ಮೊಟ್ಟೆಗಳನ್ನು ಕುದಿಸುವ ಸರಿಯಾದ ಪದ್ಧತಿ, ಹೀಗೆ ಮಾಡಿದರೆ ಕುದಿಯುವ ಸಮಯದಲ್ಲಿ ಒಡೆಯುವುದಿಲ್ಲ ಮೊಟ್ಟೆಗಳು..
ಮೊಟ್ಟೆ ಇದು ಪರಿಪೂರ್ಣ ಪೋಷಕ ಘಟಕವಾಗಿದೆ. ಮಾನವನ ದೇಹಕ್ಕೆ ಅಮೂಲ್ಯವಾದ ಶಕ್ತಿಯ ಘಟಕಗಳನ್ನು ಮೊಟ್ಟೆ ಒದಗಿಸುತ್ತದೆ. ನಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ದಿನನಿತ್ಯ ಉಪಯೋಗಿಸಿದರಂತೂ ದೇಹಕ್ಕೆ ತುಂಬಾ ಲಾಭಗಳಾಗುವವು. ಶರೀರಕ್ಕೆ ಸದೃಢ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುವದರಲ್ಲಿ ಮೊಟ್ಟೆ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಇಂಥ ಉಪಯುಕ್ತವಾದ ಮೊಟ್ಟೆಗಳನ್ನು ನಾವು ಕುದಿಸುವಾಗ ಎಷ್ಟೋ ಸಲ ಒಡೆದು ಹೋಗುತ್ತವೆ. ಅವು ಯಾಕೆ ಒಡೆಯುತ್ತವೆ? ಮೊಟ್ಟೆಗಳು ಒಡೆಯದೆ ಸರಿಯಾಗಿ ಹೇಗೆ ಕುದಿಸಬಹುದು ಎಂಬುದರ ಬಗ್ಗೆ ಕೆಲವು ಟಿಪ್ಸ್ ಗಳು ಇಲ್ಲಿವೆ…ಒಮ್ಮೆ ನೋಡಿ.

- ಮೊಟ್ಟೆಗಳನ್ನು ಕುದಿಸುವಾಗ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿರಿ, ಇದರಿಂದ ಮೊಟ್ಟೆಯ ಮೇಲಿರುವ ಕವಚ ಸರಿಯಾಗಿ ಕಳಚಲು ಸಹಾಯವಾಗುವುದು.
- ಮೊಟ್ಟೆಗಳನ್ನು ಕುದಿಸುವ ಮುನ್ನ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಕಾಯಿಸಿಕೊಳ್ಳಿ. ಆ ನೀರು ಕುದಿಯಲು ಪ್ರಾರಂಭಿಸಿದಾಗ ಅದರಲ್ಲಿ ಮೊಟ್ಟೆಗಳನ್ನು ಹಾಕಿ ಈ ಟಿಪ್ಸ್ ನಿಂದ ಮೊಟ್ಟೆಗಳು ಒಡೆಯುವುದಿಲ್ಲ.
- ಕೆಲವರು ಮೊಟ್ಟೆಗಳನ್ನು ತುಂಬಾ ಸಮಯದವರೆಗೆ ಕುದಿಸುವರು, ಇದರಿಂದ ಮೊಟ್ಟೆಗಳು ಒಡೆಯುತ್ತವೆ. ನಿಧಾನಗತಿಯ ಉರಿಯ ಮೇಲೆ 10 ನಿಮಿಷ ಕುದಿಸಿದರೆ ಸಾಕು. ಒಂದು ವೇಳೆ ನಿಮಗೆ ಹಾರ್ಡ್ ಬಾಯಿಲ್ಡ್ ಮೊಟ್ಟೆ ಹಿಡಿಸುತ್ತಿದ್ದರೆ ನಾಲ್ಕೈದು ನಿಮಿಷ ಜಾಸ್ತಿ ಕುದಿಸಬಹುದು.
- ಮೊಟ್ಟೆಗಳು ಕುದಿಸುವಾಗ ಅವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರಬೇಕು. ಕಡಿಮೆ ನೀರು ಇರುವುದರಿಂದಲೂ ಮೊಟ್ಟೆಗಳು ಬ್ರೇಕ್ ಆಗುತ್ತವೆ.
- ಮೊದಲೇ ಬ್ರೇಕ್ ಆದ ಮೊಟ್ಟೆಗಳು ಇದ್ದರೆ ಆ ಜಾಗದಲ್ಲಿ ಸ್ವಲ್ಪ ವಿನೆಗರ್ ಹಚ್ಚಿ ಕುದಿಸಿ, ಇದರಿಂದ ಅವು ಒಡೆಯುವುದಿಲ್ಲ.

6.ಮೊಟ್ಟೆಗಳನ್ನು ಕುದಿಸಿ ಆದಮೇಲೆ ತಕ್ಷಣ ಅವುಗಳನ್ನು ತಣ್ಣೀರಿನಲ್ಲಿ ಹಾಕಬೇಡಿ. ಇದರಿಂದ ಮೊಟ್ಟೆಯ ಒಳಗಿನ ಹಳದಿ ಲೋಳೆಯ ಬಣ್ಣವು ತಿಳಿಯಾಗುವದು. ಹಾಗೂ ಸ್ವಾದವೂ ಕಳೆದುಕೊಳ್ಳುವುದು.
- ಕುದಿಸಿದ ಮೊಟ್ಟೆಗಳ ಕವಚವನ್ನು ಮೇಲಿನಿಂದ ತೆಗೆಯುತ್ತ ಹೋಗಬೇಕು. ಇಲ್ಲಿರುವ ಹವೆಯಿಂದಾಗಿ ಕೆಲಸ ಸುಲಭವಾಗುವುದು.

ಮೊಟ್ಟೆಗಳಿಂದ ಎಲುಬುಗಳು ಸದೃಢವಾಗುತ್ತದೆ. ಕಾಂತಿಯುತವಾದ ಚರ್ಮ, ದೇಹದ ಬೆಳವಣಿಗೆ, ನಿರೋಗಿ ಕಣ್ಣುಗಳು ಇವೆಲ್ಲದರ ಜೊತೆಗೆ ದೇಹದ ಸೌಂದರ್ಯ ಅಭಿವೃದ್ಧಿಗೂ ಸಹಾಯವಾಗುತ್ತದೆ.