ಮೊದಲ ಸೀರಿಯಲ್ ಗೆ ಇಷ್ಟೊಂದು ಸಂಭಾವನೇನಾ!! ಹಿಟ್ಲರ್ ಕಲ್ಯಾಣದ ಲೀಲಾ ಖ್ಯಾತಿಯ ನಟಿಯ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳದ್ದೇ ಅಬ್ಬರ. ಇತ್ತೀಚಿನ ವರ್ಷಗಳಲ್ಲಂತೂ ಅದ್ದೂರಿ ಸೀರಿಯಲ್ ಗಳ ಭರ್ಜರಿ ಸ್ಪರ್ಧೆಯೊಂದು ಏರ್ಪಟ್ಟಂತೆ, ಒಂದಕ್ಕಿಂತ ಮತ್ತೊಂದು ಎನ್ನುವಂತೆ ವೈಭವ ಮೆರೆಯುವ ದೃಶ್ಯ ವೈಭೋಗದ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಕಿರುತೆರೆಯ ಪ್ರೇಕ್ಷಕರ ಮೇಲಂತೂ ಧಾರಾವಾಹಿಗಳ ಪಾತ್ರಗಳು ಯಾವ ರೀತಿ ಪ್ರಭಾವ ಬೀರಿದೆ ಎಂದರೆ ಈ ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರನ್ನು ಅವರ ಅಸಲಿ ಹೆಸರಿನ ಬದಲಾಗಿ ಪಾತ್ರಗಳ ಹೆಸರಿನ ಮೂಲಕವೇ ಗುರುತಿಸುವುದು ಸಹಜ ಎನಿಸಿದೆ. ಈಗಾಗಲೇ ದೊಡ್ಡಮಟ್ಟದ ಜನಪ್ರಿಯತೆ ಪಡೆದಿರುವ ಧಾರಾವಾಹಿಗಳ ಸಾಲಿಗೆ ಈಗ ಮತ್ತೊಂದು ಹೊಸ ಧಾರಾವಾಹಿ ಸೇರಿದೆ. ಅಲ್ಲದೇ ಆರಂಭದಿಂದಲೇ ಒಂದು ಹೊಸ ಕುತೂಹಲ ಹಾಗೂ ಆಸಕ್ತಿಯನ್ನು ಕೆರಳಿಸಿ, ಮೊದಲನೇ ವಾರದಲ್ಲೇ ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡ ಈ ಹೊಸ ಧಾರಾವಾಹಿ ಈಗ ಜನಪ್ರಿಯತೆಯ ನಾಗಾಲೋಟ ಮಾಡಿದೆ.

ಯಾವುದು ಈ ಹೊಸ ಧಾರಾವಾಹಿ ಎಂದು ಹೇಳುವ ಮೊದಲೇ ಒಂದಷ್ಟು ಜನರ ಮನಸ್ಸಿನಲ್ಲಿ ಅದಕ್ಕೆ ಉತ್ತರ ಈಗಾಗಲೇ ಸಿಕ್ಕಿರುತ್ತದೆ. ಕಿರುತೆರೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ನಟ ದಿಲೀಪ್ ರಾಜ್ ಅವರ ನಾಯಕತ್ವದಲ್ಲಿ, ಅವರೇ ನಿರ್ಮಾಣ ಮಾಡುತ್ತಿರುವ ಹೊಸ ಧಾರಾವಾಹಿ ಹಿಟ್ಲರ್ ಕಲ್ಯಾಣ ಪ್ರಾರಂಭವಾಗಿದೆ. ಹೊಸ ಹಾಗೂ ವಿಭಿನ್ನ ಕಥೆಯೊಂದಿಗೆ ಅದ್ದೂರಿಯಾಗಿ ಮೂಡಿ ಬರುತ್ತಿರುವ ಧಾರಾವಾಹಿ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಇದೇ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಲೋಕಕ್ಕೆ ಹೆಜ್ಜೆ ಇಟ್ಟಿರುವ ಹೊಸ ನಟಿ ಮಲೈಕ ಟಿ ವಸು ಪಾಲ್. ಈ ನಟಿಗೆ ಇದು ಮೊದಲ ಧಾರಾವಾಹಿ ಆದರೆ ಮೊದಲ ಧಾರವಾಹಿಯಲ್ಲೇ ಬಿಂದಾಸ್ ಹುಡುಗಿಯಾಗಿ, ಸೂಪರ್ ಡೈಲಾಗ್ ಡೈಲಾಗ್ ಡಿಲೆವರಿ ಮೂಲಕ ಜನರ ಮೆಚ್ಚುಗೆಯನ್ನು ಗಳಿಸುವಲ್ಲಿ ಯುವ ನಟಿ ಈಗಾಗಲೇ ಯಶಸ್ಸಿನ ಹಾದಿಯನ್ನು ಹಿಡಿದಿದ್ದಾರೆ.

ಮಲೈಕಾ ಅವರನ್ನು ಧಾರಾವಾಹಿಯ ಆಡಿಷನ್ ಗೆ ಕರೆದಾಗ ಆಡಿಶನ್ ನೀಡಿ ಹೋಗಿದ್ದ ಅವರಿಗೆ ವಾಹಿನಿಯ ಕಡೆಯಿಂದ ಕರೆ ಬಂದಾಗ ಬಹಳ ಆಶ್ಚರ್ಯವಾಗಿತ್ತು ಮತ್ತು ಧಾರಾವಾಹಿಯಲ್ಲಿ ಲೀಲಾ ಪಾತ್ರದಲ್ಲಿ ನಟಿಸಲು ಬಹಳಷ್ಟು ಉತ್ಸುಕತೆ ತನ್ನಲ್ಲಿ ಇತ್ತು ಎಂಬುದಾಗಿ ಒಂದು ಸಂದರ್ಶನದಲ್ಲಿ ಹೇಳಿದ್ದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಪಾತ್ರ ಬಹಳ ಗಮನ ಸೆಳೆದಿದ್ದು, ಇನ್ನು ಮೊದಲನೇ ಧಾರಾವಾಹಿಗೆ ಮಲೈಕಾ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಏಕೆಂದರೆ ಧಾರಾವಾಹಿ ಹೊಸದು, ನಟಿಯು ಕೂಡಾ ಹೊಸಬರೇ ಆದರೆ ಬಹಳ ಬೇಗ ಅವರ ಪಾತ್ರ ಜನಪ್ರಿಯತೆ ಪಡೆದುಕೊಂಡಿದೆ. ಹಾಗಾದರೆ ಬನ್ನಿ, ಲೀಲಾ ಪಾತ್ರದ ಮೂಲಕ ಜನರನ್ನು ರಂಜಿಸುತ್ತಿರುವ ಮಲೈಕ ಧಾರಾವಾಹಿಯಲ್ಲಿ ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿಯೋಣ.

ನಟಿ ಮಲೈಕಾ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿನ ತಮ್ಮ ಪಾತ್ರಕ್ಕೆ ದಿನವೊಂದಕ್ಕೆ ₹12000 ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ನವನಟಿಯಾದ್ದರಿಂದ ಅಲ್ಲದೆ ಇದೇ ಮೊದಲ ಧಾರಾವಾಹಿ ಆಗಿರುವುದರಿಂದ ಅವರ ಸಂಭಾವನೆ 12000 ಎನ್ನಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸೀರಿಯಲ್ ನ ಯಶಸ್ಸು ಹಾಗೂ ಜನಪ್ರಿಯತೆ ಹೆಚ್ಚಿದಂತೆ ಸಂಭಾವನೆ ಕೂಡ ಹೆಚ್ಚುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ ಎಂದು ಹೇಳಬಹುದು. ಒಟ್ಟಾರೆ ಮೊದಲನೇ ಸೀರಿಯಲ್ ಮೂಲಕವೇ ಲೀಲಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ ನಟಿ ಮಲೈಕಾ