ಮೊಟ್ಟೆಗಳ ‘ಟಾವರ್’ ಮಾಡಿ ವಿಶ್ವ ದಾಖಲೆ ಮಾಡಿದ ಯುವಕ! ನೋಡಿ ಈ ವಿಡಿಯೋ!

ಕೋಳಿ ಮೊದಲಾ? ಮೊಟ್ಟೆ ಮೊದಲಾ? ಜಗವೆಲ್ಲ ಈ ಪ್ರಶ್ನೆಯ ಉತ್ತರ ಹುಡುಕುತ್ತಿರುವಾಗ ಇಲ್ಲೊಬ್ಬ ಮೊಟ್ಟೆಗಳ ಅಸಾಧ್ಯವಾದ ಟಾವರ್ ನ್ನು ನಿರ್ಮಿಸಿ ಜಗತ್ತಿಗೆ ಸವಾಲ್ ಹಾಕಿದ್ದಾನೆ. ಜಗತ್ತಿನಲ್ಲಿ ಅನೇಕ ಜನರಿದ್ದಾರೆ, ಅವರು ಮೊಟ್ಟೆಗಳ ಜೊತೆಗೆ ಆಶ್ಚರ್ಯ ವಾಗುವಂಥ ನಾನಾವಿಧವಾದ ಟ್ರಿಕ್ಸ್ ಗಳನ್ನು ಮಾಡಿದ್ದಾರೆ.

ಇಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಸೇರಿಸಿದ ವ್ಯಕ್ತಿಯ ಬಗ್ಗೆ ತಿಳಿಯುವಾ. ಈ ವ್ಯಕ್ತಿ ಮೊಟ್ಟೆಗಳ ಜೊತೆಗೆ ಇಂಥ ಆಟಗಳನ್ನು ಆಡುತ್ತಿರುತ್ತಾನೆ. ಇದನ್ನು ನೋಡಿ ಗ್ರ್ಯಾವಿಟಿ ಮೇಲೂ ಸಂಶಯ ನಿರ್ಮಾಣವಾಗುತ್ತದೆ. ಈ ವ್ಯಕ್ತಿಯ ಹೆಸರು Mohammed Abelhameed Muqbel ಇದೆ. ಈತ ಮಲೇಷಿಯಾದ ರಾಜಧಾನಿಯಾದ ಕ್ವಾಲಾಲಂಪುರ್ ನಲ್ಲಿರುತ್ತಾನೆ. ಈತ ಮೊಟ್ಟೆಗಳ ಮೇಲೆ ಮೊಟ್ಟೆಗಳನ್ನಿಟ್ಟು ಇಡೀ ಜಗತ್ತಿಗೆ ಚಕಿತಗೊಳಿಸಿದ್ದಾನೆ.

View this post on Instagram

Have you ever seen anything like this before?! ⁣ ⁣ The most eggs stacked is 3 and was achieved by Mohammed Abelhameed Mohammed Muqbel (Yemen), in Kuala Lumpur, Malaysia, on 10 April 2020.⁣ ⁣ ⁣ Mohammed Abelhameed was able to identify each egg's centre of mass and stack them exactly so that the combined centre of mass of the three eggs was situated directly above the very small base of the stack. This required high concentration, patience and practice – do you have what it takes to break the record?! Please don't waste any eggs! 🍳🥚❤️️⁣ —————————————————-⁣ #guinnessworldrecords #eggs #egg #eggstack #records #malaysia #video #cool #food

A post shared by Guinness World Records (@guinnessworldrecords) on

ಈ ವ್ಯಕ್ತಿಯ ಅದ್ಭುತ ಕಲೆಯನ್ನು ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ತಮ್ಮ ಅಧೀಕೃತವಾದ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಸುದ್ದಿ ಪ್ರಕಟವಾಗುವವರೆಗೆ ಸುಮಾರು 1 ಲಕ್ಷ 42 ಸಾವಿರಕ್ಕೂ ಹೆಚ್ಚು ವ್ಯೂವ್ಜ್ ದೊರಕಿವೆ. ಕ್ಯಾಪ್ಶನ್ ನಲ್ಲಿ ಮತ್ತೆ ಹೀಗೆ ಬರೆದಿದ್ದಾರೆ. ‘ನೀವು ಮೊದಲು ಈ ತರ ಏನಾದ್ರು ನೋಡಿದ್ದೀರಾ’?

ಹೇಗೆ ಮಾಡುತ್ತಾರೆ ಇದನ್ನು?

Mohammed Abelhameed Muqbel ನು ಇದೇ ವರ್ಷ ಏಪ್ರಿಲ್ 10 ರಂದು ಮೂರು ಮೊಟ್ಟೆಗಳನ್ನು ಒಂದರ ಮೇಲೊಂದು ಇಟ್ಟು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ಜೋಡಿಸಿದರು. ಈತ ಮೊಟ್ಟೆಯ ಸೆಂಟರ್ ಆಫ್ ಮಾಸ್ ಗುರುತಿಸಿ ಅದರ ಸಹಾಯದಿಂದ ಈ ಅಸಾಧ್ಯವಾದ ಟಾವರ್ ನ್ನು ನಿರ್ಮಿಸುತ್ತಾರೆ. ಇದು ಯಾವುದೇ ಸಾಮನ್ಯ ವ್ಯಕ್ತಿಗೆ ಸಾಧ್ಯವಾಗುವದಿಲ್ಲ. ಇದರಲ್ಲಿ ನಿಪುಣತೆ ಹೊಂದಲು ಪ್ರ್ಯಾಕ್ಟೀಸ್, ಏಕಾಗ್ರತೆ ಮತ್ತು ಸಂಯಮದ ಅವಶ್ಯಕತೆ ಇರುತ್ತದೆ.