ಮೋಟಾರ್ ಸೈಕಲ್ ಅಥವಾ ವಾಹನಗಳ ಹಿಂದೆ ನಾಯಿಗಳು ಏಕೆ ಬೆನ್ನು ಹತ್ತುತ್ತವೆ ಗೊತ್ತಾ? ತಿಳಿದುಕೊಳ್ಳಲು ಫೋಟೋ ಮೇಲೆ ಕ್ಲಿಕ್ ಮಾಡಿ…!
ನಮಗೆಲ್ಲ ಒಂದು ಸಲವಾದರೂ ನಾವು ಬೈಕ್ ಓಡಿಸುವಾಗ ಬೈಕ್ ಹಿಂದೆ ನಾಯಿ ಬೆನ್ನು ಹತ್ತಿದ ಅನುಭವ ಬಂದಿರುತ್ತೆ. ಅಷ್ಟಕ್ಕೂ ನಾಯಿ ಬೈಕ್ ಓಡುವಾಗ ಅದರ ಹಿಂದೆ ಯಾಕೆ ಬೆನ್ನು ಹತ್ತುತ್ತವೆ ಎಂಬ ಸಂಗತಿ ಹಲವಾರು ಜನರಿಗೆ ತಿಳಿಯದ ಸಂಗತಿ. ಅದಕ್ಕೆ ಪುರಾತನ ಕಾರಣವೇ ಇದೆ. ನಾಯಿ ಇಂದೊಂದು ಅತ್ಯಂತ ವಿಶ್ವಾಸನಿಯ ಹಾಗೂ ಅತ್ಯಂತ ಚತುರ ಪ್ರಾಣಿಯಾಗಿದೆ. ನಮ್ಮ ಇತಿಹಾಸದಲ್ಲಿ ಇಣುಕಿ ನೋಡಿದರೆ ಮಾತ್ರ ಅದರ ಹಿಂದಿನ ರಹಸ್ಯ ತಿಳಿದು ಬರುವದು. ಅಲ್ಲದೆ ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ನಾಯಿ ಯನ್ನು ಸಾಕಿದ್ದು ಕಂಡು ಬರುವದು.

ಕೆಲವೊಬ್ಬರು ತಮ್ಮ ಹವ್ಯಾಸಗೋಸ್ಕರ ನಾಯಿಯನ್ನು ಸಾಕಿದರೆ ಇನ್ನು ಕೆಲವರು ತಮ್ಮ ಮನೆಯ ಸಂರಕ್ಷಣೆಯ ಸಲುವಾಗಿ ನಾಯಿ ಸಾಕುತ್ತಾರೆ. ಅಲ್ಲದೆ ನಮ್ಮ ಸೈನ್ಯದಲ್ಲಿಯೂ ಸಹ ಶ್ವಾನ ಕ್ಕೆ ತುಂಬಾ ಮೌಲ್ಯದ ಸ್ಥಾನವಿದೆ. ಒಂದೇ ನಿಟ್ಟಿನಲ್ಲಿ ಹೇಳಬೇಕೆಂದರೆ ಈ ಪ್ರಾಣಿ ಪ್ರತಿಯೊಂದು ಸ್ಥಳದಲ್ಲಿ ಸಹಜವಾಗಿ ಕಂಡು ಬರುವಂತ ಪ್ರಾಣಿಯಾಗಿದೆ. ಕೆಲವೊಬ್ಬರಿಗೆ ನಾಯಿ ಕಂಡರೆ ತುಂಬಾ ಪ್ರೀತಿ ಇನ್ನೂ ಕೆಲವರಿಗೆ ನಾಯಿ ಕಂಡರೆ ತುಂಬಾ ದ್ವೇಷ. ವಿಶೇಷವಾಗಿ ರಸ್ತೆಯಲ್ಲಿ ತಿರುಗಾಡುವ ನಾಯಿಗಳು ಕಂಡರೆ ತುಂಬಾ ಹೆದರುವರು. ಅಲ್ಲದೆ ಅವುಗಳ್ಳಿಯ ಕೆಲವೊಂದು ನಾಯಿಗಳು ಸತತವಾಗಿ ಸೈಕಲ್, ಬೈಕ್ , ಕಾರ ಇವುಗಳ ಹಿಂದೆ ಬೆನ್ನಟ್ಟುತ್ತವೆ.

ಬೈಕ್ ಅಥವಾ ಕಾರುಗಳ ಹಿಂದೆ ಬೆನ್ನು ಹತ್ತಲು ಕಾರಣವೇನೆಂದರೆ, ನಾಯಿ ಇದೊಂದು ವಿಶ್ವಾಸಕ್ಕೆ ಮೂಲ ಪ್ರಾಣಿ. ನಾಯಿ ತಾನು ಬೆಳೆದು ಬಂದ ಸ್ಥಳಕ್ಕೆ ತುಂಬಾ ಹಚ್ಚಿಕೊಳ್ಳುತ್ತವೆ. ಅಲ್ಲದೆ ತನ್ನ ಸುತ್ತಮುತ್ತಲಿನ ಪರಿಸರದಲ್ಲಿಯ ಪ್ರತಿಯೊಂದು ವಸ್ತು ಅಥವಾ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುತ್ತದೆ. ತಾನು ವಾಸಿಸುವ ಜಾಗಕ್ಕೆ ಯಾವುದೇ ಹೊಸ ವ್ಯಕ್ತಿ ಬಂದರೆ ಅವರಿಗೆ ಬೆನ್ನು ಹತ್ತಿ ಕಡೆಯಲು ಹೋಗುತ್ತದೆ. ತನ್ನ ಸ್ಥಳ ಸಂರಕ್ಷಣೆ ಮಾಡುವ ಸಲುವಾಗಿ ಯಾವುದೇ ಬೈಕ್ ಅಥವಾ ಕಾರು ಹೋದಾಗ ಅದರ ಹಿಂದೆ ಬೆನ್ನು ಹತ್ತಿ ಕಡೆಯಲು ಹೋಗುತ್ತದೆ. ಅಷ್ಟೇ ಅಲ್ಲದೆ ತಾನು ವಾಸಿಸುವ ವ್ಯಾಪ್ತಿಯ ಪ್ರದೇಶದ ವರೆಗೆ ಮಾತ್ರ ಅದು ಬೆನ್ನಟ್ಟುತ್ತದೆ ತದನಂತರ ಅದು ಬಿಟ್ಟು ಬಿಡುತ್ತದೆ. ಈ ಕಾರಣದಿಂದಾಗಿ ನಾಯಿ ಕಾರು ಅಥವಾ ಮೋಟಾರ್ ಸೈಕಲ್ ಬೆನ್ನು ಹತ್ತುತ್ತವೇ.