ಮೋಜಿಗಾಗಿ ಬೆಕ್ಕಿನ ಮುಂದೆ ಕನ್ನಡಿಯನ್ನಿಟ್ಟ ಮಹಿಳೆ; ವಿಚಿತ್ರ ರಿಯಾಕ್ಷನ್ ಕೊಟ್ಟ ಬೆಕ್ಕು! ಬೆಕ್ಕಿನ ಮಾಲೀಕನಿಗೆ ಉಗಿದ ನೆಟ್ಟಿಗರು! Viral Video
ಸಾಕು ಪ್ರಾಣಿಗಳ ವರ್ತನೆ ಕೆಲವು ಸಲ ಬಹಳ ವಿಚಿತ್ರವಾಗಿರುತ್ತದೆ. ಅವುಗಳ ಅಂತಹ ವರ್ತನೆಯನ್ನು ನಾವು ಎಂದೂ ನೋಡಿರುವುದಿಲ್ಲ ಹಾಗೂ ಅವುಗಳು ಹಾಗೆ ವರ್ತಿಸಿದಾಗ ಒಂದು ಕ್ಷಣ ನಮಗೆ ಕೂಡಾ ಇದೇನಿದು? ಎಂದು ಅನಿಸುವುದು ಕೂಡಾ ಸಹಜ. ಪ್ರಾಣಿಗಳು ಸಹಜವಾಗಿಯೇ ಮನುಷ್ಯರಷ್ಟು ಬುದ್ಧಿವಂತಿಕೆಯನ್ನು ಹೊಂದಿಲ್ಲ. ಮನುಷ್ಯರಾದರೆ ಅವರ ಮೆದುಳು ಬೇರೆಲ್ಲ ಜೀವಿಗಳಿಗಿಂತ ಹೆಚ್ಚು ವಿಕಾಸವಾಗಿರುವ ಕಾರಣದಿಂದಲೇ ಇತರೆ ಎಲ್ಲಾ ಪ್ರಾಣಿಗಳಿಗಿಂತ ಕೂಡಾ ಬುದ್ಧಿವಂತಿಕೆಯಲ್ಲಿ ಮುಂದೆ ಇದ್ದಾನೆ ಹಾಗೂ ಪ್ರಾಣಿಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಕೂಡಾ ಪಡೆದುಕೊಂಡಿದ್ದಾನೆ.
ನಮಗೆ ಕೆಲವು ವಿಷಯಗಳು ಸಾಮಾನ್ಯ ಎನಿಸುವುದು ಪ್ರಾಣಿಗಳಿಗೆ ವಿಚಿತ್ರ ಎನಿಸುತ್ತದೆ. ಉದಾಹರಣೆಗೆ ಕನ್ನಡಿಯ ಮುಂದೆ ನಿಂತಾಗ ನಾವು ನಮ್ಮ ಪ್ರತಿಬಿಂಬವನ್ನು ನೋಡುತ್ತೇವೆ. ಅದು ನಮ್ಮದೇ ಪ್ರತಿಬಿಂಬ ಎಂದು ತಿಳಿದಿರುವುದರಿಂದ ಅದರಲ್ಲಿ ನಮಗೇನೂ ವಿಶೇಷ ಅಥವಾ ವಿಚಿತ್ರ ಎನಿಸುವುದಿಲ್ಲ. ಅದೇ ಎಂದೂ ಕನ್ನಡಿಯನ್ನೇ ನೋಡದ ವ್ಯಕ್ತಿಯನ್ನು ಕರೆದು ತಂದು ಕನ್ನಡಿಯ ಮುಂದೆ ನಿಲ್ಲಿಸಿದರೆ ಆತ ಕೂಡಾ ಮೊದಲ ಬಾರಿಗೆ ತನ್ನ ಪ್ರತಿಬಿಂಬ ನೋಡಿದರೆ ದಿಗ್ಭ್ರಾಂತನಾಗಬಹುದು ಅಥವಾ ಒಂದು ವಿಚಿತ್ರವಾದ ವರ್ತನೆಯನ್ನು ಕೂಡಾ ತೋರುವ ಸಾಧ್ಯತೆಗಳಿರುತ್ತವೆ.
ಅದೇ ರೀತಿ ಪ್ರಾಣಿಗಳು ಕೂಡಾ ಕನ್ನಡಿ ಮುಂದೆ ಬಂದಾಗ ಅವುಗಳಿಗೆ ಕನ್ನಡಿಯೊಳಗೆ ಕಾಣುವುದು ತಮ್ಮದೇ ಪ್ರತಿಬಿಂಬ ಎಂದು ಗುರುತಿಸುವಷ್ಟು ಜ್ಞಾನ ಇರುವುದಿಲ್ಲ. ಅವು ಪ್ರತಿಬಿಂಬ ನೋಡಿದರೆ ಎಲ್ಲೋ ಬೇರಾವುದೋ ಪ್ರಾಣಿ ಬಂದಿದೆ ಎಂದು ಗೊಂದಲಕ್ಕೆ ಈಡಾಗುತ್ತವೆ. ಇಂತಹುದೇ ಒಂದು ದೃಶ್ಯ ಸೆರೆಯಾಗಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಕೋಣೆಯೊಂದರಲ್ಲಿ ಆರಾಮವಾಗಿ ಕುಳಿತಿದ್ದ ಬೆಕ್ಕೊಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದೆ. ನೋಡಿದ ಕೂಡಲೇ ಅದು, ಮತ್ತೊಂದು ಪ್ರಾಣಿ ಅಲ್ಲಿದೆ ಎಂದು ಭ್ರಮಿಸಿ ಏಕಾಏಕೀ ಆಕ್ರ ಮಣ ಮಾಡಲು ಮುಂದಾಗಿದೆ.
ಬೆಕ್ಕು ಕನ್ನಡಿಯ ಮೇಲೆ ಧಾ” ಳಿ ಇಟ್ಟಿದೆ. ಕನ್ನಡಿ ಸ್ವಲ್ಪ ಕದಲಿದಾಗ ಶಾಂತವಾಗುವ ವೇಳೆಗೆ ಕೋಣೆಯಲ್ಲಿ ಒಬ್ಬ ಯುವತಿಯು ಕನ್ನಡಿಯನ್ನು ಮತ್ತೆ ಬೆಕ್ಕಿನ ಕಡೆಗೆ ತಿರುಗಿಸಿದಾಗ ಮತ್ತೊಮ್ಮೆ ಪ್ರತಿಬಿಂಬ ನೋಡಿದ ಬೆಕ್ಕು ಅರಚಾಡಿ ಮತ್ತೆ ಆಕ್ರ”ಮಣ ಮಾಡಲು ಮುಂದಾಗಿದೆ. ಟ್ವಿಟರ್ ನಲ್ಲಿ ಶೇರ್ ಆದ ಈ ವೀಡಿಯೋವನ್ನು ಅಪ್ಲೋಡ್ ಆದ ಎರಡೇ ದಿನಗಳಲ್ಲಿ 4.25 ಲಕ್ಷ ವೀಕ್ಷಣೆಯನ್ನು ಪಡೆದಿದೆ. ಹದಿನಾರು ಸಾವಿರಕ್ಕೂ ಮೀರಿದ ಲೈಕ್ ಗಳು ಬಂದಿದ್ದು, 6.7 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗುವ ಮೂಲಕ ವೈರಲ್ ಆಗುತ್ತಾ ಸಾಗಿದೆ. ವೀಡಿಯೋ ನೋಡಿದವರ ಪ್ರತಿಕ್ರಿಯೆಗಳು ಕೂಡಾ ಬಹಳ ಜೋರಾಗಿದೆ.
ವಿಡಿಯೋ ನೋಡಿ…
— Nature & Animals 🌴 (@AnimalsWorId) September 25, 2020
ಒಬ್ಬ ಟ್ವಿಟರ್ ಬಳಕೆದಾರರು ಆ ಬೆಕ್ಕಿನ ಮಾಲಿಕರಿಗೆ ಅದು ಕನ್ನಡಿ ನೋಡಿದರೆ ಹಾಗೆ ಆಡುವುದು ತಿಳಿದಿದ್ದರೂ, ಕನ್ನಡಿಯನ್ನು ಅದರ ಕಡೆ ತೋರಿಸಿ ವೀಡಿಯೋ ಮಾಡಿದ್ದಾರೆಂದು ಟೀಕೆ ಮಾಡಿದ್ದಾರೆ. ಇನ್ನೂ ಒಬ್ಬರು ಬೇರೆಯವರ ಕುರಿತಾಗಿ ಜಡ್ಜ್ ಮಾಡುವ ಬದಲು ಮೊದಲು ಅವರಿಗೆ ಅವರ ಮುಖವನ್ನು ತೋರಿಸಬೇಕು ಎಂದು ಸಜೆಷನ್ ನೀಡಿದ್ದಾರೆ. ಬೆಕ್ಕಿನ ಈ ಆಟ ನೋಡಲು ಚೆನ್ನಾಗಿದೆ ಎನಿಸಿದರೂ ಕೂಡಾ ಒಂದು ಸಲ ಪಾಪ ಬೆಕ್ಕು ಅನಿಸುವುದು ಕೂಡಾ ನಿಜ.