ಮೋಟಾರ್ ಕಳ್ಳತನದಿಂದ ಬೇಸತ್ತು ನದಿಯ ದಡದಲ್ಲೇ CCTV ಅಳವಡಿಸಿದ ರೈತರು; ನಂತರ CCTV ದೃಶ್ಯ ನೋಡಿ ಶಾಕ್!

ಸಿಸಿಟಿವಿ ಕ್ಯಾಮೆರಾ ದಿಂದ ಅನೇಕ ಲಾಭಗಳು ಆಗುತ್ತಿವೆ. ಈ ಸೌಲಭ್ಯದಿಂದ ಆಗುವ ಕಳ್ಳತನಗಳನ್ನು ತಪ್ಪಿಸಬಹುದು. ಕಳ್ಳರು ಸಹಿತ ಸಿಸಿಟಿವಿ ಇದ್ದರೆ ಕಳ್ಳತನ ಮಾಡದೆ ಅಲ್ಲಿಂದ ಕಾಲ್ಕಿತ್ತುತ್ತಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇವುಗಳ ಉಪಯೋಗವು ಇನ್ನು ಅಷ್ಟೊಂದು ಹೆಚ್ಚಾಗಿ ಕಂಡುಬರುವುದಿಲ್ಲ.

ಆದರೆ ರೈತ ಮನಸ್ಸು ಮಾಡಿದರೆ ಏನು ಮಾಡುವುದಿಲ್ಲ? ನದಿಯ ತೀರದಲ್ಲಿ ನೀರಿಗಾಗಿ ಬಳಸುವ ಮೋಟಾರ್ ಪಂಪಗಳ ಮತ್ತು ಕೇಬಲ್ ವಾಯರ್ ಗಳ ಸತತವಾದ ಕಳ್ಳತನಗಳಿಂದ ಬೇಸತ್ತ ರೈತರು ನೇರ ನದಿಯ ದಡದಲ್ಲಿ ಸಿಸಿಟಿವಿಯನ್ನು ಅಳವಡಿಸಿದರು. ಇದನ್ನು ಅಳವಡಿಸಿದ ಕೆಲವೇ ದಿನಗಳಲ್ಲಿ ಕಳ್ಳರು ಬಲೆಗೆ ಬಿದ್ದರು. ವಿಸ್ತೃತ ವರದಿ ನೋಡಿ…

ವರದಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರ್ ತಾಲೂಕಿನಲ್ಲಿಯದಿದೆ. ಇಲ್ಲಿಯ ಶಿರಸಗಾವ್ ಊರಿನ ಹತ್ತಿರ ಹರಿದ ನದಿಯ ದಡದಲ್ಲಿಯ ಮೋಟಾರ್ ಪಂಪಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದವು. ಇದಕ್ಕೆ ಬೇಸತ್ತ ಊರಿನ ರೈತರು ನದಿಯ ದಡದಲ್ಲಿಯೇ ಸಿಸಿಟಿವಿಯನ್ನು ಕೂಡಿಸುವ ಪ್ಲಾನ್ ಮಾಡಿದರು. ಮಾಡಿದ ಈ ಪ್ಲಾನ್ ಸರಿಯಾಗಿ ವರ್ಕೌಟ್ ಸಹಿತ ಆಯ್ತು. ಸಿಸಿಟಿವಿ ಸಹಾಯದಿಂದ ಕೆಲವೇ ದಿನಗಳಲ್ಲಿ ಇಬ್ಬರು ಕಳ್ಳರನ್ನು ಹಿಡಿಯುವಲ್ಲಿ ಊರಿನ ರೈತರು ಯಶಸ್ವಿಯಾದರು. ಇಬ್ಬರು ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದು ಸದ್ಯಕ್ಕೆ ಪೊಲೀಸರಿಗೆ ಒಪ್ಪಿಸಲಾಗಿದೆ. ಕಳ್ಳರು ಹೇಳುವ ಪ್ರಕಾರ ತಾವೇ ಅಲ್ಲಿಯ ಮೋಟರ್ ಪಂಪ್, ಕೇಬಲ್ ಹಾಗೂ ಪೈಪುಗಳನ್ನು ಕಳ್ಳತನ ಮಾಡುತ್ತಿದ್ದರಂತೆ. ಇಬ್ಬರು ಕಳ್ಳರಾದ ಗಣೇಶ್ ಕದಮ್ (28) ಮತ್ತು ಸೂರ್ಯಕಾಂತ ಮಾನೆ(23) ಅಲ್ಲಿಯೇ ನೆರೆಯ ಊರಿನವರಾಗಿದ್ದಾರೆ. ಮನೋಜ್ ಮತ್ತು ಬೈರು ಹೆಸರಿನ ಇನ್ನಿಬ್ಬರು ಕಳ್ಳರು ಪರಾರಿಯಾಗಿದ್ದಾರೆ.

ಪೊಲೀಸರು ನೀಡಿದ ವರದಿಯ ಪ್ರಕಾರ ಈ ಪರಿಸರದಲ್ಲಿ ಬಹಳ ದಿನಗಳಿಂದ ನದಿಯ ದಡದಲ್ಲಿ ಜೋಡಿಸಿಟ್ಟ ಮೋಟಾರ್ ಪಂಪ್, ಕೇಬಲ್ ಹಾಗೂ ಪೈಪುಗಳ ಕಳ್ಳತನ ಆಗುತ್ತಲೇ ಇದ್ದವು. ಆಗಸ್ಟ್ 8 ರಂದು ಬಾಳಾಸಾಹೇಬ್ ವಿಧಾತೆ ಹೆಸರಿನ ರೈತನೊಬ್ಬ ನದಿಯ ದಡದಲ್ಲಿ 12 HP ಮೋಟಾರ್ ಪಂಪ್ ಒಂದನ್ನು ಕೂಡಿಸಿದ್ದರು. ಅದರ ಮುಖಾಂತರ ತಮ್ಮ ತೋಟಕ್ಕೆ ನೀರನ್ನು ಕೊಂಡೊಯ್ದಿದ್ದರು. ಯಾವಾಗ ಕರೆಂಟ್ ಹೋಯಿತು ಆಗ ಮೋಟಾರ್ ನಿಂದ ನೀರು ಬರುವುದು ನಿಂತಿತ್ತು. ಮುಂದೆ ಮತ್ತೆ ವಾಪಸ್ ಕರೆಂಟ್ ಬಂದಾಗ ನೀರು ಮಾತ್ರ ಬರಲೇ ಇಲ್ಲ. ಕಾರಣವನ್ನು ತಿಳಿಯಲು ನದಿಗೆ ಹೋದಾಗ ಅಲ್ಲಿ ಅವರು ತಂದ ಹೊಸ ಮೋಟಾರ್ ಇರಲಿಲ್ಲ. ಇಂಥ ಸಮಸ್ಯೆಗಳು ಮೇಲಿಂದ ಮೇಲೆ ಕಂಡುಬಂದ ಕಾರಣ ರೈತರೆಲ್ಲ ಒಟ್ಟುಗೂಡಿ ನದಿಯ ದಡದಲ್ಲಿ ಸಿಸಿಟಿವಿ ಕೂಡಿಸಿದರು. ಈ ಪ್ಲಾನ್ ಯಶಸ್ವಿಯಾಯಿತು. ಕಳ್ಳರು ಸಹಿತ ಸಿಕ್ಕಿಬಿದ್ದರು. ಇದರಿಂದ ಹಿಂದೆ ಆದ ಕಳ್ಳತನಗಳ ಒಂದೊಂದೇ ಸುಳಿವುಗಳನ್ನು ಬಿಚ್ಚುವ ತಯಾರಿಯಲ್ಲಿ ಪೊಲೀಸರು ಇದ್ದಾರೆ.

ಈ ಪ್ರಕರಣದಲ್ಲಿ ಪ್ರವೀಣ್ ಖಾನಾಪುರ ಹೆಸರಿನ ಪೊಲೀಸ್ ನಿರೀಕ್ಷಕರು ಮುಂದಿನ ತನಿಖೆಯನ್ನು ಮಾಡುತ್ತಿದ್ದಾರೆ.

ಮೊದಲೇ ಅನೇಕ ಸಮಸ್ಯೆಗಳನ್ನು ಎದುರಿಸಿ ಸಾಕಷ್ಟು ಹಣವನ್ನು ಖರ್ಚು ಮಾಡಿ ನಮ್ಮ ರೈತರು ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಹಾಗೆಯೇ ನದಿಯ ದಡಗಳಲ್ಲಿ ಮೋಟರ್ ಪಂಪ್ ಅನ್ನು ಕೊಡಿಸಿ ಅನೇಕ ಕಿಲೋಮೀಟರುಗಳ ವರೆಗೆ ನೆಲದಲ್ಲಿಯೇ ಪೈಪ್ಲೈನ್ ಮಾಡಿಕೊಂಡು ಬಂದಿರುತ್ತಾರೆ. ಇಷ್ಟೆಲ್ಲಾ ಮಾಡಿದ ನಂತರ ತೋಟದಲ್ಲಿ ನೀರು ಬಂದು ಬೀಳುತ್ತೆ ಎಂಬ ಆಸೆಯಲ್ಲಿ ಇರುವಾಗ ಇಂಥ ಕಳ್ಳರದೊಂದು ಕಾಟ. ಆದರೂ ರೈತರು ಸರಿಯಾಗಿ ಪ್ಲಾನ್ ಮಾಡಿ ಸಿಸಿಟಿವಿ ಕೂಡಿಸಿ ಕಳ್ಳರನ್ನು ಹಿಡಿದದ್ದು ನೋಡಿದರೆ ನಮ್ಮ ರೈತರು ಮನಸ್ಸು ಮಾಡಿದರೆ ಏನನ್ನು ಸಹಿತ ಸಾಧಿಸಬಲ್ಲರು ಇದು ನಿಜ.