ಮೋದಿ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ ₹ 2 ಹೂಡಿಕೆ ಮಾಡಿ, ವೃದ್ಧಾಪ್ಯದಲ್ಲಿ ಪಡೆಯಿರಿ ₹ 36 ಸಾವಿರ ಪೆನ್ಶನ್!
ಜೀವನದ ಸಂಧ್ಯಾಕಾಲದಲ್ಲಿ ಪಿಂಚಣಿಯು ಜೇಷ್ಠ ನಾಗರಿಕರಿಗೆ ಆರ್ಥಿಕವಾಗಿ ಮಹತ್ವದ ಊರುಗೋಲಾಗಿದೆ. ಇದೇ ಉದ್ದೇಶವನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರವು ಅನೇಕ ಪೆನ್ಷನ್ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿಯೇ ಒಂದು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ. ಈ ಯೋಜನೆಯಲ್ಲಿ ದಿನಕ್ಕೆ ನೀವು ಬರೀ 1 ರೂಪಾಯಿ 80 ಪೈಸೆ ಹೂಡಿಕೆ ಮಾಡಿದರೆ ವೃದ್ಧಾಪ್ಯದಲ್ಲಿ ಪಡೆಯಿರಿ ವರ್ಷಕ್ಕೆ 36 ಸಾವಿರ ರೂಪಾಯಿ.
ಸರಕಾರದ ಈ ಯೋಜನೆ ಅಸಂಘಟಿತ ಕ್ಷೇತ್ರದಲ್ಲಿಯ ಕಾರ್ಮಿಕರಿಗಾಗಿ ಇವೆ. ನಿಮ್ಮ ವಯಸ್ಸು 40 ವರ್ಷಗಳಿಗಿಂತ ಕಡಿಮೆ ಇದ್ದರೆ ಹಾಗೂ ವಾರ್ಷಿಕ ಉತ್ಪನ್ನ 15000 ರೂಪಾಯಿ ಗಳಿದ್ದರೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯು ನಿಮಗಾಗಿ ತುಂಬಾ ಲಾಭದಾಯಕವಾಗಿದೆ. ಈ ಯೋಜನೆಯ ಅಡಿಯಲ್ಲಿ ವೃದ್ಧಾಪ್ಯದಲ್ಲಿ ನಿಮಗೆ ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿಯ ಸ್ವರೂಪದಲ್ಲಿ ದೊರೆಯುವುದು.
ಕೇಂದ್ರ ಸರ್ಕಾರವು 2019 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಬರುವ 5 ವರ್ಷಗಳಲ್ಲಿ ಅಸಂಘಟಿತ ಕ್ಷೇತ್ರದಲ್ಲಿ 10 ಕೋಟಿ ಕಾರ್ಮಿಕರಿಗೆ ಈ ಲಾಭವನ್ನು ದೊರಕಿಸಿಕೊಡುವ ಉದ್ದೇಶ ಕೇಂದ್ರ ಸರಕಾರ ಹೊಂದಿದೆ.
ಈ ಯೋಜನೆಯು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಇದರಲ್ಲಿ ಹಣ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ವಯಸ್ಸಿನ 60 ದಾಟಿದ ನಂತರ ನಿಮಗೆ ತಿಂಗಳಿಗೆ 3 ಸಾವಿರ ರೂಪಾಯಿಗಳು ಸಿಗುತ್ತವೆ. ತಿಂಗಳಿಗೆ ನೀವು ಜಮೆ ಮಾಡಿದಷ್ಟು ಹಣ ಭವಿಷ್ಯದಲ್ಲಿ ನಿಮಗೆ ಅದೇ ಪೆನ್ಷನ್ ಸ್ವರೂಪದಲ್ಲಿ ದೊರೆಯುತ್ತದೆ.
ಈ ಯೋಜನೆಯ ಲಾಭವನ್ನು ಪಡೆಯುವ ಸಲುವಾಗಿ ಸರಕಾರ ಕೆಲವೊಂದು ಶರತ್ತುಗಳನ್ನು ಇಟ್ಟಿದೆ. ಈ ಶರತ್ತುಗಳ ಪ್ರಕಾರ ನಿಮ್ಮ ಮಾಸಿಕ ಉತ್ಪನ್ನ 15 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಇರಬಾರದು. ಜೊತೆಗೆ ವ್ಯಕ್ತಿಯು ಸಂಘಟಿತ ವಲಯದಲ್ಲಿಯ ಭವಿಷ್ಯ ನಿಧಿ, ರಾಷ್ಟ್ರೀಯ ನಿವೃತ್ತಿ ಯೋಜನೆ ಅಥವಾ ರಾಜ್ಯ ನೌಕರರ ವಿಮಾ ನಿಗಮದ ಉದ್ಯೋಗಿಗಳಾಗಿದ್ದರೆ ಪ್ರಧಾನಮಂತ್ರಿಯ ಈ ಶ್ರಮಯೋಗಿ ಮಾನ್-ಧನ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ.
ಯಾರಿಗಾಗಿ ಈ ಯೋಜನೆ?
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಲ್ಲಿ ಯಾವುದೇ ಭಾರತೀಯ ವ್ಯಕ್ತಿಗೆ ಹಣ ಹೂಡಿಕೆ ಮಾಡಲು ಬರುತ್ತದೆ. ಹೂಡಿಕೆ ಮಾಡುವ ವ್ಯಕ್ತಿಯ ವಯಸ್ಸು 18 ರಿಂದ 40 ರ ಒಳಗೆ ಇರಬೇಕು. ಉದಾಹರಣೆಗಾಗಿ ಹೇಳುವುದಾದರೆ ಚಮ್ಮಾರ, ಬಡಗಿ, ಟೈಲರ್, ರಿಕ್ಷಾ ಚಾಲಕರು ಮತ್ತು ಬಟ್ಟೆಗಳನ್ನು ಒಗೆಯುವವರು ಈ ರೀತಿಯ ಕಾರ್ಮಿಕರಿಗೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸದ್ಯಕ್ಕೆ ಅಸಂಘಟಿತ ಕ್ಷೇತ್ರಗಳಲ್ಲಿ ಸುಮಾರು 42 ಕೋಟಿ ಕಾರ್ಮಿಕರು ಇದ್ದಾರೆ.
ವಯಸ್ಸಿನ 18 ವರ್ಷಗಳಿಂದ ಹಿಡಿದು ತಿಂಗಳಿಗೆ 55 ರೂಪಾಯಿ, 29 ನೇ ವರ್ಷದಿಂದ ತಿಂಗಳಿಗೆ 100 ರೂಪಾಯಿ ಮತ್ತು 40 ವರ್ಷದ ವ್ಯಕ್ತಿಯು ತಿಂಗಳಿಗೆ 200 ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶವಿದೆ. ಒಂದು ವೇಳೆ ಪೆನ್ಷನ್ ದೊರೆಯುವ ಮುನ್ನವೇ ಸಂಬಂಧಿತ ವ್ಯಕ್ತಿಯ ಮೃತ್ಯು ಸಂಭವಿಸಿದರೆ 50% ಹಣವು ಸಂಬಂಧಿತ ವ್ಯಕ್ತಿಯ ಪತಿ ಅಥವಾ ಪತ್ನಿಗೆ ಸಿಗುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬೇಕಾಗುವ ಕಾಗದ ಪತ್ರಗಳು ಈ ಕೆಳಗಿನಂತಿವೆ….
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು ಆಧಾರ್ ಕಾರ್ಡ್, ಜನಧನ್ ಅಕೌಂಟ್ ಮತ್ತು ಮೊಬೈಲ್ ಕ್ರಮಾಂಕ ಈ ಮೂರು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಜೀವ ವಿಮಾ ನಿಗಮ (LIC) ಯ ಶಾಖೆ ರಾಜ್ಯ ಕಾರ್ಮಿಕರ ವಿಮಾ ನಿಗಮ (ESIC) ಅಥವಾ ಇಪಿಎಫ್ಒ ನಲ್ಲಿ ಹೋಗಿ ನೀವು ಈ ಯೋಜನೆಯ ಸಲುವಾಗಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.