಿ ಮೊಬೈಲ್ ಚೋರಿಗಾಗಿ ಅಕ್ಕ ಮಾಡಿದ ಸಖತ್ ಜುಗಾಡ್ ಒಮ್ಮೆ ನೋಡಿಯೇ ಬಿಡಿ; ಆಗುವಿರಿ ನೀವೂ ಹುಷಾರ್!

ಕಳ್ಳ ಯಾವತ್ತು ಒಂದು ಅವಕಾಶದ ಪ್ರತೀಕ್ಷೆಯಲ್ಲಿ ಇರುತ್ತಾನೆ. ಅವಕಾಶ ಸಿಗುತ್ತಲೇ ಆತ ಸೂಪರ್ ಆಕ್ಟಿವ್ ಆಗುತ್ತಾನೆ. ಸದ್ಯ ಇಲ್ಲಿ ನೋಡಲಿರುವ ವೈರಲ್ ವಿಡಿಯೋದಲ್ಲಿ ಇದರದ್ದೇ ಪ್ರತ್ಯಯ ಕಂಡು ಬರಲಿದೆ.

ವಿಡಿಯೋದಲ್ಲಿಯ ದೃಶ್ಯ ಒಂದು ಮೆಟ್ರೋ ಸ್ಟೇಶನ್ ನಲ್ಲಿಯದು ಎಂದು ತಿಳಿದು ಬರುತ್ತಿದೆ. ಇಲ್ಲಿ ಮಹಿಳೆಯೊಬ್ಬಳು ಕ್ಷಣದಲ್ಲಿ ತನ್ನ ಕೈ ಚಳಕ ತೋರಿಸಿದ್ದಾಳೆ. ಯುವತಿಯ ಈ ಕೆಲಸವನ್ನು ನೋಡಿದಾಗ ನೋಡುಗರಿಗೆ ಆಶ್ಚರ್ಯ ಮಾತ್ರ ಆಗದೆ ಇರದು. ಕಾರಣ ಅಂಥ ದೃಶ್ಯವೇ ಇಲ್ಲಿ ಕಾಣಿಸುತ್ತದೆ. ಸ್ಟೇಷನ್ ನಲ್ಲಿ ಹುಡುಗನೊಬ್ಬ ತನ್ನ ಮೊಬೈಲ್ ನಲ್ಲಿ ಪೂರಾ ಮುಳುಗಿ ಹೋಗಿದ್ದಾನೆ. ಆತನ ಹಿಂದೆ ನಿಂತ ಕಳ್ಳ ಯುವತಿಯು ಸರಿಯಾಗಿ ಸ್ಕೆಚ್ ಹಾಕಿದ್ದಾಳೆ. ಆಕೆ ಎಂದು ಕೊಂಡಂತೆ ಅವಕಾಶವೂ ಸಹ ಕೂಡಿ ಬಂದಿದೆ. ಯುವಕ ತನ್ನ ಮೊಬೈಲ್ ತೆಗೆದುಕೊಂಡು ಬಾಗಿಲಲ್ಲಿಯೇ ನಿಂತಿದ್ದಾನೆ. ಇದು ಕಳ್ಳ ಯುವತಿಗೆ ವರವಾಗಿ ಸಾಬೀತಾಗಿದೆ. ಹೀಗಾಗಿ ಆಟೋಮ್ಯಾಟಿಕ್ ಡೋರ್ ಇನ್ನೇನು ಮುಚ್ಚಬೇಕು ಎನ್ನುವಷ್ಟರಲ್ಲಿ ಯುವತಿ ಯುವಕನ ಕೈಯಿಂದ ಮೊಬೈಲ್ ಕಸಿದು ಅಲ್ಲಿಂದ ಪರಾರಿಯಾಗುವದರಲ್ಲಿ ಯಶಸ್ವಿಯಾಗಿದ್ದಾಳೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ @craziestlazy ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನಂತರ ನೆಟ್ಟಿಗರು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬನು ಇದಕ್ಕೆ ಸ್ಕ್ರಿಪ್ಟೆಡ್ ಅಂದರೆ ಇನ್ನೊಬ್ಬ ಮೆಟ್ರೋದಲ್ಲಿಯೂ ಇನ್ನು ತುಂಬಾ ಹುಷಾರಾಗಿರಬೇಕು ಎಂದು ಸಲಹೆ ನೀಡಿದ್ದಾನೆ.