ಮೊಹಮ್ಮದ್ ಶಮಿ 3 ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದರು, ಅದರ ಹಿಂದಿನ ಕಾರಣ ಬಹಿರಂಗವಾಯಿತು!!
ಭಾರತದ ಅತೀ ವೇಗದ ಬೌಲರ್ ಎಂದೇ ಹೆಸರು ಪಡೆದುಕೊಂಡ ಮೊಹಮ್ಮದ್ ಶಮಿಯವರು ತಾವು ಮೂರು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು, ಅದರ ಹಿಂದಿರುವ ಕಾರಣವನ್ನು ಸ್ವತಃ ಬಹಿರಂಗಪಡಿಸಿದ್ದಾರೆ. ಭಾರತೀಯ ಸಲಾಮಿ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರೊಂದಿಗೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮೊಹಮ್ಮದ್ಶಮಿ ಅವರು ತಮ್ಮ ಜೀವನದ ಎಲ್ಲಕ್ಕಿಂತ ಕೆಟ್ಟ ಸಮಯದ ಕುರಿತು ತಿಳಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ , 2015 ರ ವಿಶ್ವಕಪ್ ನಲ್ಲಿ ಆದ ಗಾಯದ ನಂತರ ಅವರು ಸುಮಾರು 18 ತಿಂಗಳಿನ ನಂತರ ಅವರು ಮತ್ತೆ ಕ್ರಿಕೆಟ್ನಲ್ಲಿ ವಾಪಸ್ಸು ಬಂದರು ಅಂದರೆ ಅವರು ಗಾಯಗೊಂಡು ಫಿಟ್ನೆಸ್ ಅಗಲು ಸುಮಾರು 18 ತಿಂಗಳುಗಳು ಬೇಕಾದವು. ಅಲ್ಲದೆ ತದನಂತರ ಕ್ರಿಕೆಟ್ ಆಡಲು ಪ್ರಾರಂಭ ಮಾಡಿದಾಗ ಮತ್ತೆ ಕೆಲವೊಂದು ನೈಜ ಜೀವನದ ಸಮಸ್ಯೆಗಳಿಗೆ ತುತ್ತಾಗಬೇಕಾಯಿತು. 2018 ರಲ್ಲಿ ಶಮಿ ಯವರ ಜೇವನದಲ್ಲಿ ತುಂಬಾ ಏರು ಪೇರು ಸಂಭವಿಸಿದವಂತೆ.

ಅವರ ಪತ್ನಿ ಹಸೀನಾ ಜಂಹಾ ಅವರು ಶಮಿ ಅವರ ಮೇಲೆ ಮನೆಯಲ್ಲಿಯ ಹಿಂಸೆ ಯ ಆರೋಪ ಮಾಡಿದ್ದರು. ಆ ಸಮಯದಲ್ಲಿ ಇವರ ಜೀವನದಲ್ಲಿ ದೊಡ್ಡ ಸಂಕಟವೇ ಬಂದೊದಗಿತ್ತು. ತದನಂತರ ಶಮಿ ಅವರು ಅಂಥ ಕೆಟ್ಟ ಪರಸ್ಥಿತಿಗಳನ್ನು ಅಂಜದೆ ದೂರು ಮಾಡಿದರು. ಅಲ್ಲದೆ ಮತ್ತೆ ಅವರು ಹೇಳಿದ್ದು ಏನೆಂದರೆ, ತಮ್ಮ ಕುಟುಂಬದವರ ಸಹಾಯದಿಂದ ಇಂಥ ಗಂಭೀರ ಪರಸ್ಥಿತಿಗಳನ್ನು ಹೋಗಲಾಡಿಸಲು ಸಹಾಯವಾಯಿತು.
2015 ರ ವಿಶ್ವಕಪ್ನಲ್ಲಿ ಆದ ಗಾಯದ ನಂತರ ಅದರಿಂದ ಹೊರಗೆ ಬರಲು ಸುಮಾರು 18 ತಿಂಗಳುಗವ ವರೆಗೆ ಸಮಯ ತಗೆದುಕೊಂಡರು. ತದನಂತರ ಕ್ರಿಕೆಟ್ ಆಟಕ್ಕೆ ಪ್ರಾರಂಭ ಮಾಡಿದರು ಆ ಸಮಯದಲ್ಲಿ ವಯಕ್ತಿಕ ತುಂಬಾ ಸಮಸ್ಯೆಗಳು ಎದುರಾದಾಗ ಅದನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇದ್ದಾಗ 3 ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರಂತೆ ದೈವ ಇಚ್ಛೆಯಂತೆ 3 ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಾಗ ಅವರ ಮನೆಯವರೇ ಅವರನ್ನು ಉಳಿಸಿದರಂತೆ. ಅಲ್ಲದೆ ಆ ವೇಳೆಗೆ ಶಮಿಯವರ ಮಾನಸಿಕ ಸ್ಥಿತಿ ಸಹ ತುಂಬಾ ಹಡಗೆಟ್ಟು ಅವರು ತಮ್ಮ ಮಾನಸಿಕ ಕಂಟ್ರೋಲ್ ಕಳೆದುಕೊಂಡಿದ್ದರಂತೆ, ಆದುದರಿಂದ ಶಮಿಯವರ ಆ ಪರಿಸ್ಥಿತಿಯಲ್ಲಿ ಅವರ ಮನೆಯವರು 24 × 7 ದಿನಗಳಂತೆ ಅವರ ಜೊತೆಗೆ ಸದಾ ಇರುತ್ತಿದ್ದರು ಆದುದರಿಂದಲೇ ಅವರು ತಮ್ಮ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಯಲ್ಲಿ ಬರಲು ಸಹಾಯ ವಾಯಿತು. ಶಮಿ ಅವರ ಹೇಳಿದ ಪ್ರಕಾರ ಮನುಷ್ಯನಿಗೆ ಯಾವುದೆ ಸಮಸ್ಯೆ ಎದುರಾಗಲಿ ಆ ಸಂದರ್ಭದಲ್ಲಿ ಕುಟುಂಬದವರು ತಮ್ಮ ಜೊತೆಗೆ ಇದ್ದರೆ ಎಲ್ಲ ಸಮಸ್ಯೆ ಮಾಯವಾಗುವವು ಎಂಬುದು ಶಮಿಯವರ ಅಭಿಪ್ರಾಯವಾಗಿದೆ.