ಮೊಸಳೆಯ ಬಾಯಿಯಲ್ಲಿ ಇದ್ದರೂ ತನ್ನ ಜೀವ ಹೇಗೆ ಉಳಿಸಿಕೊಂಡಿತು ಆಮೆ; ನೋಡಿ ಈ Viral Video!

ನಮ್ಮ ಪ್ರಕೃತಿಯಲ್ಲಿ ಜೀವಿ ಜೀವಿಗಳ ನಡುವೆ ವೈವಿಧ್ಯಮಯವಾದ ರಚನೆಯನ್ನು ನಾವು ನೋಡಬಹುದು. ಇದನ್ನು ಜೀವ ವೈವಿಧ್ಯತೆ ಎಂದು ಕೂಡಾ ಕರೆಯಬಹುದು. ಇಂತಹ ಜೀವ ವೈವಿಧ್ಯತೆ ಯಲ್ಲಿ ಪರಿಸರವು ಸಮೃದ್ಧ ಹಾಗೂ ಸಂಪದ್ಭರಿತವಾಗಿದೆ. ಅನೇಕ ಜೀವಿಗಳಿಗೆ ಅವುಗಳ ರಚನೆಯು ಅವುಗಳ ರಕ್ಷಣಾ ಕವಚವಾಗಿ ಕೂಡಾ ಕಾರ್ಯವನ್ನು ನಿರ್ವಹಣೆ ಮಾಡುತ್ತವೆ. ಇಂತಹ ವೈವಿದ್ಯಮಯ ಜೀವಿಗಳ ವಿಶೇಷವಾದ ಫೋಟೋಗಳು ಹಾಗೂ ವೀಡಿಯೋಗಳನ್ನು ನೋಡುವುದು ಕೂಡಾ ಬಹಳ ಖುಷಿ ಎನಿಸುವುದರ ಜೊತೆಗೆ ಕೆಲವೊಮ್ಮೆ ಅವು ಅದ್ಭುತ ಎನಿಸುವುದು ಮಾತ್ರವೇ ಅಲ್ಲದೇ ನಮಗೆ ಜೀವನ ಪಾಠವನ್ನು ಕೂಡಾ ಕಲಿಸುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಶೇರ್ ಆಗಿ ಜನರ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಅದನ್ನು ಶೇರ್ ಮಾಡಿರುವ ಟ್ವಿಟರ್ ಬಳಕೆದಾರರು ವೀಡಿಯೋ ಜೊತೆ ಶೀರ್ಷಿಕೆಯಲ್ಲಿ ಈ ಜಗತ್ತಿನಲ್ಲಿ ಬದುಕಿರಬೇಕಾದರೆ ದಪ್ಪ ಚರ್ಮ ಮತ್ತು ಸದೃಢ ಮನಸ್ಸು ಇರಬೇಕು, ನೀವಾಗಿ ನೀವು ಅವಕಾಶ ನೀಡದ ಹೊರತು ನಿಮ್ಮನ್ನು ಯಾರೂ ಬೀಳಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ನಿಜಕ್ಕೂ ವೀಡಿಯೋದಲ್ಲಿರುವ ದೃಶ್ಯ ಹಾಗೂ ಶೀರ್ಷಿಕೆಯಲ್ಲಿ ಬರೆದಿರುವ ಸಾಲುಗಳು ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು ಒಂದು ರೀತಿಯಲ್ಲಿ ಸ್ಪೂರ್ತಿಯನ್ನು ಈ ವೀಡಿಯೋ ನೀಡುತ್ತದೆ.

ವೀಡಿಯೋದಲ್ಲಿ ಒಂದು ಭಾರೀ ಗಾತ್ರದ ಮೊಸಳೆಯು ಆಮೆಯೊಂದನ್ನು ತನ್ನ ಆಹಾರವನ್ನಾಗಿ ತಿಂದು ಕಬಳಿಸುವ ಪ್ರಯತ್ನ ಮಾಡಿದೆ. ಇಡೀ ಆಮೆಯನ್ನು ನುಂಗಲು ಮೊಸಳೆ ತನ್ನ ಬಾಯಿಯನ್ನು ಅಗಲವಾಗಿ ತೆರೆದಿದ್ದು, ನುಂಗುವ ಪ್ರಯತ್ನ ಮಾಡಿದೆಯಾದರೂ ಅದು ಸಾಧ್ಯವಾಗಿಲ್ಲ. ಅಲ್ಲದೇ ಆಮೆಯ ದೇಹದ ಮೇಲೆ ಅದಕ್ಕೆ ಕವಚದಂತೆ ರಕ್ಷಣೆ ನೀಡುವ ಚಿಪ್ಪನ್ನು ಕುಡಿಯಲು ಮೊಸಳೆ ಪ್ರಯತ್ನ ಮಾಡಿದರೂ ವಿಫಲವಾಗಿದೆ. ಒಮ್ಮೆ ಪ್ರಯತ್ನ ಮಾಡಿ ಮೊಸಳೆ ಬಾಯಿಂದ ಆಮೆ ಹೊರ ಬಂದಿದೆ. ಆದರೂ ಬಿಡದ ಮೊಸಳೆ ಎರಡನೇ ಪ್ರಯತ್ನ ಕೂಡಾ ಮಾಡಿದರೂ ಅಲ್ಲೂ ವಿಫಲತೆ ಎದುರಾಗಿದೆ.

ಎರಡನೇ ಬಾರಿ ಮೊಸಳೆ ಬಾಯಿಂದ ಹೊರ ಬಂದ ಆಮೆ ಕಾಲಿಗೆ ಗಾಯವಾದ ಕಾರಣ ಎಗರುತ್ತಾ ಕಷ್ಟ ಪಟ್ಟು ಅಲ್ಲಿಂದ ಹೊರಟು ಹೋಗಿದೆ. ಸೆಪ್ಟೆಂಬರ್‌15 ರಂದು ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವೀಡಿಯೋ ಈಗಾಗಲೇ 56 ಸಾವಿರ ದಾಟಿದ ವೀಕ್ಷಣೆಗಳನ್ನು, 2 ಸಾವಿರ ದಾಟಿದ ಲೈಕ್ಸ್ ಗಳನ್ನು ಪಡೆದಿದೆ. ವೀಡಿಯೋ ನೋಡಿದವರು ಕೂಡಾ ವೈವಿದ್ಯಮಯವಾದ ಕಾಮೆಂಟ್ ಗಳನ್ನು ನೀಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಕಾಮೆಡಿ ಮಾಡುತ್ತಾ ಬಹುಶಃ ಮೊಸಳೆ ವೀಕೋ ಪೇಸ್ಟ್ ಬಳಸಿಲ್ಲ. ಅದರಿಂದ ಹಲ್ಲು ಉಜ್ಜಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಮೊಸಳೆಯ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ವಿಡಿಯೋ ನೋಡಿ….

ಕೆಲವರು ಆಮೆಗೆ ಕಡೆಗೆ ವಿಜಯ ಸಿಗುವುದು ಎಂದರೆ ಇನ್ನೂ ಕೆಲವರು ಪಾಪ ಮೊಸಳೆ ಎಂದಿದ್ದಾರೆ. ಮತ್ತೆ ಕೆಲವರು ಆಮೆ ಮೊಸಳೆಯ ಬಾಯೊಳಗೆ ಏನೋ ಮಾಡಿದಂತೆ ಇದೆ ಎಂದಿದ್ದಾರೆ. ಕೆಲವರು ಮೊಸಳೆಯ ದವಡೆಗಳು ಗಟ್ಟಿ ಆದರೆ ಆಮೆಯ ಚಿಪ್ಪು ಅದಕ್ಕಿಂತ ಕೂಡಾ ಗಟ್ಟಿ ಎಂದು ಹೇಳಿದ್ದಾರೆ. ಕೆಲವರು ಎಲ್ಲಿ ಈ ವೀಡಿಯೋ ಮಾಡಿದ್ದು ಎಂದರೆ ಅದಕ್ಕೆ ಒಬ್ಬರು ಉತ್ತರಿಸುತ್ತಾ ಕ್ಯಾಮರಾದಲ್ಲಿ,ಸುಮ್ಮನೆ ವೀಡಿಯೋ ನೋಡಿ, ತತ್ವಶಾಸ್ತ್ರ ಕೇಳಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.