ಯಾರಿಗೆ ಯಾರು ಹೆದರಿದರು? ಅಥವಾ ಹೆದರಿಸಿದರೋ? ಒಂದು ತಿಳಿಯುತ್ತಿಲ್ಲ! ವಿಡಿಯೋ ಮಾತ್ರ ಸಖತ್ ಸೂಪರ್ ಆಗಿದೆ.
ಒಮ್ಮೊಮ್ಮೆ ನಮ್ಮ ಜೊತೆಗೆ ಅಥವಾ ಸುತ್ತ ಮುತ್ತ ಅನೇಕ ವಿಚಿತ್ರ ಪ್ರಸಂಗಗಳು ನಡೆಯುತ್ತವೆ. ಆ ಪ್ರಸಂಗಗಳು ಆಗಾಗ ನೆನಪಿಸಿಕೊಂಡಾಗ ಅಥವಾ ಮೆಲುಕು ಹಾಕುವಾಗ ನಮ್ಮಷ್ಟಕ್ಕೆ ನಮಗೆ ನಗು ಬರುತ್ತದೆ ಅದು ಎಂಥ ನಗು ಎಂದರೆ ತಡೆದುಕೊಳ್ಳುವದು ಸಹ ಅಸಾಧ್ಯವಾಗುತ್ತದೆ.
ಇಂಥ ತುಂಬಾ ವಿಶೇಷ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನಂತರ ಬಹುಶಃ ನಿಮಗೂ ಸಹ ನಗು ತಡೆದುಕೊಳ್ಳಲು ಅಸಾಧ್ಯವಾಗಬಹುದು.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೊಬ್ಬಿದ ಗೂಳಿಯ ಮುಂದೆ ಅದನ್ನೇ ವೀಕ್ಷಿಸುತ್ತಾ ನಿಂತಿದ್ದಾನೆ. ಇದೇ ಸಂದರ್ಭದಲ್ಲಿ ವ್ಯಕ್ತಿಯ ಹಿಂದಿನಿಂದ ಬೇರೊಂದು ಸಖತ್ ಕೊಬ್ಬಿದ ಗೂಳಿ ಬರುತ್ತದೆ. ಆ ಗೂಳಿ ಇವರನ್ನು ಮತ್ತು ಇವರು ಆ ಹಿಂದಿನಿಂದ ಬಂದ ಗೂಳಿಯನ್ನು ವೀಕ್ಷಿಸಲೇ ಇಲ್ಲ. ಹೀಗಾಗಿ ಮೂವರು ಒಟ್ಟಿಗೆ ಹಠಾತ್ ಒಬ್ಬರಿಗೊಬ್ಬರು ನೋಡುತ್ತಾರೆ. ಆನಂತರ ಮಾತ್ರ ಅಲ್ಲಿ ಕಾಣುವ ದೃಶ್ಯವೇ ತುಂಬಾ ಸೂಪರ್ ಆಗಿದೆ. ಅದೇನೆಂದರೆ ಎರಡು ಗೂಳಿಗಳು ಮತ್ತು ವ್ಯಕ್ತಿ ಒಂದೇ ಕ್ಷಣಕ್ಕೆ ಒಬ್ಬರನ್ನೊಬ್ಬರು ನೋಡಿ ಹಠಾತ್ ಬೆಚ್ಚಿ ಬೀಳುತ್ತಾರೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ತಮಾಷೆಯ ವಿಡಿಯೋ ನೋಡಲು ತುಂಬಾ ಮಜವಾಗಿದೆ. ಈ ಕಂಟೆಂಟ್ ನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಅಸಂಖ್ಯೆ ಜನರನ್ನು ನಕ್ಕು ನಗಿಸಿದೆ.