ಯಾರು ಟ್ರೋಫಿ ಎತ್ತಿದ್ರೆ ಹೇಗಿರುತ್ತೆ? ಸುದೀಪ್ ನಡೆಸಿರುವ ಚರ್ಚೆಯಲ್ಲಿ ಮನಬಿಚ್ಚಿ ಮಾತನಾಡಿದ ಸ್ಪರ್ಧಿಗಳು!!!

ಬಿಗ್ಬಾಸ್ ಇನ್ನೇನು ಕೇವಲ ಎರಡು ವಾರದ ಆಟ ಮಾತ್ರ ಉಳಿದಿದೆ. ಬರುವ ವಾರ ಫೈನಲ್ಗೆ ಯಾರು ತಲುಪುತ್ತಾರೆ ಎಂಬುದು ತಿಳಿದರೆ ಮುಂದಿನ ಅದರ ಮುಂದಿನ ವಾರ ಬಿಗ್ಬಾಸ್ ವಿನ್ನರ್ ಯಾರು ಅಂತ ಗೊತ್ತಾಗುತ್ತೆ. ಬಿಗ್ಬಾಸ್ ಮನೆಯಲ್ಲಿಯ ಸ್ಪರ್ಧಿಗಳು ಬಿಗ್ಬಾಸ್ ವಿನ್ನರ್ ಆಗುವ ಕನಸು ಕಾಣುತ್ತಿದ್ದಾರೆ. ಇನ್ನೇನು ಒಂದು ವಾರ ಅಷ್ಟೇ ಕಾಯಬೇಕಿದೆ ತದನಂತರ ಒಬ್ಬರ ಕನಸ್ಸು ನನಸಾಗುವದು ಖಂಡಿತ. ಆದರೆ ಈ ಬಿಗ್ಬಾಸ್ ಆಟದಲ್ಲಿ ಯಾವಾಗ ಬೇಕಾದರೂ ಬದಲಾವಣೆ ಮಾಡುವ ಹಕ್ಕು ಬಿಗ್ಬಾಸ್ ಗೆ ಇದೆ. ಹೀಗಾಗಿ ಈ ಆಟ ಹದಿನೈದು ವಾರಕ್ಕೆ ಮುಗಿಯುತ್ತೋ ಅಥವಾ ಮುಂದೆ ಹೋಗುತ್ತೆ ಎಂಬುದು ಕಾಡು ನೋಡಬೇಕಾಗಿದೆ.

ಈ ವಾರ ಅಂದರೆ ಶನಿವಾರ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಈ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಕನಸ್ಸು ಕಾಣುವ ಅಧಿಕಾರ ನೀಡಿದರು. ಅಂದರೆ ಒಂದು ವೇಳೆ ನೀವು ಟ್ರಾಫಿ ಗೆದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಅಂತ ಪ್ರತಿಯೊಬ್ಬ ಸ್ಪರ್ಧಿಗಳಿಗೆ ಸುದೀಪ್ ಅವರು ಕೇಳಿದ್ದರು. ಈ ವಿಚಾರ ವಿಮರ್ಶೆಗೆ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ಮನಸ್ಸಿನಿಂದ ಉತ್ತರ ನೀಡಿದರೊ ಅಥವಾ ಸುಮ್ಮನೆ ತಮಾಷೆಗೆ ಈ ತರಹದ ಪ್ರತಿಕ್ರಿಯೆ ನೀಡಿದರು ಎಂಬುದು ತಿಳಿಯದು. ಆದರೆ ಅವರು ನೀಡಿರುವ ಪ್ರತಿಕ್ರಿಯೆ ಮಾತ್ರ ತುಂಬಾ ಸೂಪರ್ ಆಗಿದೆ.

ಸುದೀಪ್ ಅವರು ತಮಾಷೆಗಾಗಿ ಈ ವಿಚಾರ ವಿಮರ್ಶೆ ನಡೆಸಿದರು. ಈ ವಿಮರ್ಶೆಯಲ್ಲಿ ಎಲ್ಲ ಸ್ಪರ್ಧಿಗಳು ಓಟ್ ಹಾಕಿದ ಅಭಿಮಾನಿಗಳ ಕುರಿತು ಹೊಗಳಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಗಳು ತನಗೆ ಓಟ್ ಮಾಡಿದ ಅಭಿಮಾನಿಗಳನ್ನು ಹೇಗೆ ಹೊಗಳಿದ್ದಾರೆ ಎಂಬುದು ನೀವೇ ವಿಡಿಯೋದಲ್ಲಿ ನೋಡಿ……

ವಿಡಿಯೋ ನೋಡಿ