ಮೊದಲ ರಾತ್ರಿ ಮನೆಯವರಿಗೆಲ್ಲ ಸ್ವೀಟ್ ಹಂಚಿದ ಮಧುಮಗಳು! ಆಮೇಲೆ ಮಾಡಿದಳು ಇಂಥ ಕೆಲಸ!
ನಮ್ಮ ದೇಶದಲ್ಲಿ ವೈವಾಹಿಕ ಸಂಬಂಧಗಳ ಮೇಲೆ ಅಪಾರ ವಿಶ್ವಾಸವಿಡಲಾಗುತ್ತದೆ. ಇದು ತುಂಬಾ ಪವಿತ್ರವೆಂದೂ ತಿಳಿಯಲಾಗುತ್ತದೆ. ಇಂಥ ಸಂಬಂಧ ಏಳೇಳು ಜನ್ಮಗಳವರೆಗೂ ಕಾಯ್ದುಕೊಂಡಿರುತ್ತದೆ ಎಂಬ ನಂಬಿಕೆ ಇದೆ. ಈ ಎಲ್ಲ ಕಾರಣಗಳಿಂದ ಮದುವೆಯ ಮೊದಲು, ಎರಡು ಕಡೆಯ ಪೋಷಕರು ತುಂಬಾ ಪರೀಕ್ಷಿಸಿ ತನಿಖೆ ವಿಚಾರ ವಿನಿಮಯ ಮಾಡಿಯೇ ಮುಂದೆ ಹೆಜ್ಜೆ ಇಡುತ್ತಾರೆ. ಇಷ್ಟೆಲ್ಲ ಆದರೂ ಕೆಲವು ಮದುವೆಗಳು ನಂತರದ ಕಾಲದಲ್ಲಿ ಏನಾದರೊಂದು ಕಾರಣದಿಂದ ಮುರಿದುಬಿಡುತ್ತವೆ.

ಉತ್ತರಪ್ರದೇಶದಲ್ಲಿಯ ಒಂದು ಘಟನೆ ಬೇರೆಯದಾದ ಕಥೆಯನ್ನೇ ಹುಟ್ಟು ಹಾಕಿದೆ. UP ಯ ಶಿಕೊಹಾಬಾದ ಹತ್ತಿರದ ಆರೋನಜ್ ಊರ ನಿಯಾಸಿಯಾದ ಧರ್ಮೇಂದ್ರ ಮದುವೆಯ ನಂತರದ ಸುಂದರ ಕನಸುಗಳು ಕಾಣುವ ಹೊತ್ತಿಗೆ ಬೆಚ್ಚಿ ಬೀಳಿಸುವ ಶಾಕ್ ಒಂದನ್ನು ಹೆಂಡತಿ ಮೊದಲ ರಾತ್ರಿಯಲ್ಲಿಯೇ ಕೊಡಬೇಕಾ? ಭರ್ಜರಿ ಮದುವೆ ಮಾಡಿಕೊಂಡು ಮೊದಲರಾತ್ರಿ ಸ್ವರ್ಗಸುಖದಲ್ಲಿ ತೇಲಾಡುವ ಕನಸು ಹೊತ್ತ ಮದುಮಗನಿಗೆ ಪತ್ನಿ ತನ್ನ ಪತಿ ಸಮೇತ ಮನೆಯವರೆಲ್ಲರಿಗೂ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಇದರರ್ಥ ಮದುವೆಯಲ್ಲಿ ಯಾವುದೇ ಪ್ರಕಾರ ಜಗಳ, ಹೊಡೆದಾಟವಾಗಿರಬಹುದು ಎಂದು ಭಾವಿಸಬೇಡಿ. ಮದುವೆಯ ಪೂರ್ವದಲ್ಲಿ ಮತ್ತು ಮದುವೆಯ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿಯೇ ನಡೆದಿತ್ತು. ಮದುವೆಯಾಗಿ ಮನೆಗೆ ಬಂದ ಮೇಲೆ ಮದುಮಕ್ಕಳಿಬ್ಬರ ಸಮೇತ ಉಳಿದವರದ್ದೂ ಜೋರಾಗಿಯೇ ಸ್ವಾಗತ ಮಾಡಿದರು. ಆದರೆ ಮದುಮಗಳ ಕಡೆಯಿಂದ ತಂದ ಮಿಠಾಯಿಗಳು ಮಾತ್ರ ಪ್ರಜ್ಞೆ ತಪ್ಪಿಸುವ ಔಷಧಿಯಿಂದ ಕೂಡಿತ್ತು. ಮದುವೆ ಮಾಡಿಕೊಂಡು ಬಂದು, ನಂತರ ಮದುವೆಯ ಮನೆಯನ್ನು ಲೂಟಿ ಮಾಡುವ ಉದ್ದೇಶದಿಂದ ಹೆಣೆದ ಜಾಲ ಅದಾಗಿತ್ತು ಎಂಬುದು ನಂತರ ಗೊತ್ತಾಯಿತು.

ಮದುಮಗಳು ಎಲ್ಲರಿಗೂ ಪ್ರಜ್ಞೆ ತಪ್ಪಿಸಿ ಮನೆಯಲ್ಲಿಯ ಬಂಗಾರದ ಆಭರಣಗಳೆಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಳು. ಹೋಗುವಾಗ ಜೊತೆಗೆ ಎಲ್ಲ ಸಾಮಾನುಗಳನ್ನು ಸಹಿತ ಎತ್ತಿಕೊಂಡು ಹೋಗಿದ್ದಾಳೆ. ಈ ಘಟನೆಯಿಂದ ಹುಡುಗನ ಕಡೆಯವರು ಪೂರ್ಣತ: ಆತಂಕದಲ್ಲಿದ್ದಾರೆ.
ಮದುವೆಯ ಎರಡನೆಯ ದಿನವೇ ಹುಡುಗನ ಕಡೆಯವರೆಲ್ಲರೂ ಆಸ್ಪತ್ರೆಯಲ್ಲಿದ್ದಾರೆ. ಮದುವೆಯ ಮೊದಲ ರಾತ್ರಿಯೇ ವಧು ತನ್ನ ಕೈಯಿಂದಲೇ ಎಲ್ಲರಿಗೂ ಮಿಠಾಯಿ ಹಂಚಿದ್ದಳು. ಆದ್ದರಿಂದ ಎಲ್ಲರೂ ಪ್ರಜ್ಞೆ ತಪ್ಪಿದ್ದರು. ಆಗ ಲೂಟಿಗಾರರು ಮನೆಯೆಲ್ಲ ಲೂಟಿ ಮಾಡಿ ಪರಾರಿಯಾಗಿದ್ದರು. ಮರುದಿನ ಮುಂಜಾನೆ ನೆರೆಹೊರೆಯವರಿಗೆ ಮನೆಯಿಂದ ಯಾವ ಶಬ್ದವೂ ಕೇಳಿಸದ ಕಾರಣ ಬಾಗಿಲು ಬಡೆದಿದ್ದಾರೆ. ಆಗಲೇ ಗೊತ್ತಾಗಿದ್ದು ಎಲ್ಲರೂ ಪ್ರಜ್ಞೆ ತಪ್ಪಿರುವದು. ತದನಂತರ ಶೀಘ್ರದಲ್ಲಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಆಮೇಲೆ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ.