ಯಾರಿವನು? ಬಿಳಿ ಗಡ್ಡ, ತಲೆ ಮೇಲೆ ಪಗಡಿ ಮತ್ತು ರಫ್ ಲುಕ್; ನೆಟ್ಟಿಗರು ಫುಲ್ ಕನ್ಫ್ಯೂಸ್! ತಿಳಿಯುತ್ತಿದ್ದಾರೆ ಈ ನಟ.

ಸೋಶಿಯಲ್ ಮೀಡಿಯಾದಲ್ಲಿ ಹಬ್ಬುವ ಫೋಟೋ ಮತ್ತು ವೀಡಿಯೊಗಳು ವ್ಯಕ್ತಿಗೆ ಅನೇಕ ಸಲ ದಿಗಿಲು ಪಡಿಸುತ್ತವೆ. ಈಗ ಇದೇ ರೀತಿಯ ಒಂದು ಫೋಟೋ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಬಾಲಿವುಡ್ ನಾಯಕ ಅಮಿತಾಭ್ ಬಚ್ಚನ್ ಅವರ ಫೋಟೋ ಎಂದು ತಿಳಿದು ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗುತ್ತಿದ್ದಾರೆ.

ಈ ಫೋಟೋವನ್ನು ಜಗತ್ತಿನ ಹೆಸರಾಂತ Steve McCurry ಎಂಬ ಫೋಟೋಗ್ರಾಫರ್ ಅವರು ತೆಗೆದಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಶೇರ್ ಮಾಡುತ್ತಲೇ ಇಂಟರ್ ನೆಟ್ ನಲ್ಲಿ ವೈರಲ್ ಆಗತೊಡಗಿತು. ಪ್ರಸ್ತುತ ಫೋಟೋ 2018 ರಲ್ಲಿ ಸೆರೆ ಹಿಡಿಯಲಾಗಿತ್ತು. ಈ ಸಖತ್ ಫೋಟೋವನ್ನು ನೆಟ್ಟ ದೃಷ್ಟಿಯಿಂದ ಹಾಗೆಯೇ ನೋಡಬೇಕೆನಿಸುತ್ತೆ.

ಈ ಫೋಟೋದಲ್ಲಿ ಕಾಣುವ ವ್ಯಕ್ತಿ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರೇ ಇದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಫೋಟೋಗ್ರಾಫರ್ ಹೇಳುವ ಪ್ರಕಾರ, ಈ ಫೋಟೋ ಅಫಗಾನ್ ರೆಫ್ಯೂಜಿ (ನಿರಾಶ್ರಿತ) ಒಬ್ಬನದು ಇದೆ ಎಂದು ಹೇಳಲಾಗಿದೆ. ಆದರೆ ನೆಟಿಜನ್ಸ್ ಮಾತ್ರ ಅಮಿತಾಭ್ ಅವರೇ ಇದ್ದಾರೆ ಎಂದು ತಿಳಿಯುತ್ತಿದ್ದಾರೆ.

 

View this post on Instagram

 

A post shared by Steve McCurry (@stevemccurryofficial)

ಈ ವ್ಯಕ್ತಿಯ ಮುಖ ಬಹಳಷ್ಟು ಅಮಿತಾಭ್ ಅವರ ಮುಖಕ್ಕೆ ಹೋಲುತ್ತದೆ. ಹೀಗಾಗಿ ಈ ಚರ್ಚೆಗೆ ರಂಗು ಬಂದಿದೆ. ಕೆಲವರು ಈ ವ್ಯಕ್ತಿಗೆ ಅಮಿತಾಭ್ ಎಂದರೆ ಎನ್ನು ಕೆಲವರು ಅಕ್ಷಯ್ ಕುಮಾರ್ ಎಂದು ಹೇಳುವಲ್ಲಿ ತೊಡಗಿದ್ದಾರೆ. ಇವರು ತಮ್ಮ ಮುಂದಿನ ತೆರೆ ಕಾಣುವ ಚಿತ್ರ ಪ್ರಮೋಷನ್ ಮಾಡೋದು ಇದೇ ರೀತಿಯಲ್ಲಿ ಎಂದು ಇನ್ನೂ ಕೆಲವರು ಮಾತನಾಡುತ್ತಿದ್ದಾರೆ.