ಯಾರಿಗೆ ಟೀಮ್ ನಿಂದ ಕೈ. ಬಿಟ್ಟರೋ ಬರೀ 48 ದಿನಗಳಲ್ಲಿ ಆತನೇ ವಿಲಿಯಮ್ಸ್ ನಿಂದ ಸೇಡು ತೀರಿಸಿಕೊಂಡ….

T-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ನ್ಯೂಜಿಲ್ಯಾಂಡ್ ತಂಡದ ಮೇಲೆ ಭರ್ಜರಿ ಜಯಗಳಿಸಿತು. T20 ವರ್ಲ್ಡ್ ಕಪ್ ಮೇಲೆ ಆಸ್ಟ್ರೇಲಿಯಾ ಮೊಟ್ಟಮೊದಲ ಬಾರಿಗೆ ತನ್ನ ಹೆಸರನ್ನು ಕೊರೈಸಿತು. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡವು ಏಕದಿನ ಪಂದ್ಯಗಳ ವರ್ಲ್ಡ್ ಕಪ್ ನಲ್ಲಿ ಐದು ಬಾರಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ತಂಡ ನೀಡಿದ 173 ರನ್ನುಗಳ ಗುರಿಯನ್ನು ಆಸ್ಟ್ರೇಲಿಯಾವು ಸಹಜವಾಗಿ ತಲುಪಿತು. ಆಸ್ಟ್ರೇಲಿಯಾ ತಂಡ ಎರಾನ್ ಫಿಂಚ್ ಅವರ ವಿಕೆಟ್ ಬೇಗ ಕಳೆದುಕೊಂಡ ನಂತರ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ನ್ಯೂಜಿಲೆಂಡ್ ಬಾಲಿಂಗ್ ಮೇಲೆ ಆಕ್ರಮಣ ಮಾಡಿದರು. ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 77 ರನ್ ಗಳನ್ನು ಬಾರಿಸಿ ಔಟಾಗದೆ ಉಳಿದರು. ಇತ್ತ ಡೇವಿಡ್ ವಾರ್ನರ್ ಸಹ 38 ಬಾಲ್ ಗಳಲ್ಲಿ 53 ರನ್ ಗಳನ್ನು ಬಾರಿಸಿದರು. ತಮ್ಮ ಆಟದಲ್ಲಿ ವಾರ್ನರ್ ನಾಲ್ಕು ಫೋರ್ ಮತ್ತು ಮೂರು ಸಿಕ್ಸ್ ಗಳನ್ನು ಬಾರಿಸಿದರು.

T20 ವರ್ಲ್ಡ್ ಕಪ್ ನ ಪ್ರಾರಂಭದಲ್ಲಿ ಡೇವಿಡ್ ವಾರ್ನರ್ ಅವರ ಫಾರ್ಮ್ ಆಸ್ಟ್ರೇಲಿಯಾಕ್ಕೆ ತುಂಬಾ ಆತಂಕ ತಂದಿತ್ತು. ಕಾರಣ ಐಪಿಎಲ್ ನಲ್ಲಿ ವಾರ್ನರ್ ರನ್ ಗಳಿಗಾಗಿ ಪರದಾಡುತ್ತಿದ್ದರು. ಅಷ್ಟೇ ಅಲ್ಲ ಕೊನೆಗೆ ಅವರಿಗೆ ತಂಡದಿಂದ ಕೈಬಿಡಲಾಯಿತು. ವಾರ್ನರ್ ಅವರ ಕಳಪೆ ಫಾರ್ಮ್ ನಿಂದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದಲೂ ದೂರ ಸರಿಸಲಾಯಿತು. ಆನಂತರ ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಯಿತು. ವಾರ್ನರ್ ಅವರ ಕಳಪೆ ಪ್ರದರ್ಶನದಿಂದಾಗಿ ಕೊನೆಗೆ ಕೇನ್ ವಿಲಿಯಮ್ಸನ್ ವಾರ್ನರ್ ಅವರನ್ನು ಹೈದರಾಬಾದ್ ತಂಡದಿಂದ ಕೈಬಿಟ್ಟರು. ಆದರೆ ಡೇವಿಡ್ ವಾರ್ನರ್ ಅವರು ಕೆಲವೇ ದಿನಗಳಲ್ಲಿ ಅದರ ಸೇಡನ್ನು ಕೇನ್ ವಿಲಿಯಮ್ಸನ್ ಅವರ ಕನಸನ್ನು ಭಗ್ನಗೊಳಿಸುತ್ತ ಈ ರೀತಿಯಾಗಿ ತೀರಿಸಿಕೊಂಡರು.

ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಹೈದ್ರಾಬಾದ್ ತಂಡದ ವತಿಯಿಂದ 25 ಸಪ್ಟೆಂಬರ್ 2021 ರಂದು ಕೊನೆಯ ಪಂದ್ಯವನ್ನು ಆಡಿದ್ದರು. ತದನಂತರ 27 ಸಪ್ಟೆಂಬರ್ ಗೆ ವಾರ್ನರ್ ಅವರನ್ನು ತಂಡದಿಂದ ಕೈ ಬಿಡಲಾಯಿತು. ಇಷ್ಟೆಲ್ಲಾ ನಡೆದಮೇಲೆ ವಾರ್ನರ್ ಹೈದ್ರಾಬಾದ್ ತಂಡದ ಡ್ರೆಸ್ಸಿಂಗ್ ರೂಮಿನಲ್ಲಿಯೂ ಕಾಣಿಸಲಿಲ್ಲ. ಕೊನೆಯ ಪಂದ್ಯಗಳಲ್ಲಿ ಅಂತೂ ಡೇವಿಡ್ ವಾರ್ನರ್ ಅವರು ಸ್ಟೇಡಿಯಂನಲ್ಲಿ ಹೈದರಾಬಾದ್ ತಂಡದ ಜರ್ಸಿ ತೊಟ್ಟು ಕುಳಿತಿದ್ದರು. ಐಪಿಎಲ್ ನ ಮುಂದಿನ ಹಂಗಾಮಿನಲ್ಲಿ ಬೇರೆ ತಂಡದ ಕಡೆಯಿಂದ ಆಡುತ್ತೇನೆ ಎಂದು ಡೇವಿಡ್ ವಾರ್ನರ್ ಈ ಮೊದಲೇ ಸ್ಪಷ್ಟಪಡಿಸಿದ್ದಾರೆ.