ಮೊದಲು ‘ಡಾಕ್ಟರ್ ನನ್ನು ಕೊರೊನ ವಾರಿಯರ್ಸ್ ಎಂದು ಮಾಡಿದರು ಭರ್ಜರಿ ಸ್ವಾಗತ! ಕೊರೊನಾ ಲಕ್ಷಣ ಕಂಡು ಬಂದಿದ್ದೇ ತಡ ಮನೆಯಲ್ಲೂ ಕೊಡಲಿಲ್ಲ ಎಂಟ್ರಿ!
ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿಯ ಸಿವಿಲ್ ಆಸ್ಪತ್ರೆಯಲ್ಲಿ (Nashik Civil Hospital) E&T ಸರ್ಜನ್ ರಾದ ಡಾ. ಸಂಜಯ್ ಗಾಂಗುರ್ಡೆ ಅವರಿಗೆ ತಮ್ಮದೇ ಅಪಾರ್ಟ್ ಮೆಂಟ್ ನಲ್ಲಿ ಬರಲು ತಡೆದರು. ಕಳೆದ ಮಂಗಳವಾರ ಕೊರೊನ ಲಕ್ಷಣಗಳು ಕಂಡು ಬಂದ ಮೇಲೆ ಡಾಕ್ಟರ್ಸ್ ಗಳು ಅವರಿಗೆ ಮನೆಯಲ್ಲೇ ಐಸೋಲೇಶನ್ ಮಾಡಿಕೊಳ್ಳಲು ಸಲಹೆ ಕೊಟ್ಟಿದ್ದರು.
ಡಾ. ಸಂಜಯ್ ಹೇಳುವ ಪ್ರಕಾರ ಕೆಲವು ದಿವಸಗಳ ಹಿಂದೆ ಕೊರೊನ ಸಂಕ್ರಮಿತರಿಗೆ ಉಪಚಾರ ಮಾಡಿ ಮನೆಗೆ ಬಂದ ನಂತರ ತಮ್ಮ ನೆರೆಹೊರೆಯವರೆಲ್ಲರೂ “ಕೊರೊನ ವಾರಿಯರ್ಸ್” ನ ಹಾಗೆ ಚಪ್ಪಾಳೆ ತಟ್ಟಿ ಸ್ವಾಗತ ಮಾಡಿದ್ದರು. ಆದರೀಗ ನನಗೆ ಸಂಕ್ರಮಣದ ಲಕ್ಷಣ ಕಾಣಿಸಿದಾಗ ನನ್ನನ್ನು ಮನೆಯಲ್ಲೇ ಸೇರಲು ಬಿಡುತ್ತಿಲ್ಲ ಎಂಬ ನೋವು ಹೊರ ಹಾಕಿದ್ದಾರೆ.

ಆರೋಗ್ಯ ವಿಭಾಗದ ನಿರ್ದೇಶಗಳ ಪ್ರಕಾರ ಸೌಮ್ಯ ಲಕ್ಷಣಗಳು ಕಂಡು ಬಂದಾಗ ತಮ್ಮ ಮನೆಯಲ್ಲಿಯೇ ಬೇರೆ ವ್ಯವಸ್ಥೆ ಮಾಡಿಕೊಂಡಿರಲು ಸೂಚಿಸಿದ್ದಾರೆ. ಆದರೆ ಅವರಿರುವವ ಸೊಸೈಟಿಯ ಸದಸ್ಯರು ಮೀಟಿಂಗ್ ತೆಗೆದುಕೊಂಡು ಇವರಿಗೆ ಫೋನ್ ಮಾಡಿ ನೀವು ಮನೆಗೆ ದಯವಿಟ್ಟು ಬರಬೇಡಿ,ಅಲ್ಲಿದ್ದುಕೊಂಡೇ ನಿಮ್ಮ ಉಪಚಾರ ಮಾಡಿಕೊಳ್ಳಿರಿ ಎಂದು ಹೇಳಿದ್ದಾರೆ.
ಈ ಸಂಬಂಧವಾಗಿ ಸೊಸೈಟಿಯವರಿಗೆ ಕೇಳಿದಾಗ ಯಾರು ಸರಿಯಾದ ಕಾರಣ ಕೊಡಲು ತಯಾರಿಲ್ಲ ಎಂದು ತಿಳಿದು ಬಂದಿದೆ. ಈಗ ನಾಶಿಕ ಸಿವಿಲ್ ಆಸ್ಪತ್ರೆ ಬಿಟ್ಟು ಇರಲು ಬೇರೆ ಜಾಗವಿಲ್ಲ. ಇಲ್ಲಿ COVID-19 ಉಪಚಾರ ಕೇಂದ್ರವಿದೆ. ಇಲ್ಲಿ ಸದ್ಯಕ್ಕೆ 100 ಬೆಡ್ ಗಳ ವ್ಯವಸ್ಥೆ ಮಾತ್ರ ಇದೆ, ಇಲ್ಲಿ ರೋಗಿಗಳು ಇರುವದರಿಂದ ನನಗೆ ಸ್ಟೋರ್ ರೂಮಲ್ಲಿ ಇಡಲಾಗಿದೆ, ಹಾಗೂ ನನ್ನ ಪತ್ನಿ ಬದಿಯ ಕೋಣೆಯಲ್ಲಿದ್ದು ಇಲ್ಲಿ ಯಾವುದೇ ತರಹದ ಸೌಲಭ್ಯಗಳು ಇಲ್ಲದಿರುವದರಿಂದ ಆಕೆ ತುಂಬಾ ಚಿಂತಿತಳಾಗಿದ್ದಾಳೆ. ನಮ್ಮಿಬ್ಬರ ಎಲ್ಲ ವ್ಯವಸ್ಥೆ ನನ್ನ ಮಿತ್ರರು ಮಾಡ್ತಾ ಇದ್ದಾರೆ. ಈ ಸಂಬಂಧವಾಗಿ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಸುರೇಶ್ ಜಗದಾಳೆ ಯವರನ್ನು ಸಂಪರ್ಕಿಸಿದಾಗ ಅವರು ಕ್ವಾರಂಟೈನ್ ನಲ್ಲಿಲ್ಲ, ಸಿಓವಿಓ (COVO) ಕೇರ್ ಸೆಂಟರ್ ನಲ್ಲಿದ್ದಾರೆ. ನನಗೆ ಗೊತ್ತು ಇಲ್ಲಿ ಮನೆಯ ಹಾಗೆ ಸೌಲಭ್ಯಗಳು ಸಿಗಲ್ಲ ಸ್ವಲ್ಪ ಹೊಂದಿಕೊಳ್ಳಬೇಕಾಗುತ್ತದೆ, ಹಾಗೂ ಡಾ. ಸಂಜಯ್ ಅವರಿಗೆ ಸ್ಟೋರ್ ರೂಮಲ್ಲಿ ಇಟ್ಟಿಲ್ಲ, ವಿಶೇಷ ಕೋಣೆಯಲ್ಲಿ ಇಡಲಾಗಿದೆ ಮತ್ತು ಅವರ ಸಂಪೂರ್ಣ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಆಸ್ಪತ್ರೆಯಲ್ಲಿಯ ಬೇರೆ ಇಬ್ಬರು ಡಾಕ್ಟರ್ಸ್ ಗಳಿಗೂ ಸೋಂಕು ತಗುಲಿದೆ.